How To Reduce Salt Content in Food : ಉಪ್ಪಿಲ್ಲದೇ ಹೋದರೆ ಆಹಾರಗಳ ರುಚಿ ಕಡಿಮೆಯಾಗುತ್ತದೆ. ಆದರೆ ಉಪ್ಪು ತಿನ್ನುವುದಕ್ಕೂ ಒಂದು ಮಿತಿ ಇದೆ. ಆ ಮಿತಿಯನ್ನು ಮೀರಿ ಉಪ್ಪು ಸೇವಿಸಿದರೆ ಹಲವು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
How To Reduce Salt Content in Food : ನಾವು ಯಾವಾಗಲೂ ನಮ್ಮ ಆಹಾರದಲ್ಲಿ ರುಚಿಗೆ ಅನುಗುಣವಾಗಿ ಉಪ್ಪನ್ನು ಸೇರಿಸುತ್ತೇವೆ. ಉಪ್ಪಿಲ್ಲದೇ ಹೋದರೆ ಆಹಾರಗಳ ರುಚಿ ಕಡಿಮೆಯಾಗುತ್ತದೆ. ಆದರೆ ಉಪ್ಪು ತಿನ್ನುವುದಕ್ಕೂ ಒಂದು ಮಿತಿ ಇದೆ. ಆ ಮಿತಿಯನ್ನು ಮೀರಿ ಉಪ್ಪು ಸೇವಿಸಿದರೆ ಹಲವು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಉಪ್ಪಿನಲ್ಲಿ ಸೋಡಿಯಂ ಅಂಶವು ಅಧಿಕವಾಗಿರುತ್ತದೆ. ಇದು ಆರೋಗ್ಯಕ್ಕೆ ಹಾನಿಕಾರಕ. ಈ ಕಾರಣದಿಂದ ಉಪ್ಪನ್ನು ಮಿತಿ ಮೀರಿ ಸೇವಿಸಿದರೆ ಅಧಿಕ ರಕ್ತದೊತ್ತಡದಂತಹ ಗಂಭೀರ ಸಮಸ್ಯೆಗಳು ಎದುರಾಗಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
WHO ಅಂದರೆ ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಒಂದು ದಿನದಲ್ಲಿ 2 ಗ್ರಾಂಗಿಂತ ಕಡಿಮೆ ಸೋಡಿಯಂ ಅಥವಾ ಸುಮಾರು 5 ಗ್ರಾಂ ಉಪ್ಪನ್ನು ಸೇವಿಸಬೇಕು. ಇದಕ್ಕಿಂತ ಹೆಚ್ಚು ಸೇವಿಸಿದರೆ, ಹೃದಯಾಘಾತ, ಹೃದಯ ವೈಫಲ್ಯ, ಪರಿಧಮನಿಯ ಕಾಯಿಲೆ ಮತ್ತು ಟ್ರಿಪಲ್ ವೆಸೆಲ್ ಡಿಸೀಸ್ ಮುಂತಾದ ಹೃದ್ರೋಗಗಳು ಕಾಣಿಸಿಕೊಳ್ಳಬಹುದು.
ಹೆಚ್ಚು ಉಪ್ಪನ್ನು ತಿನ್ನುವುದರಿಂದ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ಕಾರಣಕ್ಕೆ ಅಧಿಕ ಉಪ್ಪು ಸೇವನೆಯನ್ನು ಕಡಿಮೆ ಮಾಡಬೇಕು. ಹಾಗಿದ್ದರೆ ಆಹಾರ ಪದಾರ್ಥಗಳ ಉಪ್ಪಿನಂಶವನ್ನು ಹೇಗೆ ಕಡಿಮೆ ಮಾಡುವುದು ಎಂದು ತಿಳಿಯೋಣ.
ಇಂದಿನ ಧಾವಂತದ ಬದುಕಿನಲ್ಲಿ ಪ್ಯಾಕ್ಡ್ ಫುಡ್ ತಿನ್ನುವ ಅಥವಾ ಹೊರಗಡೆ ತಿನ್ನುವ ಟ್ರೆಂಡ್ ಹೆಚ್ಚಾಗಿದೆ. ಇದರಲ್ಲಿ ಉಪ್ಪನ್ನು ಪ್ರಿಸರ್ವೇಟಿವ್ ಆಗಿ ಸೇರಿಸಿದರೆ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ಕಾರಣದಿಂದಲೇ ತಾಜಾ ಹಣ್ಣುಗಳು, ತರಕಾರಿಗಳನ್ನು ತಿನ್ನಬೇಕು.
ಪ್ಯಾಕ್ ಮಾಡಿದ ಆಹಾರವನ್ನು ಸೇವಿಸಬೇಕಾದರೆ, ಪ್ಯಾಕೆಟ್‌ನಲ್ಲಿರುವ ಪದಾರ್ಥಗಳನ್ನು ಚೆಕ್ ಮಾಡಿಕೊಳ್ಳಿ. ಅದರಲ್ಲಿರುವ ಉಪ್ಪಿನ ಪ್ರಮಾಣವನ್ನು ನೋಡಿಕೊಳ್ಳಿ. ಸಾಮಾನ್ಯವಾಗಿ, ಚಿಪ್ಸ್, ಬಿಸ್ಕತ್ತುಗಳು ಮತ್ತು ತಂಪು ಪಾನೀಯಗಳಲ್ಲಿ ಸೋಡಿಯಂ ಅಂಶವು ತುಂಬಾ ಹೆಚ್ಚಾಗಿರುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ
ಹಲವಾರು ದಿನಗಳವರೆಗೆ ರೆಫ್ರಿಜರೇಟರ್ ನಲ್ಲಿ ಆಹಾರವನ್ನು ಸಂಗ್ರಹಿಸಿದರೆ, ಅದು ಆಹಾರದಲ್ಲಿನ ಸೋಡಿಯಂ ಅಂಶವನ್ನು ಹೆಚ್ಚಿಸುತ್ತದೆ. ರೆಫ್ರಿಜಿರೇಟರ್ ನಲ್ಲಿ ಆಹಾರ ಪದಾರ್ಥಗಳನ್ನು ಒಂದು ದಿನಕ್ಕಿಂತ ಹೆಚ್ಚು ಕಾಲ ಇರಿಸದಿರಲು ಪ್ರಯತ್ನಿಸಿ. ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)