Ringworm Treatment: ದದ್ದು, ತುರಿಕೆ ಮತ್ತು ರಿಂಗ್ವರ್ಮ್ ನಿಂದ ಪರಿಹಾರ ಪಡೆಯುವುದು ಹೇಗೆ?

Ringworm Cure - ದದ್ದು, ತುರಿಕೆ ಹಾಗೂ ರಿಂಗ್ವರ್ಮ್ ಗಳಂತಹ ಸಮಸ್ಯೆಗಳು ಒಂದೊಮ್ಮೆ ಎದುರಾದರೆ, ಅವು ನಮ್ಮ ಅಕ್ಕಪಕ್ಕದಲ್ಲಿರುವವರಿಗೂ ಕೂಡ ಹರಡುವ ಅಪಾಯವಿರುತ್ತದೆ. ಹಾಗೆ ನೋಡಿದರೆ, ಈ ಸಮಸ್ಯೆಗಳು ಫಂಗಲ್ ಕಾಯಿಲೆಗಳಾಗಿವೆ.

Ringworm Cure - ದದ್ದು, ತುರಿಕೆ ಹಾಗೂ ರಿಂಗ್ವರ್ಮ್ ಗಳಂತಹ ಸಮಸ್ಯೆಗಳು ಒಂದೊಮ್ಮೆ ಎದುರಾದರೆ, ಅವು ನಮ್ಮ ಅಕ್ಕಪಕ್ಕದಲ್ಲಿರುವವರಿಗೂ ಕೂಡ ಹರಡುವ ಅಪಾಯವಿರುತ್ತದೆ. ಹಾಗೆ ನೋಡಿದರೆ, ಈ ಸಮಸ್ಯೆಗಳು ಫಂಗಲ್ ಕಾಯಿಲೆಗಳಾಗಿವೆ. ಇವು ದೇಹದ ಯಾವುದೇ ಭಾಗದಲ್ಲಿ ಉಂಟಾಗುವ ಸಾಧ್ಯತೆ ಇರುತ್ತದೆ. ಪದೇ ಪದೇ ತುರಿಕೆ ಮಾಡಿಕೊಳ್ಳುವುದರಿಂದ ತ್ವಚೆ ಕೆಂಪಾಗುತ್ತದೆ. ಈ ಸಮಸ್ಯೆಗೆ ಪರಿಹಾರ ನಿಮ್ಮ ಮನೆಯಲ್ಲಿಯೇ ಇದೆ. ಆ ಪರಿಹಾರಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,

 

ಇದನ್ನೂ ಓದಿ-Omicron ಹೊಸ ರೂಪಾಂತರಿಗಳು ಸಂಕಷ್ಟ ಹೆಚ್ಚಿಸಲಿವೆ, ಅಪಾಯಕಾರಿ ಸಾಬೀತಾಗಬಹುದು 4ನೆ ಅಲೆ

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ಕೊಬ್ಬರಿ ಎಣ್ಣೆ - ಕೊಬ್ಬರಿ ಎಣ್ಣೆ ಹಲವು ರೋಗಗಳಿಗೆ ರಾಮಬಾಣ ಔಷಧಿಯಾಗಿದೆ. ಕೊಬ್ಬರಿ ಎಣ್ಣೆಯನ್ನು ಲೆಮನ್ ಗ್ರಾಸ್ ಹಾಗೂ ಎಳ್ಳೆಣ್ಣೆಯೊಂದಿಗೆ ಬೆರೆಸಿ ಈ ಪೇಸ್ಟ್ ಅನ್ನು ತುರಿಕೆ ಇರುವ ಭಾಗಕ್ಕೆ ಅನ್ವಯಿಸಿ. ಇದರಿಂದ ಸಮಸ್ಯೆ ಬೇಗ ನಿವಾರಣೆಯಾಗುತ್ತದೆ. ಆರೋಗ್ಯ ತಜ್ಞರು ಕೂಡ ಇದರ ಸಲಹೆ ನೀಡುತ್ತಾರೆ.

2 /5

2. ಬೇವಿನ ಎಲೆ - ಬೇವಿನ ಎಲೆಯ ಔಷಧೀಯ ಗುಣಗಳ ಕುರಿತು ನಮ್ಮೆಲ್ಲರಿಗೂ ತಿಳಿದೇ ಇದೆ. ದದ್ದು, ತುರಿಕೆ ಹಾಗೂ ರಿಂಗ್ವರ್ಮ್ ಗಳ ಚಿಕಿತ್ಸೆಗೆ ಬೇವಿನ ಎಲೆ ರಾಮಬಾಣ ಔಷಧಿಯಾಗಿದೆ. ಬೇವಿನ ಎಲೆಗಳ ಪೇಸ್ಟ್ ತಯಾರಿಸಿ ತುರಿಕೆ ಇರುವ ಜಾಗಕ್ಕೆ ಅನ್ವಯಿಸಿ. ಈ ಎಲೆಗಳಲ್ಲಿ ಫಂಗಸ್ ಅನ್ನು ಹೊಡೆದೋಡಿಸುವ ಶಕ್ತಿ ಇದೆ. 

3 /5

3. ಅರಿಶಿಣ - ತ್ವಚೆಗೆ ಸಂಬಂಧಿಸಿದ ಹಲವು ಕಾಯಿಲೆಗಳಿಗೆ ಅರಿಶಿಣ ರಾಮಬಾಣ ಉಪಾಯವಾಗಿದೆ. ಅರಿಶಿಣದ ತುಣುಕುಗಳನ್ನು ನೀರಿನಲ್ಲಿ ಬೆರೆಸಿ ಅದರ ಪೇಸ್ಟ್ ತಯಾರಿಸಿಕೊಳ್ಳಿ ಹಾಗೂ ಈ ಪೇಸ್ಟ್ ಅನ್ನು ತುರಿಕೆ ಇರುವ ಭಾಗಕ್ಕೆ ಹಚ್ಚಿ. ಅದು ಒಣಗಿದ ಬಳಿಕ ಮತ್ತೊಮ್ಮೆ ಪೇಸ್ಟ್ ಅನ್ವಯಿಸಿ. ಕೆಲವು ದಿನಗಳವರೆಗೆ ಈ ಉಪಾಯವನ್ನು ನಿರಂತರವಾಗಿ ಅನುಸರಿಸಿದರೆ ದದ್ದು, ತುರಿಕೆ ಮಾಯವಾಗುತ್ತವೆ. 

4 /5

4. ನೆಲವರಿಕೆ ಅಥವಾ ಸ್ವರ್ಣಪತ್ರ - ಇಂಡಿಯನ್ ಸೆನ್ನಾ ಅಥವಾ ನೆಲವರಿಕೆ ಅಥವಾ ಸ್ವರ್ಣಪತ್ರಗಳನ್ನು ಪುಡಿ ಮಾಡಿ, ಅದರಿಂದ ಆಯಿಂಟ್ಮೆಂಟ್ ತಯಾರಿಸಿ. ಅದನ್ನು ದದ್ದು, ತುರಿಕೆ ಇತ್ಯಾದಿ ಚರ್ಮ ಸಮಸ್ಯೆ ಇರುವ ಭಾಗಕ್ಕೆ ಅನ್ವಯಿಸಿ. ಇದರಿಂದ ತಕ್ಷಣ ಪರಿಹಾರ ಸಿಗಲಿದೆ.

5 /5

5. ಚಂಡು ಹೂವು - ಮದುವೆ ಸಮಾರಂಭ, ಔತಣಕೂಟಗಳ ಸೌಂದರ್ಯ ಹೆಚ್ಚಿಸಲು ಚೆಂಡು ಹೂವನ್ನು ಸಾಮಾನ್ಯವಾಗಿ ಬಳಕೆ ಮಾಡಲಾಗುತ್ತದೆ. ಆದರೆ, ಈ ಹೂವು ದದ್ದು, ತುರಿಕೆ ಇತ್ಯಾದಿಗಳ ನಿವಾರಣೆಗೆ ಬಳಸಬಹುದು ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಹೌದು, ಈ ಸುಂದರ ಹೂವುಗಳಲ್ಲಿ ಆಂಟಿಅಲರ್ಜಿ, ಆಂಟಿಫಂಗಲ್ ಗುಣಗಳಿದ್ದು, ಇವು ತುರಿಕೆಯಿಂದ ಪರಿಹಾರ ಒದಗಿಸುತ್ತವೆ.