IND vs AUS : ಕಾರ್ತಿಕ್ ಬೌಂಡರಿ ಸಿಡಿಸಿದ್ದಕ್ಕೆ ಹೀಗಿತ್ತು ರೋಹಿತ್ ಪ್ರತಿಕ್ರಿಯೆ!

ನೆಟ್ಟಿಗರು ಈ ಫೋಟೋಗೆ ವಿಭಿನ್ನ ಟೈಟಲ್ ನೀಡಿ ಶೇರ್ ಮಾಡುತ್ತಿದ್ದಾರೆ.

IND vs AUS 2nd T20I : ಭಾರತೀಯ ನಾಯಕ ರೋಹಿತ್ ಶರ್ಮಾ ಅವರು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಅವರ ಕುತ್ತಿಗೆಯನ್ನು ಹಿಡಿದಿರುವ ಫೋಟೋ ಒಂದು ವೈರಲ್ ಆಗಿದೆ. ನೆಟ್ಟಿಗರು ಈ ಫೋಟೋಗೆ ವಿಭಿನ್ನ ಟೈಟಲ್ ನೀಡಿ ಶೇರ್ ಮಾಡುತ್ತಿದ್ದಾರೆ.

1 /5

ನಾಗ್ಪುರ ಟಿ20ಯಲ್ಲಿ ಭಾರತ ಗೆಲುವು : ನಾಗ್ಪುರದಲ್ಲಿ ನಡೆದ ಸರಣಿಯ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು ಆರು ವಿಕೆಟ್‌ಗಳಿಂದ ಸೋಲಿಸಿದೆ. ಮಳೆ ನಿಂತ ಮೇಲೆ ಪಂದ್ಯ ಆರಂಭವಾಯಿತು. ಆಸ್ಟ್ರೇಲಿಯಾ 8 ಓವರ್‌ಗಳಲ್ಲಿ ಐದು ವಿಕೆಟ್‌ಗೆ 90 ರನ್ ಗಳಿಸಿತು. ಇದಾದ ಬಳಿಕ ಭಾರತ ತಂಡ 7.2 ಓವರ್‌ಗಳಲ್ಲಿ ಗುರಿ ತಲುಪಿತು. ಈ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಮತ್ತು ರಿಷಬ್ ಪಂತ್ ಇಬ್ಬರಿಗೂ ಅವಕಾಶ ನೀಡಲಾಗಿತ್ತು.

2 /5

ಟೀಂ ಇಂಡಿಯಾಗೆ ಗೆಲುವಿಗೆ ಕಾರ್ತಿಕ್ 4 ಬೌಂಡರಿ : ಈ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ 4 ಬೌಂಡರಿ ಸಿಡಿಸಿದರು. ಡೇನಿಯಲ್ ಸ್ಯಾಮ್ಸ್ ಅವರ ಇನ್ನಿಂಗ್ಸ್‌ನ 8ನೇ (ಪಂದ್ಯದ ಪ್ರಕಾರ ಕೊನೆಯ) ಮೊದಲ ಎಸೆತದಲ್ಲಿ ಅವರು ಅದ್ಭುತ ಸಿಕ್ಸರ್ ಬಾರಿಸಿದರು. ನಂತರ ಮುಂದಿನ ಬಾಲ್ ಡೀಪ್ ಮಿಡ್ ವಿಕೆಟ್‌ನಲ್ಲಿ ಆಡಿದ ಅವರು ಗೆಲುವು ತಂದುಕೊಟ್ಟರು.

3 /5

ರೋಹಿತ್ ತಬ್ಬಿಕೊಂಡ ಕಾರ್ತಿಕ್ : ದಿನೇಶ್ ಕಾರ್ತಿಕ್ ಗೆಲುವಿನ ಬೌಂಡರಿ ಬಾರಿಸುತ್ತಿದ್ದಂತೆ, ಇನ್ನೊಂದು ತುದಿಯಲ್ಲಿದ್ದ ನಾಯಕ ರೋಹಿತ್ ಶರ್ಮಾ ಓಡಿ ಹೋಗಿ ಅವರನ್ನು ತಬ್ಬಿಕೊಂಡರು. ಈ ವಿಡಿಯೋವನ್ನು ಬಿಸಿಸಿಐ ಕೂಡ ಶೇರ್ ಮಾಡಿಕೊಂಡಿದೆ.

4 /5

ಕಾರ್ತಿಕ್ ಗಂಟಲು ಹಿಡಿದ ರೋಹಿತ್ ವಿಡಿಯೋ : ಕಳೆದ ಪಂದ್ಯದ ವೇಳೆ ರೋಹಿತ್ ಶರ್ಮಾ ಅವರ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ವೀಡಿಯೋದಲ್ಲಿ ರೋಹಿತ್ ಶರ್ಮಾ ವಿಕೆಟ್ ಕೀಪರ್ ಹಾಗೂ ಹಿರಿಯ ಆಟಗಾರ ದಿನೇಶ್ ಕಾರ್ತಿಕ್ ಅವರ ಗಂಟಲು ಹಿಡಿದಿರುವುದು ಹಿಡಿದಿದ್ದಾರೆ. ಈ ವೀಡಿಯೋ ಕೂಡ ತಮಾಷೆಯಾಗಿ ಕಂಡುಬಂದರೂ, ಇದನ್ನು ಹಲವು ಬಳಕೆದಾರರು ವಿಭಿನ್ನ ಟೈಟಲ್ ನಿಂದ ಹಂಚಿಕೊಂಡಿದ್ದಾರೆ.

5 /5

ಪಂದ್ಯ ಶ್ರೇಷ್ಠ ಆಟಗಾರ ರೋಹಿತ್ ಶರ್ಮಾ : ನಾಗ್ಪುರದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬಿರುಸಿನ ಬ್ಯಾಟಿಂಗ್ ನಡೆಸಿದರು. ಅವರು 46 ರನ್ ಗಳಿಸಿ ಗೆಲುವಿನ ನಂತರ ಅಜೇಯರಾಗಿ ಮರಳಿದರು. ರೋಹಿತ್ 20 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಸಿಕ್ಸರ್‌ಗಳನ್ನು ಬಾರಿಸಿದರು. ಅವರು ಪಂದ್ಯದ ಆಟಗಾರ ಪ್ರಶಸ್ತಿ ಪಡೆದರು. ಸ್ಪಿನ್ನರ್ ಅಕ್ಷರ್ ಪಟೇಲ್ ಎರಡು ವಿಕೆಟ್ ಪಡೆದರು.