PICS : ಗುರುವಿಗೆ ಅಂತಿಮ ವಿದಾಯ ಹೇಳಿದ ಸಚಿನ್ ತಂಡೂಲ್ಕರ್!

ಭಾರತಕ್ಕೆ ಸಚಿನ್ ತೆಂಡೂಲ್ಕರ್ ನಂತ ಮಾಣಿಕ್ಯವನ್ನು ಸೃಷ್ಟಿಸಿ ಕೊಟ್ಟ ಕ್ರಿಕೆಟ್ ಕೋಚ್ ರಮಾಕಾಂತ್ ಅಚ್ರೇಕರ್ ಬುಧವಾರ ಮುಂಬೈನಲ್ಲಿ ಇಹಲೋಕ ತ್ಯಜಿಸಿದರು.
 

  • Jan 03, 2019, 16:21 PM IST

ರಮಾಕಾಂತ್ ಅಚ್ರೇಕರ್ 1932 ರಲ್ಲಿ ಜನಿಸಿದರು. ಸಚಿನ್ ತೆಂಡೂಲ್ಕರ್ ಶ್ರೇಷ್ಠ ಕ್ರಿಕೆಟಿಗನಾಗುವಲ್ಲಿ ಅಚ್ರೇಕರ್ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಮುಂಬೈಯ ಶಿವಾಜಿ ಪಾರ್ಕ್ನಲ್ಲಿ ಯುವ ಕ್ರಿಕೆಟಿಗರ ತರಬೇತಿಗೆ ಅವರು ಅತ್ಯಂತ ಪ್ರಸಿದ್ಧರಾಗಿದ್ದಾರೆ. ಅಚ್ರೇಕರ್ ಭಾರತೀಯ ಕ್ರಿಕೆಟ್ಗೆ ಅನೇಕ ಶ್ರೇಷ್ಠ ಬ್ಯಾಟ್ಸ್ಮನ್ಗಳು ಮತ್ತು ಬೌಲರ್ಗಳನ್ನು ನೀಡಿದ್ದಾರೆ. 

1 /5

2 /5

ಸಚಿನ್ ತೆಂಡೂಲ್ಕರ್ ಅವರ ಕ್ರಿಕೆಟ್ ಜೀವನದಲ್ಲಿ ಮಹತ್ವದ ಪಾತ್ರ ವಹಿಸಿದ್ದ ರಮಾಕಾಂತ್ ಅವರು, ಬಾಲ್ಯದಲ್ಲಿಯೇ ಕ್ರಿಕೆಟ್ ಬಗ್ಗೆ ಸೂಕ್ತ ಅಡಿಪಾಯ ಹಾಕಿ, ಹಲವು ತಂತ್ರಗಳನ್ನು ಸಚಿನ್ ಗೆ ಕರಗತ ಮಾಡಿದ್ದರು. ಹೀಗಾಗಿಯೇ ತೆಂಡೂಲ್ಕರ್ ಕ್ರಿಕೆಟ್ ಚರಿತ್ರೆಯಲ್ಲಿ ಓರ್ವ ಶ್ರೇಷ್ಠ ಆಟಗಾರನಾಗಿ ಬೆಳೆದರು ಎಂದರೂ ತಪ್ಪಾಗಲಾರದು.

3 /5

ಅಚ್ರೇಕರ್ ಅವರು ಕ್ರಿಕೆಟ್ ಕೋಚ್ ಆಗಿ ಸಲ್ಲಿಸಿದ ಅನುಪಮ ಸೇವೆಗೆ 1990ರಲ್ಲಿ ದ್ರೋಣಾಚಾರ್ಯ ಪ್ರಶಸ್ತಿ, 2010ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಭಾರತ ಸರ್ಕಾರ ಗೌರವಿಸಿದೆ.

4 /5

ರಮಾಕಾಂತ್ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿರುವ ಬಿಸಿಸಿಐ, "ರಮಾಕಾಂತ್ ಅವರು ಕೇವಲ ಶ್ರೇಷ್ಠ ಕ್ರಿಕೆಟ್ ಆಟಗಾರರನ್ನು ನೀಡಲಿಲ್ಲ, ಅವರನ್ನು ಉತ್ತಮ ಮನುಷ್ಯರನ್ನಾಗಿ ರೂಪಿಸಿದರು. ಭಾರತಿಯ ಕ್ರಿಕೆಟ್ ಗೆ ಅವರ ಕೊಡಗೆ ಅಪಾರವಾದುದು" ಎಂದು ಟ್ವೀಟ್ ಮಾಡಿದೆ. 

5 /5