ದೇಶಾದ್ಯಂತ ಹೆಚ್ಚುತ್ತಿರುವ ಎಟಿಎಂ ವಂಚನೆ (ಎಸ್‌ಬಿಐ ಎಟಿಎಂ) ತಡೆಗಟ್ಟುವ ಉದ್ದೇಶದಿಂದ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂಗಳಿಂದ ಹಣವನ್ನು ಹಿಂಪಡೆಯುವ ನಿಯಮಗಳನ್ನು ಬದಲಾಯಿಸಿದೆ. ಹಾಗಾಗಿ ಗ್ರಾಹಕರು ATMನಿಂದ ಹಣವನ್ನು ಹಿಂಪಡೆಯಲು ಒಟಿಪಿ ನಮೂದಿಸುವುದು ಆವಶ್ಯಕವಾಗಿದೆ. ಅಂದರೆ, ಒಟಿಪಿ (ಎಸ್‌ಬಿಐ ಒಟಿಪಿ ಆಧಾರಿತ ಎಟಿಎಂ ಹಿಂತೆಗೆದುಕೊಳ್ಳುವಿಕೆ) ಇಲ್ಲದೆ ನಿಮಗೆ ಹಣವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ.
ಬ್ಯಾಂಕಿನ ಈ ನಿಯಮ ಬದಲಾವಣೆಯಿಂದ ಇನ್ಮುಂದೆ ಗ್ರಾಹಕರು ಒಟಿಪಿ ಇಲ್ಲದೆ ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 8 ರವರೆಗೆ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ. ಆದರೆ, ದಿನದ ಅವಧಿಯಲ್ಲಿ ಅಂದರೆ ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ನೀವು ಮೊದಲಿನಂತೆ ಹಣವನ್ನು ಹಿಂಪಡೆಯಬಹುದಾಗಿದೆ. ಜನವರಿ 1, 2020 ರಿಂದ ಬ್ಯಾಂಕ್ ತನ್ನ ಗ್ರಾಹಕರಿಗೆ ಈ ಸೌಲಭ್ಯವನ್ನು ಪ್ರಾರಂಭಿಸಿತ್ತು.
ನೀವು ಹತ್ತು ಸಾವಿರ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಹಿಂದಕ್ಕೆ ಪಡೆಯಲು ನಿಮಗೆ ಒಟಿಪಿ ಅಗತ್ಯವಿದೆ. ಒಟಿಪಿ ಇಲ್ಲದೆ 10 ಸಾವಿರ ಅಥವಾ ಹೆಚ್ಚಿನ ಹಣವನ್ನು ನೀವು ಹಿಂಪಡೆಯಲು ಸಾಧ್ಯವಿಲ್ಲ.
ಆದರೆ, ಈ ಸೌಕರ್ಯ SBIನ ATMಗಳಲ್ಲಿ ಮಾತ್ರ ಲಭ್ಯವಿರಲಿದೆ. ಒಂದು ವೇಳೆ ನೀವು SBI ಗ್ರಾಹಕರಾಗಿದ್ದು,, ಯಾವುದೇ ಬೇರೆ ಬ್ಯಾಂಕ್ ATMನಿಂದ ನೀವು ಹಣ ಹಿಂಪಡೆಯಲು ಬಯಸುತ್ತಿದ್ದರೆ, ಈ ಸೌಕರ್ಯದ ಲಾಭ ನಿಮಗೆ ಸಿಗುವುದಿಲ್ಲ. ಏಕೆಂದರೆ ಈ ವೈಶಿಷ್ಟ್ಯವನ್ನು ನ್ಯಾಷನಲ್ ಫೈನಾನ್ಸಿಯಲ್ ಸ್ವಿಚ್ ಅಂದರೆ NFS ನಲ್ಲಿ ಅಭಿವೃದ್ಧಿಗೊಳಿಸಲಾಗಿಲ್ಲ. NSF ದೇಶದ ಅತಿ ದೊಡ್ಡ ಇನ್ತೆರ್ಪೋರ್ಟೇಬಲ್ ATM ನೆಟ್ವರ್ಕ್ ಆಗಿದೆ.
ಇದಕ್ಕೆ ಸಂಬಂಧಿಸಿಂತೆ ಟ್ವೀಟ್ ಮಾಡಿದ್ದ ಭಾರತೀಯ ಸ್ಟೇಟ್ ಬ್ಯಾಂಕ್ 'OTP ಆಧಾರಿದ ಕ್ಯಾಶ್ ವಿಥ್ ಡ್ರಾವಲ್ ಸಿಸ್ಟಂ ಅನ್ನು ಜನವರಿ 1, 2020ರಿಂದ ಜಾರಿಗೆ ತರಲಾಗಿದೆ. ಒಂದು ವೇಳೆ ನೀವು ರಾತ್ರಿ 8 ಗಂಟೆಯಿಂದ ಬೆಳಗ್ಗೆ 8 ಗಂಟೆಯ ಒಳಗೆ SBI ATMಗಳಿಂದ ಹಣವನ್ನು ಹಿಂಪಡೆದರೆ, ಈ ಸೌಕರ್ಯದ ಅಡಿ ನೀವು ಸಂಭವನೀಯ ಫ್ರಾಡ್ ಗಳಿಂದ ಬಚಾವಾಗಬಹುದು ಎಂದು ಹೇಳಿತ್ತು.
ಈ ಸೌಕರ್ಯ ಬಳಸಲು ಮತ್ತು ಹಣ ವಿಥ್ ಡ್ರಾ ಮಾಡಲು ಗ್ರಾಹಕರು ತಮ್ಮ PIN ಸಂಖ್ಯೆಯ ಜೊತೆಗೆ OTP ನಮೂದಿಸಬೇಕಾಗಲಿದೆ. ಈ OTP ನಿಮ್ಮ ಅಧಿಕೃತ ಮೊಬೈಲ್ ಸಂಖ್ಯೆಗೆ ಮಾತ್ರ ಬರಲಿದೆ. ಗ್ರಾಹಕರ ಹಣಕಾಸಿನ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂದು ಭಾರತೀಯ ಸ್ಟೇಟ್ ಬ್ಯಾಂಕ್ ಈ ಸೌಕರ್ಯ ಒದಗಿಸಿದೆ.