Way of Worship: ನಂದಿಯಲ್ಲಿ ಕಿವಿಯಲ್ಲಿ ಹೇಳಿದ ಗುಟ್ಟು ಈಡೇರುತ್ತಾ?

ಶಿವನಿಗೆ ಅತ್ಯಂತ ಪ್ರಿಯವಾದ ಗಣಗಳಲ್ಲಿ ನಂದಿಯೂ ಸೇರಿದೆ. ಅವರನ್ನು ಕೈಲಾಸ ಪರ್ವತದ ದ್ವಾರಪಾಲಕ ಎಂದೂ ಪರಿಗಣಿಸಲಾಗಿದೆ. ಯಾವುದೇ ಶಿವ ದೇವಾಲಯದಲ್ಲಿ, ನಂದಿ ಪ್ರತಿಮೆ ಇದ್ದೇ ಇರುತ್ತದೆ. 

ಅದು ಸಹ ಶಿವನ ಮುಂಭಾಗದಲ್ಲಿ ನಂದಿ ಪ್ರತಿಮೆ ಸ್ಥಾಪಿಸುವುದು ರೂಢಿ ಮತ್ತು ಪದ್ಧತಿ. ನಂದಿಯ ಮೂಲಕ ಯಾವುದೇ ಆಶಯವನ್ನು ಹೇಳಿದರೆ, ಶಿವನು ಖಂಡಿತವಾಗಿಯೂ ಅದನ್ನು ಪೂರೈಸುತ್ತಾನೆ ಎಂದು ನಂಬಲಾಗಿದೆ

1 /5

 ಯಾವುದೇ ಇಚ್ಛೆಯನ್ನು ಹೇಳುವ ಮೊದಲು ನಂದಿಯನ್ನು ಆರಾಧಿಸಿ. ನಿಮ್ಮ ಇಚ್ಛೆಯನ್ನು ನಂದಿಯ ಎಡ ಕಿವಿಯಲ್ಲಿ ಹೇಳಿದರೆ ಅದು ಈಡೇರುತ್ತದೆ ಎಂದು ಹೇಳಲಾಗುತ್ತದೆ. ನಿಮ್ಮ ಆಶಯವನ್ನು ಹೇಳುವಾಗ, ನಿಮ್ಮ ಕೈಗಳಿಂದ ನಿಮ್ಮ ತುಟಿಗಳನ್ನು ಮುಚ್ಚಿ. ಇನ್ನು ನಂದಿಯ ಕಿವಿಯಲ್ಲಿ ಯಾರಿಗೂ ಕೆಟ್ಟದ್ದನ್ನು ಹೇಳಬೇಡಿ. ಇದರಿಂದ ನೀವು ನಂದಿ ಮತ್ತು ಶಿವನ ಕೋಪಕ್ಕೆ ಗುರಿಯಾಗುವ ಸಾಧ್ಯತೆಯಿದೆ. ನಂದಿಯ ಮುಂದೆ ನಿಮ್ಮ ಇಷ್ಟಾರ್ಥಗಳನ್ನು ಹೇಳಿದ ನಂತರ, ಅವನಿಗೆ ಏನನ್ನಾದರೂ ಅರ್ಪಿಸಿ. 

2 /5

ಶಾಸ್ತ್ರಗಳ ಪ್ರಕಾರ, ಶಿವನು ಯಾವಾಗಲೂ ತನ್ನ ತಪಸ್ಸಿನಲ್ಲಿ ಇರುತ್ತಾನೆ. ನಂದಿಯು ಶಿವನ ತಪಸ್ಸಿಗೆ ತೊಂದರೆಯಾಗದಂತೆ ಕಾವಲಿರುತ್ತಾನೆ. ಇಂತಹ ಸಂದರ್ಭದಲ್ಲಿ ಶಿವನ ದರ್ಶನಕ್ಕೆ ಬಂದ ಭಕ್ತರು ನಂದಿಯ ಕಿವಿಯಲ್ಲಿ ತಮ್ಮ ಇಷ್ಟಾರ್ಥಗಳನ್ನು ಹೇಳಿಕೊಂಡು ತೆರಳುತ್ತಿದ್ದರು. ನಂದಿಯ ಕಿವಿಯಿಂದ ಕೇಳಿದ ಮಾತು ಶಿವನಿಗೆ ಹೋಗುತ್ತಿತ್ತು. ಹಾಗಾಗಿಯೇ ನಂದಿಯ ಕಿವಿಯಲ್ಲಿ ತನ್ನ ಆಸೆಯನ್ನು ತಿಳಿಸುವ ಪದ್ಧತಿಯು ಶುರುವಾಯಿತು ಎನ್ನಲಾಗಿದೆ.   

3 /5

ಶಿವನನ್ನು ಪೂಜಿಸಿದ ನಂತರ ನಂದಿಯ ಮುಂದೆ ದೀಪವನ್ನು ಹಚ್ಚಬೇಕು. ಇದಾದ ನಂತರ ನಂದಿ ಮಹಾರಾಜನಿಗೆ ಆರತಿ ಮಾಡಬೇಕು. ಆ ಬಳಿಕ ಯಾರೊಂದಿಗೂ ಏನನ್ನೂ ಹೇಳದೆ, ನಂದಿಯ ಕಿವಿಯಲ್ಲಿ ನಿಮ್ಮ ಆಸೆಗಳನ್ನು ಹೇಳಿ.  

4 /5

ಶಾಸ್ತ್ರಗಳ ಪ್ರಕಾರ, ಶಿವನನ್ನು ಪೂಜಿಸಿದ ನಂತರ, ನಂದಿಯನ್ನು ಪೂಜಿಸಬೇಕು. ಒಂದು ವೇಳೆ ನಂದಿಗೆ ಪೂಜೆ ಸಲ್ಲಿಸದೆ ಮನೆಗೆ ಬಂದರೆ ಶಿವಲಿಂಗವನ್ನು ಪೂಜಿಸಿದ ಪೂರ್ಣ ಪುಣ್ಯವು ಸಿಗುವುದಿಲ್ಲ.

5 /5

ಸಾಮಾನ್ಯವಾಗಿ ಜನರು ನಂದಿಯ ಕಿವಿಯಲ್ಲಿ ತಮ್ಮ ಇಷ್ಟಾರ್ಥಗಳನ್ನು ಹೇಳಿಕೊಳ್ಳುತ್ತಾರೆ. ನಂದಿಯ ಕಿವಿಯಲ್ಲಿ ತನ್ನ ಇಷ್ಟಾರ್ಥವನ್ನು ಹೇಳಿದರೆ ತನ್ನ ಇಷ್ಟಾರ್ಥಗಳು ಈಡೇರುತ್ತವೆ ಎಂಬುದು ನಂಬಿಕೆ.