Shravan 2022: ಶ್ರಾವಣ ಮಾಸದಲ್ಲಿ ಕನಸಿನಲ್ಲಿ ಈ 4 ಸಂಗತಿಗಳು ಕಾಣಿಸುವುದು ಅತ್ಯಂತ ಶುಭಕರ, ಯಾವುದರ ಸಂಕೇತ ಇಲ್ಲಿ ತಿಳಿದುಕೊಳ್ಳಿ

Dreams That Bring Fortune In Shravan Month 2022-ಶ್ರಾವಣ ಮಾಸದಲ್ಲಿ ಶಿವನನ್ನು ಒಲಿಸಿಕೊಳ್ಳಲು ಶಿವಾಲಯಗಳಲ್ಲಿ ಭಕ್ತರ ದಂಡೆ ಹರಿದುಬರುತ್ತದೆ. ಶಿವಭಕ್ತರು ಮಹಾದೇವನಿಗೆ ಜಲಾಭಿಷೇಕ, ರುದ್ರಾಭಿಷೇಕ ನಡೆಸುತ್ತಾರೆ ಮತ್ತು ಮಂತ್ರವನ್ನು ಪಠಿಸುವ ಸಂಪೂರ್ಣ ಭಕ್ತಿ ಭಾವದ ಮೂಲಕ ಶಿವನನ್ನು ಪೂಜಿಸುತ್ತಾರೆ.

Dreams That Bring Fortune In Shravan Month 2022 - ಶ್ರಾವಣ ಮಾಸದಲ್ಲಿ ಶಿವನನ್ನು ಒಲಿಸಿಕೊಳ್ಳಲು ಶಿವಾಲಯಗಳಲ್ಲಿ ಭಕ್ತರ ದಂಡೆ ಹರಿದುಬರುತ್ತದೆ. ಶಿವಭಕ್ತರು ಮಹಾದೇವನಿಗೆ ಜಲಾಭಿಷೇಕ, ರುದ್ರಾಭಿಷೇಕ ನಡೆಸುತ್ತಾರೆ ಮತ್ತು ಮಂತ್ರವನ್ನು ಪಠಿಸುವ ಸಂಪೂರ್ಣ ಭಕ್ತಿ ಭಾವದ ಮೂಲಕ ಶಿವನನ್ನು ಪೂಜಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶ್ರಾವಣ ಮಾಸದಲ್ಲಿ ಕನಸಿನಲ್ಲಿ ಶಿವನಿಗೆ ಸಂಬಂಧಿಸಿದ ಕೆಲ ವಸ್ತುಗಳು ಕಂಡುಬಂದರೆ, ದೇವಾದಿದೇವ ಮಹಾದೇವನ ವಿಶೇಷ ಆಶೀರ್ವಾದ ನಮ್ಮ ಮೇಲಿರುತ್ತದೆ ಎಂದು ಹೇಳಲಾಗುತ್ತದೆ. ಶ್ರಾವಣ ಮಾಸದಲ್ಲಿ ಕನಸಿನಲ್ಲಿ ಯಾವ ಸಂಗತಿಗಳು ಬರುವುದು ಶುಭ ಪರಿಗಣಿಸಲಾಗುತ್ತದೆ ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ, 

 

ಇದನ್ನೂ ಓದಿ-Ganesh Rudraksh Benefit: ವ್ಯಾಪಾರ ಸೇರಿದಂತೆ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಿಸಲು ತುಂಬಾ ಲಾಭಕಾರಿ ಈ ರುದ್ರಾಕ್ಷ ಧಾರಣೆ

 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /4

ನಂದಿ -ಧಾರ್ಮಿಕ ನಂಬಿಕೆಯ ಪ್ರಕಾರ, ನಂದಿಯನ್ನು ಶಿವನ ವಾಹನ ಎಂದು ಪರಿಗಣಿಸಲಾಗುತ್ತದೆ. ಸಾವನ ಮಾಸದಲ್ಲಿ ಕನಸಿನಲ್ಲಿ ಗೂಳಿ ಕಂಡರೆ, ಶಿವನ ಕೃಪಾಕಟಾಕ್ಷ ನಿಮ್ಮ ಮೇಲಿದೆ ಎಂದರ್ಥ. ಕನಸಿನಲ್ಲಿ ನಂದಿಯನ್ನು ನೋಡುವುದು ನೀವು ಪ್ರತಿ ಕಾರ್ಯದಲ್ಲಿ ಯಶಸ್ವಿಯಾಗುವ ಸಂಕೇತ ಎನ್ನಲಾಗುತ್ತದೆ.  

2 /4

ತ್ರಿಶೂಲ - ತ್ರಿಶೂಲವನ್ನು ರಜ, ತಮ  ಮತ್ತು ಸತ್ ಗುಣಗಳ ಸಂಕೇತವೆಂದು ಪರಿಗಣಿಸಲಾಗಿದೆ. ಇವೆಲ್ಲವುಗಳನ್ನು ಸೇರಿ ಶಿವನ ತ್ರಿಶೂಲ ರೂಪುಗೊಂಡಿದೆ ಎಂದು ಹೇಳಲಾಗುತ್ತದೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಶಿವನ ತ್ರಿಶೂಲದ ಮೂರು ಅಂಚುಗಳು ಕಾಮ, ಕ್ರೋಧ ಮತ್ತು ಲೋಭಗಳ ಕಾರಕ ಎಂದು ಭಾವಿಸಲಾಗುತ್ತದೆ. ಕನಸಿನಲ್ಲಿ ತ್ರಿಶೂಲವನ್ನು ಕಾಣುವುದು ನಿಮ್ಮ ಎಲ್ಲಾ ಸಂಕಷ್ಟಗಳ ನಾಶ ಎಂಬುದರ ಸಂಕೇತವಾಗಿದೆ.  

3 /4

ಡಮರುಗ - ಶಿವನು ಯಾವಾಗಲೂ ತನ್ನ ಕೈಯಲ್ಲಿ ಡಮರುವನ್ನು ಹಿಡಿದಿರುತ್ತಾನೆ. ಡಮರುಗ ಸ್ಥಿರತೆಯ ಸಂಕೇತವಾಗಿದೆ. ಕನಸಿನಲ್ಲಿ ಶಿವನ ಡಮರುಗ ಕಂಡರೆ ಬದುಕಿನ ಸಂಕ್ಷೋಭೆ ಅಂತ್ಯವಾಗಲಿದೆ ಎಂದರ್ಥ. ಕನಸಿನಲ್ಲಿ ಡಮರುಗ ಕಾಣಿಸುವುದು ಜೀವನದಲ್ಲಿ ಸ್ಥಿರತೆಯ ಸಂಕೇತವಾಗಿದೆ.  

4 /4

ಹಾವು - ಶಿವನು ತನ್ನ ಕೊರಳಿನಲ್ಲಿ ವಾಸುಕಿ ನಾಗರ ಹಾವನ್ನು  ಕೊರಳಲ್ಲಿ ಧರಿಸಿದ್ದಾನೆ. ಶ್ರಾವಣ ಮಾಸದಲ್ಲಿ ಕನಸಿನಲ್ಲಿ ನಾಗದೇವತೆ ಬರುವುದು ಸಂಪತ್ತನ್ನು ಹೆಚ್ಚಿಸುವ ಸಂಕೇತವೆಂದು ಪರಿಗಣಿಸಲಾಗಿದೆ.