Side Effects of Baby Diaper: ಮಕ್ಕಳಿಗೆ ಡೈಪರ್ ಹಾಕುವ ಮುನ್ನ ಈ ವಿಷಯಗಳನ್ನು ತಿಳಿದುಕೊಳ್ಳಿ

ದಿನವಿಡೀ ಮಕ್ಕಳಿಗೆ ಡೈಪರ್ ಹಾಕುವ ಮುನ್ನ ಕೆಲವೊಂದು ವಿಚಾರಗಳನ್ನು ತಿಳಿದುಕೊಳ್ಳಿ. ಮಗುವಿನ ಚರ್ಮವು ತುಂಬಾ ಸೂಕ್ಷ್ಮವಾಗಿರುತ್ತದೆ. ಇಡೀ ದಿನ  ಮಗುವಿಗೆ  ಡೈಪರ್ ಹಾಕುವುದರಿಂದ ತ್ವಚೆಯ ಸಮಸ್ಯೆ ಕಾಡಬಹುದು.  

ಬೆಂಗಳೂರು : ನವಜಾತ ಶಿಶುಗಳನ್ನು ನೋಡಿಕೊಳ್ಳುವುದು ತಮಾಷೆಯ ವಿಷಯವಲ್ಲ. ರಾತ್ರಿ ಮಲಗುವಾಗ ಮಗು ತನ್ನ ಹಾಸಿಗೆಯನ್ನು ಹಲವು ಬಾರಿ ಒದ್ದೆ ಮಾಡುತ್ತದೆ. ಹೀಗಾದಾಗ ತಾಯಿ ಮಗು ಇಬ್ಬರ ನಿದ್ದೆಗೂ ಭಂಗ ಬರುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಮಹಿಳೆಯರು ನವಜಾತ ಶಿಶುಗಳಿಗೆ ಡೈಪರ್ ಬಳಸುತ್ತಾರೆ.  ಆದರೆ ದಿನವಿಡೀ ಮಕ್ಕಳಿಗೆ ಡೈಪರ್ ಹಾಕುವ ಮುನ್ನ ಕೆಲವೊಂದು ವಿಚಾರಗಳನ್ನು ತಿಳಿದುಕೊಳ್ಳಿ. ಮಗುವಿನ ಚರ್ಮವು ತುಂಬಾ ಸೂಕ್ಷ್ಮವಾಗಿರುತ್ತದೆ. ಇಡೀ ದಿನ  ಮಗುವಿಗೆ  ಡೈಪರ್ ಹಾಕುವುದರಿಂದ ತ್ವಚೆಯ ಸಮಸ್ಯೆ ಕಾಡಬಹುದು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಹಗಲು ರಾತ್ರಿ ಮಗುವಿಗೆ ಡಯಾಪರ್ ಹಾಕುತ್ತಿದ್ದರೆ ಅದು ಮಗುವಿನ ಚರ್ಮಕ್ಕೆ ಹಾನಿಯುಂಟು ಮಾಡುತ್ತದೆ. ಏಕೆಂದರೆ ನಿರಂತರವಾಗಿ ಇದನ್ನು ಬಳಸುವುದರಿಂದ  ಈ ಜಾಗದಲ್ಲಿ ಅತಿಯಾದ ತೇವಾಂಶಕ್ಕೆ ಕಾರಣವಾಗಬಹುದು. ಇದು ಡೈಪರ್ ರಾಶಸ್ ಗೆ ಕಾರಣವಾಗಬಹುದು.   

2 /4

ಸರಿಯಾದ ಗಾತ್ರದ ಡೈಪರ್ ಅನ್ನು ಮಗುವಿಗೆ ಬಳಸುವುದ್ಯು ಬಹಳ ಮುಖ್ಯ.  ಬಿಗಿಯಾದ ಡೈಪರ್ ಬಳಕೆ ಮಗುವಿಗೆ  ಕಿರಿಕಿರಿಯುಂಟುಮಾಡಬಹುದು.    

3 /4

ಡೈಪರ್ ಖರೀದಿಸುವಾಗ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಉತ್ತಮ ಗುಣಮಟ್ಟದ ಡೈಪರ್ ಆಯ್ಕೆ ಮಾಡಿ.  ಅದು ಚರ್ಮಕ್ಕೆ ಸ್ನೇಹಿ ಮತ್ತು ತ್ವಚೆಯ ಮೇಲೆ ಮೃದುವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ, ಸುಧಾರಿತ ವಿನ್ಯಾಸದ ಡೈಪರ್ ಮಾರುಕಟ್ಟೆಗೆ ಬಂದಿವೆ. ಅವುಗಳು ಬ್ರೀದೆಬಲ್ ಮೆಟಿರಿಯಲ್ ನಿಂದ   ಮಾಡಲ್ಪಟ್ಟಿದೆ.  ಇವು  ಹೆಚ್ಚಿನ ತೇವಾಂಶವನ್ನು ಅನುಮತಿಸುವುದಿಲ್ಲ.

4 /4

ನೀವು ರಾತ್ರಿಯಲ್ಲಿ ಮಾತ್ರ ನಿಮ್ಮ ಮಗುವಿಗೆ ಡೈಪರ್ ಬಳಸುತ್ತಿದ್ದರೂ ಮಗುವಿನ ಚರ್ಮವನ್ನು ಪರೀಕ್ಷಿಸುತ್ತಿರಿ. ಏಕೆಂದರೆ ಕೆಲವು ಶಿಶುಗಳ ಚರ್ಮವು ಹೆಚ್ಚು ಸೂಕ್ಷ್ಮವಾಗಿರುತ್ತದೆ, ಸ್ವಲ್ಪ ಸಮಯದವರೆಗೆ ಡೈಪರ್ ಧರಿಸಿದರೂ ಕೆಲವೊಮ್ಮೆ  ಸಮಸ್ಯೆ ಉಂಟಾಗುತ್ತದೆ.