ಶೀತ, ನೆಗಡಿಯಿಂದ ಪರಿಹಾರ ಪಡೆಯಲು ಅತಿಯಾಗಿ ಕಷಾಯ ಸೇವಿಸುವ ಅಭ್ಯಾಸ ನಿಮಗೂ ಇದೆಯೇ, ಇದನ್ನೊಮ್ಮೆ ಓದಿ

Side Effects Of Kadha: ಚಳಿಗಾಲದಲ್ಲಿ ಜನರು ಕರಿಮೆಣಸು, ದಾಲ್ಚಿನ್ನಿ, ಅರಿಶಿನ, ಅಶ್ವಗಂಧ ಮತ್ತು ಏಲಕ್ಕಿ ಮುಂತಾದ ಮಸಾಲೆಗಳನ್ನು ಬೆರೆಸಿ ಕಷಾಯ ತಯಾರಿಸಿ ಕುಡಿಯುತ್ತಾರೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಉತ್ತಮ ಮಾರ್ಗವಾಗಿದೆ ಎಂಬುದರಲ್ಲಿ ಸಂದೇಹವಿಲ್ಲ, ಆದರೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೀವು ದಿನಕ್ಕೆ ಮೂರು ಹೊತ್ತು ಕಷಾಯ ಕುಡಿಯುತ್ತಿದ್ದರೆ ಇದರಿಂದ ವ್ಯತಿರಿಕ್ತ ಪರಿಣಾಮವನ್ನು ಎದುರಿಸಬೇಕಾಗಬಹುದು. ಅತಿಯಾದ ಕಷಾಯ ಸೇವನೆಯಿಂದ ಏನೆಲ್ಲಾ ತೊಂದರೆ ಉಂಟಾಗುತ್ತದೆ, ಇದು ಆರೋಗ್ಯದ ಮೇಲೆ ಹೇಗೆ ಅಡ್ಡಪರಿಣಾಮ ಉಂಟು ಮಾಡಲಿದೆ ತಿಳಿಯೋಣ...
 

Side Effects Of Kadha: ಚಳಿಗಾಲವು ತುಂಬಾ ಹತ್ತಿರದಲ್ಲಿದೆ, ಈ ಬದಲಾಗುತ್ತಿರುವ ಋತುವಿನಲ್ಲಿ ನೆಗಡಿ-ಕೆಮ್ಮು ಮತ್ತು ಶೀತದ ಅಪಾಯವು ತುಂಬಾ ಹೆಚ್ಚಾಗುತ್ತದೆ, ಅಂತಹ ಪರಿಸ್ಥಿತಿಯಲ್ಲಿ ಜನರು ಕರಿಮೆಣಸು, ದಾಲ್ಚಿನ್ನಿ, ಅರಿಶಿನ, ಅಶ್ವಗಂಧ ಮತ್ತು ಏಲಕ್ಕಿ ಮುಂತಾದ ಮಸಾಲೆಗಳನ್ನು ಬೆರೆಸಿ ಕಷಾಯ ತಯಾರಿಸಿ ಕುಡಿಯುತ್ತಾರೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಉತ್ತಮ ಮಾರ್ಗವಾಗಿದೆ ಎಂಬುದರಲ್ಲಿ ಸಂದೇಹವಿಲ್ಲ, ಆದರೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೀವು ದಿನಕ್ಕೆ ಮೂರು ಹೊತ್ತು ಕಷಾಯ ಕುಡಿಯುತ್ತಿದ್ದರೆ ಇದರಿಂದ ವ್ಯತಿರಿಕ್ತ ಪರಿಣಾಮವನ್ನು ಎದುರಿಸಬೇಕಾಗಬಹುದು. ಅತಿಯಾದ ಕಷಾಯ ಸೇವನೆಯಿಂದ ಏನೆಲ್ಲಾ ತೊಂದರೆ ಉಂಟಾಗುತ್ತದೆ, ಇದು ಆರೋಗ್ಯದ ಮೇಲೆ ಹೇಗೆ ಅಡ್ಡಪರಿಣಾಮ ಉಂಟು ಮಾಡಲಿದೆ ತಿಳಿಯೋಣ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ಗ್ಯಾಸ್ಟ್ರಿಕ್ ಸಮಸ್ಯೆ: ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಶೀತ-ಕೆಮ್ಮು, ನೆಗಡಿಯನ್ನು ತಪ್ಪಿಸಲು, ನೀವು ಅಗತ್ಯಕ್ಕಿಂತ ಹೆಚ್ಚು ಕಷಾಯವನ್ನು ಸೇವಿಸಿದರೆ, ನಿಮ್ಮ ಹೊಟ್ಟೆಯಲ್ಲಿ ಗ್ಯಾಸ್ ರೂಪುಗೊಳ್ಳಲು ಪ್ರಾರಂಭಿಸುತ್ತದೆ, ಆದ್ದರಿಂದ ಸೀಮಿತ ಪ್ರಮಾಣದಲ್ಲಿ ಕಷಾಯವನ್ನು ಕುಡಿಯಿರಿ.

2 /5

ಮೂಗಿನಲ್ಲಿ ಸಮಸ್ಯೆ: ಹೆಚ್ಚು ಕಷಾಯವನ್ನು ಸೇವಿಸುವುದರಿಂದ ಮೂಗಿನಲ್ಲಿ ಸಮಸ್ಯೆ ಉಂಟಾಗುತ್ತದೆ. ಈ ಬಗ್ಗೆ ನೀವು ಗಮನ ಹರಿಸದಿದ್ದರೆ ನಂತರ ಮೂಗಿನಲ್ಲಿ ಶುಷ್ಕತೆ ಉಂಟಾಗಬಹುದು ಅಥವಾ ಮೂಗಿನಿಂದ ರಕ್ತಸ್ರಾವ ಹೆಚ್ಚಾಗುವ ಅಪಾಯವಿರಬಹುದು.

3 /5

ಹೊಟ್ಟೆಯಲ್ಲಿ ಆಮ್ಲ ಸಂಗ್ರಹ: ಕಷಾಯವನ್ನು ಹೆಚ್ಚು ಕುಡಿಯುವ ಜನರಲ್ಲಿ ಹೊಟ್ಟೆಯಲ್ಲಿ ಆಮ್ಲ ಸಂಗ್ರಹವಾಗುತ್ತದೆ. ಇದು ಹೊಟ್ಟೆ ಉರಿ, ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.

4 /5

ಬಾಯಿಯಲ್ಲಿ ಹುಣ್ಣುಗಳು: ನೀವು ನಿತ್ಯ ಮೂರು ಹೊತ್ತು ಕಷಾಯ ಸೇವಿಸಿದರೆ ಇದರಿಂದ ಪ್ರಯೋಜನದ ಬದಲಾಗಿ ಹಾನಿಯಾಗಬಹುದು. ಏಕೆಂದರೆ ಇದು ಬಾಯಿಯಲ್ಲಿ ಹುಣ್ಣುಗಳನ್ನು ಉಂಟು ಮಾಡುತ್ತದೆ. 

5 /5

ಆಗಾಗ್ಗೆ ಮೂತ್ರ ವಿಸರ್ಜನೆ: ಹೆಚ್ಚು ಕಷಾಯವನ್ನು ಕುಡಿಯುವ ಪರಿಣಾಮವು ನಿಮ್ಮ ಮೂತ್ರದ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ನೀವು ಆಗಾಗ್ಗೆ ಮೂತ್ರ ವಿಸರ್ಜನೆಗೆ ಹೋಗಬೇಕಾಗುತ್ತದೆ. ಜೊತೆಗೆ ಮೂತ್ರದಲ್ಲಿ ಸುಡುವಿಕೆಗೆ ಕಾರಣವಾಗಬಹುದು. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.