Tallest Dog in the World: ಇದೇ ನೋಡಿ ವಿಶ್ವದ ಅತಿ ಉದ್ದದ ಶ್ವಾನ..!

ಇದು ಗ್ರೇಟ್ ಡೇನ್(Great Dane) ತಳಿಯ ನಾಯಿ. ಇದರ ಮಾಲೀಕರು ಇದಕ್ಕೆ ಪ್ರೀತಿಯಿಂದ ಜೀಯಸ್ ಎಂದು ಹೆಸರಿಟ್ಟಿದ್ದಾರೆ.

ನವದೆಹಲಿ: ಈ ಚಿತ್ರ ನೋಡಿ ಈ ಮಹಿಳೆ ಕುದುರೆಯೊಂದಿಗೆ ಕುಳಿತುಕೊಂಡಿದ್ದಾಳೆಂದು ಮೋಸ ಹೋಗಬೇಡಿ. ಆದರೆ, ಈ ಮಹಿಳೆ ಕುದುರೆಯೊಂದಿಗೆ ಅಲ್ಲ, ತನ್ನ ಸಾಕು ನಾಯಿಯೊಂದಿಗೆ ಕುಳಿತುಕೊಂಡಿದ್ದಾಳೆ. ಶ್ವಾನ ಪ್ರೇಮಿಗಳು ಈ ತಳಿಯನ್ನು ಒಂದೇ ನೋಟದಲ್ಲಿ ಗುರುತಿಸಬಹುದು. ಇದು ಗ್ರೇಟ್ ಡೇನ್(Great Dane) ತಳಿಯ ನಾಯಿ. ಇದರ ಮಾಲೀಕರು ಇದಕ್ಕೆ ಪ್ರೀತಿಯಿಂದ ಜೀಯಸ್ ಎಂದು ಹೆಸರಿಟ್ಟಿದ್ದಾರೆ. ಬಹುಶಃ ಗ್ರೀಕ್ ದೇವರು ರಾಜನ ಹೆಸರನ್ನು ಇದಕ್ಕೆ ಇಡಲಾಗಿದೆ. ಏಕೆಂದರೆ ಜೀಯಸ್‌ನಂತೆಯೇ ಈ ನಾಯಿ ಅಧಿಕೃತವಾಗಿ ವಿಶ್ವದ ಅತಿ ಎತ್ತರದ ನಾಯಿ ಎಂಬ ದಾಖಲೆ ಹೊಂದಿದೆ. ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‍ನಲ್ಲಿ ಜೀಯಸ್ ಹೆಸರು ದಾಖಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಜೀಯಸ್ ಗ್ರೇಟ್ ಡೇನ್ (Great Dane) ತಳಿಯ ನಾಯಿ. ಈ ನಾಯಿ ತಳಿಯು ಅದರ ದೊಡ್ಡ ಗಾತ್ರಕ್ಕೆ ಹೆಸರುವಾಸಿಯಾಗಿದೆ.  

2 /5

ಬ್ರಿಟಾನಿ ಡೇವಿಸ್ ಬಾಲ್ಯದಿಂದಲೂ ಗ್ರೇಟ್ ಡೇನ್ ಶ್ವಾನವನ್ನು ಸಾಕುವ ಕನಸು ಕಂಡಿದ್ದರು. ಅವರ ಸಹೋದರ ಇದನ್ನು ಉಡುಗೊರೆ ನೀಡಿದಾಗ ಅವರ ಕನಸು ನನಸಾಯಿತು. ಸದ್ಯ ಬ್ರಿಟಾನಿ ಮತ್ತು ಅವರ ಕುಟುಂಬ ಟೆಕ್ಸಾಸ್‌ನಲ್ಲಿ ವಾಸಿಸುತ್ತಿದೆ.

3 /5

ಜೀಯಸ್ 1 ಮೀಟರ್‍ಗಿಂತ ಹೆಚ್ಚು ಉದ್ದವಾಗಿದೆ. ಆದರೆ, ಬ್ರಿಟಾನಿ ಅವರು ತಮ್ಮ ಶ್ವಾನವು ಇತರ ಎಲ್ಲಾ ನಾಯಿಗಳೊಂದಿಗೆ ಬೆರೆಯಲು ಸಂತೋಷಪಡುತ್ತಾರೆ. ಹೀಗಾಗಿ ಜೀಯಸ್ ತನಗಿಂತ ಕಿರಿಯ ನಾಯಿಗಳ ಜೊತೆ ಸ್ನೇಹ ಸಂಪಾದಿಸಿದೆ. ಇದರಿಂದ ಮಾಲೀಕರ ಮೊಗದಲ್ಲಿ ಮಂದಹಾಸ ಮೂಡಿದೆ

4 /5

ಬ್ರಿಟಾನಿ ಮತ್ತವರ ಕುಟುಂಬಸ್ಥರು ಈ ಮೊದಲು ಜೀಯಸ್ ವಿಶ್ವದ ಅತಿ ಎತ್ತರದ ನಾಯಿ ಎಂದು ಭಾವಿಸಿರಲಿಲ್ಲ. ಕುಟುಂಬ ಸಮಾರಂಭವೊಂದರಲ್ಲಿ ಭಾಗವಹಿಸಿದ್ದಾಗ ಯಾರೋ ಈ ತಳಿಯ ಶ್ವಾನದ ಬಗ್ಗೆ ಮಾತನಾಡಿದ್ದರು. ಬಳಿಕ ಜೀಯಸ್ ಅನ್ನು ಅಳತೆ ಮಾಡಿದಾಗ ಅದು ಇಡೀ ಪ್ರಪಂಚದಲ್ಲಿಯೇ ದೀರ್ಘಕಾಲ ಬದುಕಿರುವ ಗಂಡು ನಾಯಿ ಎಂಬುದು ಗೊತ್ತಾಯಿತು.

5 /5

ಗ್ರೇಟ್ ಡೇನ್ ತಳಿಯ ಶ್ವಾನವನ್ನು ಸಾಕಲು ಬಯಸುವವರಿಗೆ ಜೀಯಸ್ ಮಾಲೀಕರು ಕೆಲವು ಸಲಹೆ ನೀಡಿದ್ದಾರೆ. ಈ ಶ್ವಾನದ ಆಹಾರಕ್ಕಾಗಿ ಉತ್ತಮ ವ್ಯವಸ್ಥೆ ಮಾಡಲು ನೀವು ಸಿದ್ಧರಾಗಿರಬೇಕು. ಏಕೆಂದರೆ ಗಾತ್ರದಲ್ಲಿ ದೊಡ್ಡದಾಗಿರುವ ಈ ಶ್ವಾನಗಳು ಚೆನ್ನಾಗಿ ಆಹಾರ ಸೇವಿಸುತ್ತವೆ. ಇವುಗಳ ಆರೋಗ್ಯ ದೃಷ್ಟಿಯಿಂದ ಗುಣಮಟ್ಟದ ಆಹಾರ ಒದಗಿಸುವುದು ಮಾಲೀಕರ ಮೊದಲ ಕರ್ತವ್ಯವಾಗಿರುತ್ತದೆ ಎಂದು ಬ್ರಿಟಾನಿ ಹೇಳಿದ್ದಾರೆ.