Indian Cricketers: ಒಂದಕ್ಕಿಂತ ಹೆಚ್ಚು ಬಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗರು

Indian Cricketers Got Married More Than Once: ಪ್ರತಿಯೊಬ್ಬರ ಜೀವನದಲ್ಲಿ ಮದುವೆ ಎನ್ನುವುದು ಪ್ರಮುಖ ಘಟ್ಟ. ಮದುವೆ ಬಳಿಕ ಆ ಜೀವನವನ್ನು ಸರಿಯಾದ ರೀತಿಯಲ್ಲಿ ಸಾಗಿಸುವುದು ಕೂಡ ಅಷ್ಟೇ ಮುಖ್ಯ. ಸಾಮಾನ್ಯ ಅಥವಾ ಶ್ರೀಮಂತ ವ್ಯಕ್ತಿಯ ಜೀವನವಾಗಲಿ, ಕೊಂಚ ಲಯ ತಪ್ಪಿದರೂ ಜೀವನ ಅಲ್ಲೋಲ ಕಲ್ಲೋಲ ಆಗುವುದು ಖಚಿತ. ಅಂತೆಯೇ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗರ ಜೀವನದಲ್ಲೂ ಸಹ ವೈವಾಹಿಕ ಬದುಕು ಸರಿಹೊಂದರೆ, ವಿಚ್ಛೇದನ ನೀಡಿ ಮರುಮದುವೆಯಾದವರು ಇದ್ದಾರೆ. ಅವರ ಬಗ್ಗೆ ಇಂದು ತಿಳಿದುಕೊಳ್ಳೋಣ.

1 /5

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರ ಕಾಲದ ಅತ್ಯಂತ ಪ್ರತಿಭಾವಂತ ಕ್ರಿಕೆಟಿಗರಲ್ಲಿ ಒಬ್ಬರು. ಮೊಹಮ್ಮದ್ ಒಮ್ಮೆ ಮ್ಯಾಚ್ ಫಿಕ್ಸಿಂಗ್ ಹಗರಣಕ್ಕೆ ತುತ್ತಾಗಿ, ನಂತರ ಅವರ ವೃತ್ತಿಜೀವನದ ಮೇಲೆ ಭಾರೀ ಪರಿಣಾಮ ಬೀರಿತು. ಇವೆಲ್ಲದರ ಹೊರತಾಗಿ ಅಜರುದ್ದೀನ್ ಅವರು, ನೌರೀನ್ ಎಂಬಾಕೆಯನ್ನು 1987 ರಲ್ಲಿ ವಿವಾಗವಾದರು. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ, 1996ರಲ್ಲಿ, ದಂಪತಿಗಳು ಬೇರೆಯಾದರು. ಈ ನಡುವೆ ಬಾಲಿವುಡ್ ನಟಿ ಸಂಗೀತಾ ಬಿಜಲಾನಿ ಜೊತೆ ಪ್ರೀತಿಯಲ್ಲಿ ಬಿದ್ದರು. ಹೀಗಾಗಿ ವಿಚ್ಛೇದನ ಪಡೆದು ಅವರನ್ನು ಮದುವೆಯಾದರು. ಆದರೆ ಸಂಗೀತಾ ಅವರಿಗೂ ಸಹ 2010 ರಲ್ಲಿ ವಿಚ್ಛೇದನ ನೀಡಿದರು.

2 /5

ಭಾರತದ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅವರು ಸಹ ಅತ್ಯುತ್ತಮ ವೇಗದ ಬೌಲರ್‌ಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 300 ವಿಕೆಟ್‌ಗಳನ್ನು ಪಡೆದ ಮೊದಲ ಭಾರತೀಯ ವೇಗದ ಬೌಲರ್. 1999 ರ ವಿಶ್ವಕಪ್ ಮುಗಿದ ನಂತರ ಜಾವಗಲ್ ಜ್ಯೋತ್ಸ್ನಾ ಅವರನ್ನು ವಿವಾಹವಾದರು. ಆದರೆ ಅವರ ದಾಂಪತ್ಯ ಜೀವನ ಹೆಚ್ಚು ಕಾಲ ಉಳಿಯಲಿಲ್ಲ. ದಂಪತಿಗಳು ಪ್ರತ್ಯೇಕ ದಾರಿಯನ್ನು ಹಿಡಿದರು. ನಂತರ 2008 ರಲ್ಲಿ ವೃತ್ತಿಯಲ್ಲಿ ಪತ್ರಕರ್ತೆಯಾಗಿರುವ ಮಾಧವಿ ಪತ್ರಾವಳಿ ಅವರನ್ನು ಎರಡನೇ ಬಾರಿಗೆ ವಿವಾಹವಾದರು.

3 /5

ಸಚಿನ್ ತೆಂಡೂಲ್ಕರ್ ಅವರ ಬಾಲ್ಯದ ಗೆಳೆಯ ಮತ್ತು ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ, ಅವರ ಕಾಲದ ಅತ್ಯಂತ ಪ್ರತಿಭಾವಂತ ಕ್ರಿಕೆಟಿಗರಲ್ಲಿ ಒಬ್ಬರು. ಅವರ ಜನ್ಮದಿನದಂದು ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಪರಿಪೂರ್ಣ ಶತಕ ಗಳಿಸಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಅವರ ವೈಯಕ್ತಿಕ ಜೀವನದ ವಿಚಾರ ಬಂದರೆ, 1998 ರಲ್ಲಿ ನೋಯೆಲ್ಲಾ ಲೂಯಿಸ್ ಅವರನ್ನು ವಿವಾಹವಾದರು. ಆದರೆ ಅವರ ಸಂಬಂಧವು ಹೆಚ್ಚು ಕಾಲ ಉಳಿಯಲಿಲ್ಲ.  ಮದುವೆಯಾದ ಕೆಲವು ವರ್ಷಗಳ ನಂತರ ವಿಚ್ಛೇದನ ಪಡೆದರು. ನಂತರ ವಿನೋದ್ ಕಾಂಬ್ಳಿ ವೃತ್ತಿಯಲ್ಲಿ ಫ್ಯಾಷನ್ ಮಾಡೆಲ್ ಆಗಿರುವ ಆಂಡ್ರಿಯಾ ಹೆವಿಟ್ ಅವರನ್ನು ಮತ್ತೆ ವಿವಾಹವಾಗಿದ್ದರು. ನಂತರ, ಕ್ರಿಕೆಟಿಗ ಸ್ವತಃ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರು.

4 /5

ಭಾರತದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್, ದಿನೇಶ್ ಕಾರ್ತಿಕ್ ಬಗ್ಗೆ ಯಾವುದೇ ಪರಿಚಯ ಅಗತ್ಯವಿಲ್ಲ. ದಿನೇಶ್ ಅವರು ಯಶಸ್ವಿ ವೃತ್ತಿಜೀವನವನ್ನು ಹೊಂದಿದ್ದರೂ ಸಹ, ಅವರ ವೈಯಕ್ತಿಕ ಜೀವನವು ಅನೇಕ ಬಾರಿ ನೋವುಗಳನ್ನು ಎದುರಿಸಿದೆ. ದಿನೇಶ್ ತನ್ನ ಬಾಲ್ಯದ ಗೆಳತಿ ನಿಕಿತಾ ವಂಜಾರಾಳನ್ನು 2007 ರಲ್ಲಿ ಮದುವೆಯಾದರು. ಆದರೆ ಒಂದು ನಿರ್ದಿಷ್ಟ ತಿರುವಿನಲ್ಲಿ, ನಿಕಿತಾ ಮತ್ತೊಬ್ಬ ಕ್ರಿಕೆಟಿಗ ಮುರಳಿ ವಿಜಯ್ ಅವರನ್ನು ಪ್ರೀತಿಸುತ್ತಿದ್ದರು. ಮತ್ತು ಕಾರ್ತಿಕ್‌ನಿಂದ ವಿಚ್ಛೇದನ ಪಡೆದ ನಂತರ, ನಿಕಿತಾ ಅವರನ್ನು 2012 ರಲ್ಲಿ ವಿವಾಹವಾದರು. ಆ ಬಳಿಕ 2015 ರಲ್ಲಿ, ದಿನೇಶ್ ಸ್ಕ್ವಾಷ್ ಚಾಂಪಿಯನ್ ದೀಪಿಕಾ ಪಲ್ಲಿಕಲ್ ಅವರನ್ನು ವಿವಾಹವಾದರು. ಇದೀಗ ಈ ದಂಪತಿ ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ.  

5 /5

66 ವರ್ಷದ ಅರುಣ್ ಲಾಲ್ ಭಾರತದ ಮಾಜಿ ಕ್ರಿಕೆಟಿಗ ಮತ್ತು ಕ್ರಿಕೆಟ್ ವಿಮರ್ಶಕ. ಅರುಣ್ ಲಾಲ್ ಈ ಹಿಂದೆ ರೀನಾ ಎಂಬವರನ್ನು ಮದುವೆಯಾಗಿದ್ದರು. ಆದರೆ ಮದುವೆಯಾಗಿ ವರ್ಷಗಳ ನಂತರ, ದಂಪತಿಗಳು ಸೌಹಾರ್ದಯುತವಾಗಿ ಬೇರೆಯಾಗಲು ನಿರ್ಧರಿಸಿದರು. ಆದರೆ ಅವರ ವಿಚ್ಛೇದನದ ನಂತರವೂ, ಅರುಣ್ ತನ್ನ ಮಾಜಿ ಪತ್ನಿಯೊಂದಿಗೆ ವಾಸಿಸುತ್ತಿದ್ದರು. ಏಕೆಂದರೆ ಅವರು ಅನಾರೋಗ್ಯದಿಂದ ಬಳಲುತ್ತಿದ್ದ ರೀನಾಳನ್ನು ನೋಡಿಕೊಳ್ಳುತ್ತಿದ್ದರು. ಇವೆಲ್ಲದರ ನಡುವೆ, ಅರುಣ್ 38 ವರ್ಷದ ಬುಲ್ ಬುಲ್ ಎಂಬಾಕೆಯನ್ನು ಪ್ರೀತಿಸುತ್ತಿದ್ದರು. ನಂತರ, ಮೇ 2, 2022ರಲ್ಲಿ ವಿವಾಹವಾದರು.