ಜೆಂತು ಹುಳು ಸಮಸ್ಯೆಗೆ ನಿಮ್ಮ ಅಡುಗೆ ಮನೆಯಲ್ಲಿಯೇ ಸುಲಭ ಪರಿಹಾರವಿದೆ.
ಒಂದಲ್ಲಾ ಒಂದು ಸಮಯದಲ್ಲಿ ಜೆಂತು ಹುಳು ಸಮಸ್ಯೆ ಪ್ರತಿಯೊಬ್ಬರನ್ನೂ ಕಾಡಿಯೇ ಇರುತ್ತದೆ. ಅದರಲ್ಲೂ ಚಿಕ್ಕ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಜೆಂತು ಹುಳು ಸಮಸ್ಯೆ ಇದ್ದಾಗ ಆಹಾರದ ಮೂಲಕ ಪಡೆಯಬೇಕಾದ ಎಲ್ಲಾ ಪೋಷಕಾಂಶಗಳ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಉದರ ಸಮಸ್ಯೆಗಳು ಹೆಚ್ಚಾಗುವುದರ ಜೊತೆಗೆ ದೇಹವು ಕೂಡ ದುರ್ಬಲಗೊಳ್ಳುತ್ತದೆ. ಆದರೆ, ಈ ಸಮಸ್ಯೆಗೆ ನಿಮ್ಮ ಅಡುಗೆ ಮನೆಯಲ್ಲಿಯೇ ಸುಲಭ ಪರಿಹಾರವಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕಪ್ಪು ಎಳ್ಳಿನಲ್ಲಿ ಆಯುರ್ವೇದ ಗುಣಗಳು ಸಮೃದ್ಧವಾಗಿವೆ. ಜೆಂತು ಹುಳು ಸಮಸ್ಯೆ ಇರುವವರು 10 ಗ್ರಾಂ ಕಪ್ಪು ಎಳ್ಳಿನ ಪುಡಿಯಲ್ಲಿ 3 ಚಮಚ ಜೇನುತುಪ್ಪದೊಂದಿಗೆ ಬೆರೆಸಿ ರಾತ್ರಿ ಮಲಗುವ ಮುನ್ನ ತಿನ್ನುವುದರಿಂದ ಪ್ರಯೋಜನಕಾರಿ ಆಗಿದೆ.
ಪ್ರತಿ ಅಡುಗೆ ಮನೆಯ ಮಸಾಲೆ ಡಬ್ಬಿಯಲ್ಲಿ ಸುಲಭವಾಗಿ ಸಿಗುವ ಕರಿ ಮೆಣಸು ಕೂಡ ಜೆಂತು ಹುಳುವಿನ ಸಮಸ್ಯೆಗೆ ಉತ್ತಮ ಔಷಧವಾಗಿದೆ. ಇದಕ್ಕಾಗಿ ಒಂದು ಲೋಟ ಮಜ್ಜಿಗೆಗೆ ಸ್ವಲ್ಪ ಕರಿಮೆಣಸಿನ ಪುಡಿಯನ್ನು ಬೆರೆಸಿ ರಾತ್ರಿ ಕುಡಿದರೆ ಹೊಟ್ಟೆ ಹುಳುಗಳು ನಾಶವಾಗುತ್ತವೆ.
ಬ್ಯಾಕ್ಟೀರಿಯಾ ಮತ್ತು ಆಂಟಿ-ಆಕ್ಸಿಡೆಂಟ್ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿರುವ ಜೇನು ತುಪ್ಪ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ನಿಮಗೆ ತಿಳಿದೇ ಇದೆ. ಜೇನುತುಪ್ಪವನ್ನು ಅಜ್ವೈನ್ ನೊಂದಿಗೆ ಬೆರೆಸಿ ದಿನಕ್ಕೆ ಮೂರು ಬಾರಿ ಸವಿಯುವುದರಿಂದ ಜೆಂತುಳು ಸಮಸ್ಯೆಗೆ ಪರಿಹಾರ ದೊರೆಯಲಿದೆ.
ಮೂಲಂಗಿ ರಸ ತೆಗೆದು ಅದಕ್ಕೆ ಕರಿ ಮೆಣಸಿನ ಪುಡಿ ಮತ್ತು ಕಪ್ಪು ಉಪ್ಪನ್ನು ಬೆರೆಸಿ ದಿನಕ್ಕೆರಡು ಬಾರಿ ಕುಡಿಯುವುದರಿಂದ ಜೆಂತುಳು ಸಮಸ್ಯೆಯಿಂದ ಮುಕ್ತಿ ದೊರೆಯುತ್ತದೆ.
ನಾಲ್ಕೈದು ದಿನಗಳವರೆಗೆ ನಿರಂತರವಾಗಿ ಕ್ಯಾರೆಟ್ ಹುದುಗಿಸಿದ ಪಾನೀಯವನ್ನು ಕುಡಿಯುವುದರಿಂದಲೂ ಜೆಂತುಳು ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.