PM Kisan: ಈ ರೈತರಿಗೆ ಸಿಗಲ್ಲ ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯ ಲಾಭ

ಕಿಸಾನ್ ಸಮ್ಮನ್ ನಿಧಿಯ ಮುಂದಿನ ಕಂತು ಹೋಳಿ ಹಬ್ಬಕ್ಕೂ ಮೊದಲೇ ಬಿಡುಗಡೆಯಾಗಬಹುದು. ಆದರೆ ಸುಳ್ಳು ಮಾಹಿತಿ ನೀಡುವ ಮೂಲಕ ಕಿಸಾನ್ ಸಮ್ಮನ್ ನಿಧಿಯ ಲಾಭ ಪಡೆದವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ ಎಂದು ಸರ್ಕಾರ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಈ ಯೋಜನೆಯ ಲಾಭವನ್ನು ಯಾವ ರೈತರು ಪಡೆಯಬಹುದು ಎಂದು ಸರ್ಕಾರ ಮಾರ್ಗಸೂಚಿಗಳ ಮೂಲಕ ತಿಳಿಸಿದೆ.

ನವದೆಹಲಿ: PM Kisan Samman Nidhi- ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯಡಿ ಕೇಂದ್ರ ಸರ್ಕಾರವು ಪ್ರತಿ ಹಣಕಾಸು ವರ್ಷದಲ್ಲಿ ಯೋಜನೆಯ ಫಲಾನುಭವಿ ರೈತರಿಗೆ 6,000 ರೂ. ಆರ್ಥಿಕ ನೆರವನ್ನು ನೀಡುತ್ತಿದೆ. ಈ ಮೊತ್ತವನ್ನು ನೇರವಾಗಿ ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ. ಪ್ರತಿ 4 ತಿಂಗಳ ಮಧ್ಯಂತರದಲ್ಲಿ ಸರ್ಕಾರವು ರೈತರಿಗೆ 3 ಕಂತುಗಳನ್ನು 2-2 ಸಾವಿರ ರೂ. ವರ್ಗಾಯಿಸುತ್ತಿದೆ. ಮುಂದಿನ ಕಂತನ್ನು ಹೋಳಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಆದರೆ ಸುಳ್ಳು ಮಾಹಿತಿ ನೀಡುವ ಮೂಲಕ ಕಿಸಾನ್ ಸಮ್ಮನ್ ನಿಧಿಯ ಲಾಭ ಪಡೆದವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಹಾಗಾಗಿ ಯಾವ ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯ ಲಾಭ ಸಿಗುವುದಿಲ್ಲ ಎಂದು ತಿಳಿಯುವುದು ಬಹಳ ಮುಖ್ಯ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಇತ್ತೀಚೆಗೆ, ಕಿಸಾನ್ ಸಮ್ಮನ್ ನಿಧಿಯ ಲಾಭ ಪಡೆದ ರೈತರ ಬಗ್ಗೆ ಮಾಹಿತಿ ಕಳೆಹಾಕುತ್ತಿರುವ  ಕೇಂದ್ರ ಸರ್ಕಾರ ಸುಳ್ಳು ಮಾಹಿತಿ ನೀಡುವ ಮೂಲಕ ಯೋಜನೆಯ ಲಾಭ ಪಡೆದವರ ವಿರುದ್ಧ ಕ್ರಮ ಕೈಗೊಳ್ಳಲು ಪ್ರಾರಂಭಿಸಿದೆ. ಅಂತಹ ಪರಿಸ್ಥಿತಿಯಲ್ಲಿ, ಕಿಸಾನ್ ಸಮ್ಮನ್ ನಿಧಿಗೆ ನಿಗದಿಪಡಿಸಿದ ಮಾರ್ಗಸೂಚಿಗಳನ್ನು ತಿಳಿದುಕೊಳ್ಳುವುದು ಅವಶ್ಯಕ. ಮಾರ್ಗಸೂಚಿಗಳ ಅಡಿಯಲ್ಲಿ  ಪಿಎಂ ಕಿಸಾನ್ ಸಮ್ಮನ್ ನಿಧಿಯ (PM Kisan Samman Nidhi) ಪ್ರಯೋಜನವು ಆಯ್ದ ರೈತರಿಗೆ ಮಾತ್ರ ಲಭ್ಯವಿದೆ. ಆದ್ದರಿಂದ, ಮಾರ್ಗಸೂಚಿಗಳ ಪ್ರಕಾರ ಯಾವ ರೈತರು ಇದರಿಂದ ಪ್ರಯೋಜನ ಪಡೆಯಬಹುದು ಎಂದು ನಾವು ನಿಮಗೆ ಹೇಳುತ್ತಿದ್ದೇವೆ.

2 /4

1- ಜಮೀನಿನಲ್ಲಿ ಕೆಲಸ ಮಾಡುವ ರೈತರಿಗೆ ಯೋಜನೆಯ ಲಾಭ ಸಿಗುವುದಿಲ್ಲ 2- ಸರ್ಕಾರಿ ಅಥವಾ ನಿವೃತ್ತ ನೌಕರರು ಸಹ ಈ ಯೋಜನೆಗೆ ಅರ್ಹರಲ್ಲ 3. ಹಾಲಿ ಸಚಿವರಲ್ಲದೆ ಮಾಜಿ ಸಚಿವರು, ಸಂಸದರು ಮತ್ತು ಶಾಸಕರಿಗೆ ಈ ಯೋಜನೆಯ ಲಾಭ ದೊರೆಯುವುದಿಲ್ಲ 4- ವೃತ್ತಿಪರ ನೋಂದಾಯಿತ ವೈದ್ಯರು, ಎಂಜಿನಿಯರ್, ವಕೀಲರು, ಸಿಎ ವೃತ್ತಿಪರರು ಸಹ ಈ ಯೋಜನೆಯ ಪ್ರಯೋಜನ ಪಡೆಯುವುದಿಲ್ಲ 5- ಆದಾಯ ತೆರಿಗೆ ಪಾವತಿಸುವ ರೈತ ಕುಟುಂಬಗಳಿಗೆ ಸಹ ಇದರ ಲಾಭ ದೊರೆಯುವುದಿಲ್ಲ 6- 10 ಸಾವಿರಕ್ಕಿಂತ ಹೆಚ್ಚಿನ ಪಿಂಚಣಿ ಪಡೆಯುವ ರೈತರೂ ಸಹ ಈ ಯೋಜನೆಯ ಲಾಭ ಪಡೆಯಲು ಅರ್ಹತೆ ಹೊಂದಿರುವುದಿಲ್ಲ 7- ಕೃಷಿ ಭೂಮಿಯನ್ನು ಇತರ ಉದ್ದೇಶಗಳಿಗಾಗಿ ಬಳಸುವ ರೈತರಿಗೂ ಪ್ರಯೋಜನ ಲಭ್ಯವಿಲ್ಲ. ಇದನ್ನೂ ಓದಿ- PM Kisan: ಮುಂದಿನ ಕಂತು ಯಾವಾಗ ಬರಲಿದೆ! ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಎಂದು ಹೀಗೆ ಪರಿಶೀಲಿಸಿ

3 /4

ಪ್ರಧಾನಿ ನರೇಂದ್ರ ಮೋದಿ ಅವರು 1 ಡಿಸೆಂಬರ್ 2018 ರಂದು ಕಿಸಾನ್ ಸಮ್ಮನ್ ನಿಧಿ ಯೋಜನೆಯನ್ನು ಪ್ರಾರಂಭಿಸಿದರು. ಈ ಯೋಜನೆಯಡಿ ಫಲಾನುಭವಿ ರೈತರಿಗೆ ವರ್ಷಕ್ಕೆ 6 ಸಾವಿರ ರೂಪಾಯಿಗಳನ್ನು 3 ಸಮಾನ ಕಂತುಗಳಲ್ಲಿ ನೀಡಲಾಗುತ್ತದೆ. ಈವರೆಗೆ 11 ಕೋಟಿಗೂ ಹೆಚ್ಚು ರೈತರು (Farmers) ಈ ಯೋಜನೆಯ ಲಾಭ ಪಡೆದಿದ್ದಾರೆ. ಕಿಸಾನ್ ಸಮ್ಮನ್ ನಿಧಿಯ ಲಾಭ ಪಡೆಯಲು ಆನ್‌ಲೈನ್ ನೋಂದಣಿ ವ್ಯವಸ್ಥೆ ಇದೆ. ಇದನ್ನೂ ಓದಿ - KCC: ಎಲ್ಲಾ ರೈತರಿಗೂ ಸಿಗಲಿದೆ Credit Card, ಏಪ್ರಿಲ್ 15 ರವರೆಗೆ ವಿಶೇಷ ಅಭಿಯಾನ

4 /4

ಪ್ರಧಾನಿ ಕಿಸಾನ್ ಸಮ್ಮನ್ ನಿಧಿ (PM Kisan Samman Nidhi) ಯೋಜನೆಗೆ ನೋಂದಣಿ ಪ್ರಕ್ರಿಯೆ ಸಾಕಷ್ಟು ಸುಲಭ. ಈ ಯೋಜನೆಗೆ ನೀವು ಪಂಚಾಯತ್ ಕಾರ್ಯದರ್ಶಿ, ಪಟ್ವಾರಿ ಅಥವಾ ಸಾಮಾನ್ಯ ಸೇವಾ ಕೇಂದ್ರ (ಸಿಎಸ್‌ಸಿ)ದಲ್ಲಿ ಅರ್ಜಿ ಸಲ್ಲಿಸಬಹುದು. ಇದಲ್ಲದೆ, ಈ ಯೋಜನೆಗೆ ನೀವೇ ನೋಂದಾಯಿಸಿಕೊಳ್ಳಬಹುದು. ಈ ನೋಂದಣಿಯನ್ನು ಮನೆಯಲ್ಲಿ ಕುಳಿತು ಮಾಡಬಹುದು. 1-PM ಕಿಸಾನ್ ಅವರ ಅಧಿಕೃತ ವೆಬ್‌ಸೈಟ್ pmkisan.gov.in ಗೆ ಭೇಟಿ ನೀಡಿ 2-ಈಗ Farmers Cornerಗೆ ಹೋಗಿ 3-ಹೊಸ ರೈತ ನೋಂದಣಿ ಮೇಲೆ ಕ್ಲಿಕ್ ಮಾಡಿ 4- ಆಧಾರ್ ಸಂಖ್ಯೆಯನ್ನು ನಮೂದಿಸಿದ ನಂತರ ಕ್ಯಾಪ್ಚಾ ಕೋಡ್ ನಮೂದಿಸಿ 5- ನಿಮ್ಮ ರಾಜ್ಯದ ಬಗ್ಗೆ ಮಾಹಿತಿಯನ್ನು ಒದಗಿಸಿ ಮತ್ತು ಸಂಪೂರ್ಣ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ 6- ಬ್ಯಾಂಕ್ ಖಾತೆ ಮಾಹಿತಿ ಮತ್ತು ಕೃಷಿ ಮಾಹಿತಿಯನ್ನು ಭರ್ತಿ ಮಾಡಿದ ನಂತರ, ಫಾರ್ಮ್ ಅನ್ನು ಸೇವ್ ಮಾಡಿ