3 bhk ಫ್ಲಾಟ್ ಗಿಂತಲೂ ದುಬಾರಿ ಇಲ್ಲಿನ ಪಾರ್ಕಿಂಗ್ ರೇಟ್

ಮಧ್ಯ ಲಂಡನ್‌ನ 3  bhk  ಫ್ಲ್ಯಾಟ್‌ಗಳಿಗಿಂತ ಹೆಚ್ಚು ದುಬಾರಿ ಇಲ್ಲಿನ ಪಾರ್ಕಿಂಗ್. ಪಾರ್ಕಿಂಗ್ ಗೆ ಇಲ್ಲಿ ನೀಡಬೇಕು  2 ಕೋಟಿ 11 ಲಕ್ಷ ರೂಪಾಯಿ.
 

ಲಂಡನ್ : ಯುಕೆಯಲ್ಲಿ, ಪಾರ್ಕಿಂಗ್ ಗೆ (Parking) ಒಂದು ಮನೆಗೆ ತಗಲುವ  ವೆಚ್ಚವನ್ನೇ ಭರಿಸಬೇಕಾಗುತ್ತದೆ. ಅಂದರೆ ಒಂದು ಪಾರ್ಕಿಂಗ್ ಗೆ ಸುಮಾರು  2 ಕೋಟಿ ರೂಗಳಷ್ಟನ್ನು ನೀಡಬೇಕಾಗುತ್ತದೆ. . ಮಧ್ಯ ಲಂಡನ್‌ನಲ್ಲಿ (London) ವಾಹನ ನಿಲುಗಡೆಗೆ 2 ಕೋಟಿ 11 ಲಕ್ಷ ರೂಪಾಯಿ ಭರಿಸಬೇಕು ಎಂದು ಹೇಳಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ದಿ ಸನ್ ವರದಿಯ ಪ್ರಕಾರ, ಈ ಪಾರ್ಕಿಂಗ್ ಸ್ಥಳವು ಹೈಡ್ ಪಾರ್ಕ್‌ನಲ್ಲಿದೆ. ಆಕ್ಸ್‌ಫರ್ಡ್ ಸ್ಟ್ರೀಟ್ ಬಳಿ ಈ ಪಾರ್ಕಿಂಗ್ ಸ್ಪೇಸ್ ಇರುವುದರಿಂದ ಇದರ ಬೆಲೆ ಇಷ್ಟೊಂದು ದುಬಾರಿಯಾಗಿದೆ. 

2 /5

 ಲಂಡನ್‌ನಲ್ಲಿನ ಈ ಪಾರ್ಕಿಂಗ್ ರೇಟ್ ನಲ್ಲಿ,  ಇಂಗ್ಲೆಂಡ್ ನ ಬೇರೆ ಪ್ರದೇಶದಲ್ಲಿ ಗಾರ್ಡನ್ ಮತ್ತು ಪಾರ್ಕಿಂಗ್ ಹೊಂದಿರುವ 3  bhk ಮನೆಯನ್ನೇ ಖರೀದಿಸಬಹುದು.  

3 /5

ವರದಿಯ ಪ್ರಕಾರ, ಹೈಡ್ ಪಾರ್ಕ್‌ನ ಈ ಪಾರ್ಕಿಂಗ್ ಸ್ಥಳವು ಖರೀದಿದಾರರಿಗೆ 85 ವರ್ಷಗಳ ಗುತ್ತಿಗೆಗೆ ಲಭ್ಯವಿರುತ್ತದೆ. ಅದರ ನಂತರ ಖರೀದಿದಾರನು ತನ್ನ ಕಾರನ್ನು ಸಿಟಿ ಸೆಂಟರ್ ನಲ್ಲಿ ನಿಲ್ಲಿಸಬೇಕಾಗಿಲ್ಲ.

4 /5

ಲಂಡನ್‌ನ ಈ ಪ್ರದೇಶದಲ್ಲಿ ಪಾರ್ಕಿಂಗ್ ಸ್ಥಳವನ್ನು ಹುಡುಕುವುದು ತುಂಬಾ ಕಷ್ಟದ ಕೆಲಸ. ಅದಕ್ಕಾಗಿಯೇ ಇಲ್ಲಿನ ಪಾರ್ಕಿಂಗ್ ಸ್ಥಳಕ್ಕಾಗಿ  ದೊಡ್ಡಮಟ್ಟದ ಬೆಲೆ ಪಾವತಿಸಬೇಕಾಗಿದೆ.

5 /5

ಈ ಮೊದಲು ನೈಟ್ಸ್‌ಬ್ರಿಡ್ಜ್‌ನಲ್ಲಿ ಪಾರ್ಕಿಂಗ್ ಸ್ಥಳದ ಬೆಲೆ 3 ಕೋಟಿ 51 ಲಕ್ಷ ರೂಗಳಷ್ಟಿತ್ತು. . 2014 ರಲ್ಲಿ, ಬ್ರಿಟನ್‌ನಲ್ಲಿ ಅತ್ಯಂತ ದುಬಾರಿ ಪಾರ್ಕಿಂಗ್ ಸ್ಥಳವನ್ನು 4 ಕೋಟಿ ರೂ.ಗೆ ಮಾರಾಟ ಮಾಡಲಾಯಿತು.