How To Get Rid Of Turmeric Stains: ಆಹಾರ ಸೇವಿಸುವಾಗ ಅಥವಾ ಅಡುಗೆ ಮಾಡುವಾಗ ಅರಿಶಿನ ಕಲೆಗಳು ಆಗಾಗ ಬಟ್ಟೆಗಳಿಗೆ ಅಂಟಿಕೊಳ್ಳುತ್ತವೆ. ಈ ಕಲೆಗಳನ್ನು ತೆಗೆದು ಹಾಕುವುದು ತುಂಬಾ ಕಷ್ಟವಾಗುತ್ತದೆ.
ಅರಿಶಿನ ಕಲೆಗಳನ್ನು ತೆಗೆದುಹಾಕುವುದು ಹೇಗೆ?: ತಿಳಿ ಬಣ್ಣದ ಬಟ್ಟೆಗಳಿಂದ ಕಲೆಗಳನ್ನು ತೆಗೆದುಹಾಕುವುದು ಅಷ್ಟು ಸುಲಭವಲ್ಲ. ಹೀಗಾಗಿಯೇ ಬಹುತೇಕರು ಗಾಢ ಬಣ್ಣದ ಬಟ್ಟೆಗಳನ್ನು ಧರಿಸಲು ಬಯಸುತ್ತಾರೆ. ಬೇಸಿಗೆಯಲ್ಲಿ ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸಲು ಸಲಹೆ ನೀಡಲಾಗುತ್ತದೆ. ಆಹಾರ ಸೇವಿಸುವಾಗ ಅಥವಾ ಅಡುಗೆ ಮಾಡುವಾಗ ಅರಿಶಿನ ಕಲೆಗಳು ಆಗಾಗ ಬಟ್ಟೆಗಳಿಗೆ ಅಂಟಿಕೊಳ್ಳುತ್ತವೆ. ಈ ಕಲೆಗಳನ್ನು ತೆಗೆದು ಹಾಕುವುದು ತುಂಬಾ ಕಷ್ಟವಾಗುತ್ತದೆ. ಈ ಅರಿಶಿನದ ಕಲೆಗಳನ್ನು ತೆಗೆದುಹಾಕುವ ಸುಲಭ ವಿಧಾನಗಳ ಬಗ್ಗೆ ನಾವು ಇಲ್ಲಿ ನಿಮಗೆ ತಿಳಿಸಲಿದ್ದೇವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಅರಿಶಿನದ ಬಣ್ಣವು ಗಾಢವಾಗಿದ್ದು, ಅದು ಬಟ್ಟೆಯ ಮೇಲೆ ಬಿದ್ದಾಗ ಎಷ್ಟು ಪ್ರಯತ್ನಿಸಿದರೂ ಕಲೆ ಹೋಗುವುದಿಲ್ಲ. ಬಿಳಿ ಕುರ್ತಾ, ಶರ್ಟ್ ಅಥವಾ ಪ್ಯಾಂಟ್ ಮೇಲೆ ಅರಿಶಿನ ಬಣ್ಣ ಹತ್ತಿಕೊಂಡರೆ ಚಿಂತಿಸಬೇಕಾಗಿಲ್ಲ. ಸುಲಭವಾದ ಮನೆಮದ್ದುಗಳ ಮೂಲಕ ನೀವು ಈ ಕಲೆಗಳನ್ನು ತೊಡೆದುಹಾಕಬಹುದು.
ಬಿಳಿ ವಿನೆಗರ್ ಅನ್ನು ಆಹಾರದ ರುಚಿಯನ್ನು ಹೆಚ್ಚಿಸಲು ಬಳಸಲಾಗುತ್ತದೆ. ಆದರೆ ಇದನ್ನು ಬಟ್ಟೆಗಳನ್ನು ಸ್ವಚ್ಛಗೊಳಿಸಲು ಸಹ ಬಳಸಬಹುದು. ವಿನೆಗರ್ ಅನ್ನು ಲಿಕ್ವಿಡ್ ಸೋಪಿನೊಂದಿಗೆ ಬೆರೆಸಿ, ಅರಿಶಿನ ಕಲೆ ಇರುವಲ್ಲಿ ಹಚ್ಚಬೇಕು. ಸುಮಾರು ಅರ್ಧ ಘಂಟೆಯವರೆಗೆ ಒಣಗಲು ಬಿಟ್ಟು ನಂತರ ಅದನ್ನು ತೊಳೆಯಬೇಕು.
ಹಲ್ಲುಗಳನ್ನು ಸ್ವಚ್ಛಗೊಳಿಸಲು ಟೂತ್ಪೇಸ್ಟ್ ಅನ್ನು ಬಳಸಲಾಗುತ್ತದೆ. ಆದರೆ ಹೋಗಲಾರದ ಕಲೆಗಳನ್ನು ತೆಗೆದುಹಾಕಲು ಟೂತ್ಪೇಸ್ಟ್ ಅನ್ನು ಬಳಸಬಹುದು. ಈ ಟ್ರಿಕ್ ಕೆಲವೇ ಜನರಿಗೆ ತಿಳಿದಿರುತ್ತದೆ. ಇದನ್ನು ಕಲೆಯಾದ ಜಾಗಕ್ಕೆ ಉಜ್ಜಿ ಸ್ವಲ್ಪ ಹೊತ್ತು ಒಣಗಲು ಬಿಟ್ಟು ಕೊನೆಗೆ ಶುದ್ಧ ನೀರಿನಿಂದ ತೊಳೆಯಬೇಕು.
ನಾವು ಅನೇಕ ಬಾರಿ ಹೊರಗಡೆ ಆಹಾರ ಸೇವಿಸುತ್ತೇವೆ. ಬಿಳಿ ಬಟ್ಟೆಯ ಮೇಲೆ ಅರಿಶಿನ ಕಲೆ ಬಿದ್ದರೆ ಡಿಟರ್ಜೆಂಟ್ ಬಳಸಿ ತೊಳೆಯುವುದು ಕಷ್ಟವಾಗುತ್ತದೆ. ಈ ಸಂದರ್ಭದಲ್ಲಿ ಕಲೆ ಇರುವ ಪ್ರದೇಶದಲ್ಲಿ ನಿಂಬೆ ಉಜ್ಜಿ ಅಥವಾ ಅದರ ಹನಿಗಳನ್ನು ಬಿಟ್ಟು ನಂತರ ಅದನ್ನು ನೀರಿನಿಂದ ಸ್ವಚ್ಛಗೊಳಿಸಬೇಕು.
ಬಿಳಿ ಅಥವಾ ತಿಳಿ ಬಟ್ಟೆಯ ಮೇಲೆ ಅರಿಶಿನ ಕಲೆಯಿದ್ದರೆ, ಮೊದಲು ಅದನ್ನು ತಣ್ಣೀರಿನಲ್ಲಿ ಅದ್ದಿ ಸ್ವಲ್ಪ ಸಮಯದವರೆಗೆ ಡಿಟರ್ಜೆಂಟ್ನಲ್ಲಿ ತೊಳೆಯಿರಿ. ತಣ್ಣೀರಿನ ಪ್ರಭಾವದಿಂದಾಗಿ ಗಟ್ಟಿಯಾದ ಕಲೆಗಳು ಸಹ ಬಿಡುತ್ತವೆ. ಬಿಸಿನೀರು ಕಲೆಗಳ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎಂದು ಹಲವರು ಭಾವಿಸುತ್ತಾರೆ, ಆದರೆ ಇದು ತಪ್ಪು. (ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ತಜ್ಞರ ಸಲಹೆ ತೆಗೆದುಕೊಳ್ಳಿ. ZEE NEWS ಇದನ್ನು ದೃಢಪಡಿಸುವುದಿಲ್ಲ.)