Vakri Shani: ಸೆಪ್ಟೆಂಬರ್ ತಿಂಗಳಲ್ಲಿ, ಈ ರಾಶಿಯವರ ಮೇಲೆ ವಕ್ರೀ ಶನಿಯ ಪ್ರಭಾವ

                                      

ಸೆಪ್ಟೆಂಬರ್ ತಿಂಗಳಲ್ಲಿ, ಕೆಲವು ರಾಶಿಯ ಜನರು ಶನಿ ದೇವನ ವಕ್ರ ದೃಷ್ಟಿಯ ಪರಿಣಾಮವನ್ನು ಸಹಿಸಬೇಕಾಗಬಹುದು. ಮಕರ ರಾಶಿಯಲ್ಲಿ ಶನಿ ದೇವ ಹಿಮ್ಮುಖವಾಗಲಿದ್ದಾನೆ. ದ್ವಾದಶ ರಾಶಿಗಳಲ್ಲಿ 5 ರಾಶಿಗಳ ಮೇಲೆ ಶನಿಯ ವಕ್ರ ದೃಷ್ಟಿಯ ಪರಿಣಾಮ ಇರುತ್ತದೆ ಎಂದು ಹೇಳಲಾಗುತ್ತಿದೆ. ಶನಿಯು ಹಿಮ್ಮೆಟ್ಟಿದಾಗಲೆಲ್ಲಾ, ಕೆಲವು ರಾಶಿಗಳ ಮೇಲೆ ತೊಂದರೆ ಹೆಚ್ಚಾಗುತ್ತದೆ. ಅದರಲ್ಲೂ ಮುಖ್ಯವಾಗಿ ಸಾಡೇ ಸಾತಿ ಶನಿಯ ಪ್ರಭಾವ ಎದುರಿಸುತ್ತಿರುವ ರಾಶಿಯ ಜನರ ಮೇಲೆ ಇದರ ಪ್ರಭಾವ ಅಧಿಕವಾಗಿರುತ್ತದೆ.  ಹಾಗಾಗಿ ಈ ಸಂದರ್ಭದಲ್ಲಿ ಈ ರಾಶಿಚಕ್ರ ಜನರಿಗೆ ಸೆಪ್ಟೆಂಬರ್ ತಿಂಗಳು ಬಹಳ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ವಕ್ರೀ ಶನಿಯಿಂದ ಪ್ರಯೋಜನವನ್ನು ಪಡೆಯಬಹುದು. ಯಾವ ರಾಶಿಯ ಮೇಲೆ ವಕ್ರೀ ಶನಿಯ ಪ್ರಭಾವ ಹೇಗಿರಲಿದೆ ಎಂದು ತಿಳಿಯೋಣ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಮಿಥುನ ರಾಶಿಯಲ್ಲಿ ಶನಿಯ ಧಯೇ ನಡೆಯುತ್ತಿದೆ. ಮಕರ ರಾಶಿಯಲ್ಲಿ ಶನಿಯ ಹಿನ್ನಡೆ ಮಿಥುನ ರಾಶಿಯವರನ್ನು ಆರ್ಥಿಕ ಸಂಕಷ್ಟದಿಂದ ಹೊರತರುತ್ತದೆ. ಆದರೆ ಅವರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ.  

2 /5

ಶನಿಯ ಧಯೇ ಹೊಂದಿರುವ ತುಲಾ ರಾಶಿಯ ಜನರು ಸೆಪ್ಟೆಂಬರ್‌ನ ಮೂರು ವಾರಗಳಲ್ಲಿ ಉತ್ತಮ ಆರ್ಥಿಕ ಲಾಭ ಗಳಿಸುತ್ತಾರೆ, ಆದರೆ ಕೊನೆಯ ವಾರವೂ ಹಾನಿಕಾರಕ ಎಂದು ಹೇಳಲಾಗುತಿದೆ. ಈ ರಾಶಿಯ ಜನರು ಈ ತಿಂಗಳು ಸಾಧ್ಯವಾದಷ್ಟು ಯಾವುದೇ ರೀತಿಯ ವಾದ-ವಿವಾದಗಳಿಂದ ದೂರವಿರಲು ಪ್ರಯತ್ನಿಸಿ.  

3 /5

ಶನಿಯ ಸಾಡೇ ಸಾತಿ ಪ್ರಭಾವದ ಮೊದಲ ಹಂತವನ್ನು ಎದುರಿಸುತ್ತಿರುವ ಧನು ರಾಶಿಯವರಿಗೆ ಸೆಪ್ಟೆಂಬರ್ ತಿಂಗಳು ಸಂತೋಷವನ್ನು ತರುತ್ತದೆ. ಹಣದ ಮನೆಯಲ್ಲಿ ಶನಿ ದೇವ (Shani Deva) ಇರುವುದು ಕೂಡ ಅವರಿಗೆ ಲಾಭವನ್ನು ನೀಡುತ್ತದೆ ಮತ್ತು ಉತ್ತಮ ಹೂಡಿಕೆಗೆ ಕೂಡ ಒಳ್ಳೆಯ ಸಮಯ. ವೃತ್ತಿಜೀವನದಲ್ಲಿ ಯಶಸ್ಸು ಕೂಡ ಇರುತ್ತದೆ. ಇದನ್ನೂ ಓದಿ- Shukra Rashi Parivartan: ಈ ರಾಶಿಯವರಿಗೆ ಅದೃಷ್ಟ ಹೊತ್ತು ತರಲಿದೆ ಶುಕ್ರನ ರಾಶಿ ಪರಿವರ್ತನೆ

4 /5

ಈ ರಾಶಿಯವರು ಶನಿಯ ಎರಡೇ ಹಂತದ ಸಾಡೇ ಸಾತಿಯ (Sade Sati Shani) ಪ್ರಭಾವದಲ್ಲಿದ್ದು ಈ ಸಮಯದಲ್ಲಿ ನೀವು ಅನಾರೋಗ್ಯ ಮತ್ತು ಅಪಘಾತಗಳ ಬಗ್ಗೆ ಬಹಳ ಎಚ್ಚರಿಕೆಯಿಂದ ಇರುವುದು ಮುಖ್ಯ. ಮಕರ ರಾಶಿಯ ಜನರು ವಾಹನ ಚಲಾಯಿಸುವಾಗ ಬಹಳ ಜಾಗರೂಕರಾಗಿಬೇಕು. ಅಷ್ಟೇ ಅಲ್ಲ ಹಣದ ವಿಷಯದಲ್ಲೂ ಎಚ್ಚರಿಕೆಯಿಂದ ಇರಬೇಕು, ಇಲ್ಲವೇ ನಷ್ಟವಾಗಬಹುದು. ಇದನ್ನೂ ಓದಿ- Monthly Horoscope, September 2021: ಸೆಪ್ಟೆಂಬರ್ ತಿಂಗಳಿನಲ್ಲಿ ಈ ರಾಶಿಯವರಿಗೆ ವೃತ್ತಿ ಜೀವನದಲ್ಲಿ ಯಶಸ್ಸು ಪ್ರಾಪ್ತಿ

5 /5

ಸಾಡೇ ಸಾತಿ ಶನಿಯ ಕೊನೆಯ ಪ್ರಭಾವದಲ್ಲಿರುವ ಕುಂಭ ರಾಶಿಯವರಿಗೆ ಶನಿಯು ನಿಮ್ಮ ಕುಟುಂಬದ ಸಮಸ್ಯೆಗಳನ್ನು ಹೆಚ್ಚಿಸಬಹುದು. ಹಣದ ಕೊರತೆಯು ಈ ರಾಶಿಯ ಜನರನ್ನು ಸಾಲ ತೆಗೆದುಕೊಳ್ಳುವಂತೆ ಒತ್ತಾಯಿಸುತ್ತದೆ. ಹಾಗಾಗಿ ಈ ಸಮಯದಲ್ಲಿ ನೀವು ನಿಮ್ಮ ಖರ್ಚು-ವೆಚ್ಚದ ಬಗ್ಗೆ ಹೆಚ್ಚು ನಿಗಾ ವಹಿಸಿ. (ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)