300km ವ್ಯಾಪ್ತಿ, 100 kmph ಟಾಪ್ ಸ್ಪೀಡ್ ಹೊಂದಿರುವ ವುಲಿಂಗ್ ಏರ್ EV

ವುಲಿಂಗ್ ಏರ್ ಇವಿ ಮೈಕ್ರೋ- ಎಲೆಕ್ಟ್ರಿಕ್ ವಾಹನವನ್ನು ಇಂಡೋನೇಷ್ಯಾದಲ್ಲಿ ಘೋಷಿಸಲಾಗಿದೆ. ವುಲಿನ್ ಏರ್ EV ಅನ್ನು SAIC-GM-Wuling ಪಾಲುದಾರಿಕೆ (SGMW) ನಿರ್ಮಿಸಿದೆ ಮತ್ತು ಇದು ಜಂಟಿ ಉದ್ಯಮದ ಮೂರನೇ ಮೈಕ್ರೋ-EV ಕೊಡುಗೆಯಾಗಿದೆ.

Wuling Air EV launch: ಇಂಡೋನೇಷ್ಯಾದಲ್ಲಿ SAIC-GM-Wuling ಹೊಸ ಮೈಕ್ರೋ ಎಲೆಕ್ಟ್ರಿಕ್ ಕಾರ್ ವುಲಿಂಗ್ ಏರ್ EV ಅನ್ನು ಪರಿಚಯಿಸಿದೆ. ಇಂಡೋನೇಷ್ಯಾದಲ್ಲಿ ವುಲಿಂಗ್ ಏರ್ ಇವಿ ಬಿಡುಗಡೆಯು ಒಂದು ರೀತಿಯ ಮೈಲಿಗಲ್ಲು. ಇದು ಚೀನಾದ ಹೊರಗೆ ಮಾರಾಟವಾಗುವ ಚೈನೀಸ್ ಕಂಪನಿಯ ಮೊದಲ EV ಆಗಿದೆ. SGMW ಜಂಟಿ ಉದ್ಯಮಕ್ಕೆ ಇದು ಮೊದಲನೆಯದು. ಇದು ಅದರ ಪೂರ್ವವರ್ತಿಯಾದ ಹಾಂಗ್ ಗುವಾಂಗ್ ಮಿನಿ EV ಯೊಂದಿಗೆ ಕೆಲವು ಹೋಲಿಕೆಗಳನ್ನು ಹಂಚಿಕೊಳ್ಳುತ್ತದೆ, ಆದರೆ ಕೆಲವು ಗಮನಾರ್ಹ ವಿನ್ಯಾಸ ವ್ಯತ್ಯಾಸಗಳನ್ನು ಒಳಗೊಂಡಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ವಾಹನಗಳ ಮೇಲಿನ ಒಲವು ಹೆಚ್ಚಾಗುತ್ತಿದೆ.   SAIC-GM-Wuling ನ ಜಂಟಿ ಉದ್ಯಮವು ತನ್ನ ಮೂರನೇ EV ಅನ್ನು ಪರಿಚಯಿಸಿದೆ. ಇಂಡೋನೇಷ್ಯಾದಲ್ಲಿ ಬಿಡುಗಡೆಯಾದ ಈ ಮೈಕ್ರೋ ಎಲೆಕ್ಟ್ರಿಕ್ ವಾಹನದ ಹೆಸರು ವುಲಿಂಗ್ ಏರ್ ಇವಿ.  

2 /5

ವುಲಿಂಗ್ ಏರ್ ಇವಿ ನೋಟದಲ್ಲಿ ಚಿಕ್ಕದಾಗಿದೆ, ಆದರೆ ಇದು ಅದರ ಪೂರ್ವವರ್ತಿಗಿಂತ ಗಾತ್ರದಲ್ಲಿ ದೊಡ್ಡದಾಗಿದೆ. ಇದರ ಆಯಾಮಗಳು- 117 x 59.3 x 64.2 ಇಂಚುಗಳು. ವಾಹನವು ಎರಡು ವೀಲ್-ಬೇಸ್ ರೂಪಾಂತರಗಳಲ್ಲಿ ಲಭ್ಯವಿದೆ -- 79.1 ಇಂಚುಗಳು ಮತ್ತು 64.4 ಇಂಚುಗಳು.

3 /5

ವುಲಿಂಗ್ ಏರ್ EV 40HP ಮುಂಭಾಗದ ಮೌಂಟೆಡ್ ಎಲೆಕ್ಟ್ರಿಕ್ ಮೋಟರ್‌ನಿಂದ ಚಾಲಿತವಾಗಿದೆ. ಈ ವಾಹನವು ಗಂಟೆಗೆ 100 ಕಿಮೀ ಗರಿಷ್ಠ ವೇಗವನ್ನು ಹೇಳುತ್ತದೆ. ಎಲೆಕ್ಟ್ರಿಕ್ ಕಾರ್ ಲಿಥಿಯಂ ಐರನ್ ಫಾಸ್ಫೇಟ್ (LiFePO4) ಬ್ಯಾಟರಿಯಿಂದ ಚಾಲಿತವಾಗಿದೆ, ಇದು 300 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

4 /5

ನವೆಂಬರ್ 2022 ರಲ್ಲಿ ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯಲಿರುವ G20 ಶೃಂಗಸಭೆಯ ಅಧಿಕೃತ ಕಾರು ಎಂದು ವುಲಿಂಗ್ ಏರ್ ಇವಿ ಗುರುತಿಸಲ್ಪಟ್ಟಿದೆ. ಈ ಎಲೆಕ್ಟ್ರಿಕ್ ಕಾರನ್ನು 2022 ರ ದ್ವಿತೀಯಾರ್ಧದಲ್ಲಿ ಇಂಡೋನೇಷ್ಯಾದಲ್ಲಿ ಪರಿಚಯಿಸಲಾಗುವುದು ಎಂದು ಹೇಳಲಾಗುತ್ತಿದೆ.

5 /5

ವುಲಿಂಗ್ ಏರ್ ಇವಿ ಇಂಡೋನೇಷ್ಯಾ ಮತ್ತು ಚೀನಾದಲ್ಲಿ ಬಿಡುಗಡೆಯಾಗಲಿದೆ. Gizmochina ಪ್ರಕಾರ, Wuling Air EV ಬೆಲೆ $8,250 ಮತ್ತು $9,745 ನಡುವೆ ಇರಬಹುದು. ಭಾರತೀಯ ಕರೆನ್ಸಿಯಲ್ಲಿ ಇದು ಸುಮಾರು 6.5 ಲಕ್ಷದಿಂದ 7.5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಎಲ್ಲಾ ಫೋಟೋಗಳನ್ನೂ BGR.inನಿಂದ ತೆಗೆದುಕೊಳ್ಳಲಾಗಿದೆ