ವರ್ಷಕ್ಕೊಮ್ಮೆ ಋತುಮತಿಯಾಗುತ್ತಾಳೆ ಈ ದೇವಾಲಯದ ದೇವಿ !ಕೆಂಪು ಬಣ್ಣಕ್ಕೆ ತಿರುಗುತ್ತದೆ ದೇವಸ್ಥಾನ ಸಮೀಪದ ನದಿ

Kamakhya Temple River turns red :ಈ ದೇವಾಲಯದಲ್ಲಿ ತಾಯಿಯ ಯೋನಿಯನ್ನು ಪೂಜಿಸಲಾಗುತ್ತದೆ. ಮಾತೃದೇವತೆ ಋತುಸ್ರಾವವನ್ನು ಅನುಭವಿಸುವ ಕಾರಣ ಈ ದೇವಾಲಯದ ದೇವತೆಯನ್ನು ಬ್ಲೀಡಿಂಗ್ ದೇವಿ ಎಂದೂ ಕರೆಯುತ್ತಾರೆ.  

Written by - Ranjitha R K | Last Updated : Jul 15, 2024, 10:30 AM IST
  • ಗುವಾಹಟಿಯ ಕಾಮಾಖ್ಯ ದೇವಿ ದೇವಾಲಯವು ದೇವಿಯ ಶಕ್ತಿಪೀಠಗಳಲ್ಲಿ ಒಂದು
  • ಸತಿಯ ದೇಹದ ತುಂಡುಗಳು ಎಲ್ಲೆಲ್ಲಿ ಬಿದ್ದವೋ ಅವೇ ಶಕ್ತಿಪೀಠಗಳಾಗಿ ಕರೆಸಿಕೊಂಡಿವೆ.
  • ಮಾತಾ ಸತಿಯ ಯೋನಿಯು ಕಾಮಾಖ್ಯ ದೇವಿ ದೇವಸ್ಥಾನದಲ್ಲಿ ಬಿದ್ದಿತ್ತು.
ವರ್ಷಕ್ಕೊಮ್ಮೆ ಋತುಮತಿಯಾಗುತ್ತಾಳೆ ಈ ದೇವಾಲಯದ ದೇವಿ !ಕೆಂಪು ಬಣ್ಣಕ್ಕೆ ತಿರುಗುತ್ತದೆ ದೇವಸ್ಥಾನ ಸಮೀಪದ ನದಿ  title=

Kamakhya Temple River turns red : ಗುವಾಹಟಿಯ ಕಾಮಾಖ್ಯ ದೇವಿ ದೇವಾಲಯವು ದೇವಿಯ ಶಕ್ತಿಪೀಠಗಳಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ತನ್ನ ಪತಿ ಶಿವನ ಅವಮಾನವನ್ನು ಸಹಿಸದ ಸತಿ ದೇವಿಯು  ಯಜ್ಞಕುಂಡಕ್ಕೆ ಹಾರಿ ಆತ್ಮದಹನ ಮಾಡಿಕೊಳ್ಳುತ್ತಾರೆ.ಇದಾದ ನಂತರ  ಶಿವನು ಸತಿಯ ದೇಹವನ್ನು ಹೊತ್ತುಕೊಂಡು ಶೋಕಿಸುತ್ತಾ ಭೂಮಿಯ ಸುತ್ತಲೂ ತಿರುಗಲು ಪ್ರಾರಂಭಿಸುತ್ತಾರೆ.ಭಗವಾನ್ ಶಿವನ ಕೋಪದಿಂದ ವಿನಾಶ ಆಗದೇ ಇರಲಿ ಎನ್ನುವ ಕಾರಣಕ್ಕಾಗಿ ವಿಷ್ಣುವು ತನ್ನ ಸುದರ್ಶನ ಚಕ್ರದಿಂದ ಸತಿ ದೇವಿಯ ದೇಹವನ್ನು ಅನೇಕ ತುಂಡುಗಳಾಗಿ ಮಾಡಿಬಿಡುತ್ತಾರೆ.ಆಗ ಸತಿಯ ದೇಹದ ತುಂಡುಗಳು ಎಲ್ಲೆಲ್ಲಿ ಬಿದ್ದವೋ ಅವೇ ಶಕ್ತಿಪೀಠಗಳಾಗಿ ಕರೆಸಿಕೊಂಡಿವೆ.ಮಾತಾ ಸತಿಯ ಯೋನಿಯು ಕಾಮಾಖ್ಯ ದೇವಿ ದೇವಸ್ಥಾನದಲ್ಲಿ ಬಿದ್ದಿತ್ತು.ಆದ್ದರಿಂದ ಈ ದೇವಾಲಯದಲ್ಲಿ ತಾಯಿಯ ಯೋನಿಯನ್ನು ಪೂಜಿಸಲಾಗುತ್ತದೆ. ಮಾತೃದೇವತೆ ಋತುಸ್ರಾವವನ್ನು ಅನುಭವಿಸುವ ಕಾರಣ ಈ ದೇವಾಲಯದ ದೇವತೆಯನ್ನು ಬ್ಲೀಡಿಂಗ್ ದೇವಿ ಎಂದೂ ಕರೆಯುತ್ತಾರೆ. 

 ವರ್ಷಕ್ಕೊಮ್ಮೆ ಋತುಮತಿಯಾಗುತ್ತಾಳೆ ದೇವಿ : 
ಕಾಮಾಖ್ಯ ದೇವಿಯನ್ನು 'ಹರಿಯುವ ರಕ್ತದ ದೇವತೆ'ಎಂದೂ ಕರೆಯುತ್ತಾರೆ.ದೇವಿಯ ಯೋನಿಯನ್ನು ಪೂಜಿಸುವ ಏಕೈಕ ದೇವಾಲಯ ಇದಾಗಿದೆ.ಈ ದೇವಾಲಯದಲ್ಲಿ ಯಾವುದೇ ವಿಗ್ರಹವಿಲ್ಲ.ಇದಲ್ಲದೆ, ಕಾಮಾಖ್ಯ ದೇವಿಯು ವರ್ಷಕ್ಕೊಮ್ಮೆ ಋತುಮತಿಯಾಗುತ್ತಾಳೆ.ಈ ಸಮಯದಲ್ಲಿ ಅವಳ ಯೋನಿಯಿಂದ ರಕ್ತ ಹರಿಯುತ್ತದೆ.ಪ್ರತಿ ವರ್ಷ ಜೂನ್ ತಿಂಗಳಿನಲ್ಲಿ ಕಾಮಾಖ್ಯ ದೇವಿಯ ಋತುಸ್ರಾವವಾಗುತ್ತದೆ.ಈ ಸಮಯದಲ್ಲಿ ದೇವಾಲಯವನ್ನು 3 ದಿನಗಳವರೆಗೆ ಮುಚ್ಚಲಾಗುತ್ತದೆ.  ನಂತರ ಮಾತ್ರ ಇಲ್ಲಿ ಪ್ರಸಿದ್ಧ ಅಂಬುಬಾಚಿ ಜಾತ್ರೆ ನಡೆಯುತ್ತದೆ. 

ಇದನ್ನೂ ಓದಿ: ಈ ರಾಶಿಯವರು ಕಿರು ಬೆರಳಿಗೆ ಮುತ್ತಿನ ಉಂಗುರ ಧರಿಸಿದರೆ ಹಿಂಬಾಲಿಸುವುದು ಅದೃಷ್ಟ!ಯಶಸ್ಸಿನ ಉತ್ತುಂಗಕ್ಕೆ ಏರಲು ಇದೇ ದಾರಿ

ಕೆಂಪು ಬಣ್ಣಕ್ಕೆ ತಿರುಗುತ್ತದೆ  ಬಿಳಿ ವಸ್ತ್ರ : 
ದೇವಿಗೆ ಋತುಸ್ರಾವವಾದಾಗ ದೇವಸ್ಥಾನದ ಗರ್ಭಗುಡಿಯಲ್ಲಿ ಬಿಳಿ ಬಟ್ಟೆಯನ್ನು ಇಟ್ಟು ದೇವಸ್ಥಾನವನ್ನು ಮುಚ್ಚಲಾಗುತ್ತದೆ.3 ದಿನಗಳ ನಂತರ ಮತ್ತೆ ದೇವಾಲಯವನ್ನು ತೆರೆಯುವಾಗ ಬಟ್ಟೆಯು ಕೆಂಪು ಬಣ್ಣಕ್ಕೆ ತಿರುಗಿರುತ್ತದೆ.ಈ ಬಟ್ಟೆಯನ್ನು ಭಕ್ತರಿಗೆ ಪ್ರಸಾದವಾಗಿ ವಿತರಿಸಲಾಗುತ್ತದೆ. 

ಕೆಂಪು ಬಣ್ಣಕ್ಕೆ ತಿರುಗುತ್ತದೆ ನದಿಯ ನೀರು :
ಈ ದೇವಾಲಯದ ಬಳಿ ಹಾದುಹೋಗುವ ಬ್ರಹ್ಮಪುತ್ರ ನದಿಯ ನೀರು ಕೂಡಾ ಈ ಸಮಯದಲ್ಲಿ ಕೆಂಪು ಬಣ್ಣಕ್ಕೆ ತಿರುಗುತ್ತದೆ.ಈ ನದಿಯ ದಡದಲ್ಲಿ ನೀಲಾಚಲ ಪರ್ವತದ ಮೇಲೆ ಕಾಮಾಖ್ಯ ದೇವಿಯ ದೇವಾಲಯವಿದೆ.ಈ ರೀತಿಯಾಗಿ ಪ್ರತಿ ವರ್ಷವೂ ತಾಯಿಯ ಋತುಸ್ರಾವ ಮತ್ತು ಬ್ರಹ್ಮಪುತ್ರ ನದಿಯ ನೀರು ಕೆಂಪಗಾಗುವುದು ಇಂದಿಗೂ ನಿಗೂಢವಾಗಿದೆ.ಪ್ರತಿ ವರ್ಷ ಲಕ್ಷಾಂತರ ಭಕ್ತರು ಕಾಮಾಖ್ಯ ದೇವಿಯ ಈ ಅದ್ಭುತ ದೇವಾಲಯಕ್ಕೆ ಭೇಟಿ ನೀಡುತ್ತಾರೆ. 

ಇದನ್ನೂ ಓದಿ: Rahu Gochar: ಶನಿ ನಕ್ಷತ್ರದಲ್ಲಿ ರಾಹು, ಈ ರಾಶಿಯವರಿಗೆ ತುಂಬಾ ಎಚ್ಚರಿಕೆಗೆ ಅಗತ್ಯ, ಇಲ್ಲವೇ ಭಾರೀ ನಷ್ಟ

(ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News