Women T20 World Cup: ಮಹಿಳಾ T20 ವಿಶ್ವಕಪ್ 2023ರ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ: ಫೈನಲ್ ಯಾವಾಗ?
ICC ಮಹಿಳಾ T20 ವಿಶ್ವಕಪ್‌ನ ಎಂಟನೇ ಆವೃತ್ತಿಯು 10 ಫೆಬ್ರವರಿ 2023 ರಂದು ಆತಿಥೇಯ ದಕ್ಷಿಣ ಆಫ್ರಿಕಾ ಶ್ರೀಲಂಕಾವನ್ನು ಎದುರಿಸುವುದರೊಂದಿಗೆ ಪ್ರಾರಂಭವಾಗುತ್ತದೆ. ಕೇಪ್ ಟೌನ್, ಪರ್ಲ್ ಮತ್ತು Gqeberhaದಲ್ಲಿ ಪಂದ್ಯಗಳನ್ನು ಆಯೋಜಿಸಲಾಗಿದೆ. ನಾಕೌಟ್ ಪಂದ್ಯಗಳು ಕೇಪ್ ಟೌನ್‌ನಲ್ಲಿ ನಡೆಯಲಿವೆ.
ಮಹಿಳಾ T20 ವಿಶ್ವಕಪ್ 2023 ಪೂರ್ಣ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಟೀಂ ಇಂಡಿಯಾ ಮತ್ತು ಪಾಕಿಸ್ತಾನ ಒಂದೇ ಗುಂಪಿನಲ್ಲಿದೆ. ಇನ್ನು ಫೆಬ್ರವರಿ 26 ರಂದು ಫೈನಲ್ ನಡೆಯಲಿದೆ. ಇಂದು 10 ತಂಡಗಳ ಪಂದ್ಯಾವಳಿಯ ವೇಳಾಪಟ್ಟಿ ಮತ್ತು ಗುಂಪುಗಳನ್ನು ಐಸಿಸಿ ಬಿಡುಗಡೆ ಮಾಡಿದೆ.
ICC ಮಹಿಳಾ T20 ವಿಶ್ವಕಪ್‌ನ ಎಂಟನೇ ಆವೃತ್ತಿಯು 10 ಫೆಬ್ರವರಿ 2023 ರಂದು ಆತಿಥೇಯ ದಕ್ಷಿಣ ಆಫ್ರಿಕಾ ಶ್ರೀಲಂಕಾವನ್ನು ಎದುರಿಸುವುದರೊಂದಿಗೆ ಪ್ರಾರಂಭವಾಗುತ್ತದೆ. ಕೇಪ್ ಟೌನ್, ಪರ್ಲ್ ಮತ್ತು Gqeberhaದಲ್ಲಿ ಪಂದ್ಯಗಳನ್ನು ಆಯೋಜಿಸಲಾಗಿದೆ. ನಾಕೌಟ್ ಪಂದ್ಯಗಳು ಕೇಪ್ ಟೌನ್‌ನಲ್ಲಿ ನಡೆಯಲಿವೆ.
ಇದನ್ನೂ ಓದಿ: India vs South Africa 3rd Match: ಅಂತಿಮ ಪಂದ್ಯಕ್ಕೆ ವಿರಾಟ್ ಕೊಹ್ಲಿಗೆ ವಿಶ್ರಾಂತಿ
ಭಾರತೀಯ ಮಹಿಳಾ ತಂಡವನ್ನು 2023 ರ ಮಹಿಳಾ T20 ವಿಶ್ವಕಪ್ ಬಿ ಗುಂಪಿನಲ್ಲಿ ಇರಿಸಲಾಗಿದೆ. ಹರ್ಮನ್‌ಪ್ರೀತ್ ಕೌರ್ ಅವರ ಭಾರತ ತಂಡವು 2020 ರಲ್ಲಿ ಆಸ್ಟ್ರೇಲಿಯದಲ್ಲಿ ಆಟವಾಡಿದ್ದು, ಈ ಸಂದರ್ಭದಲ್ಲಿ ರನ್ನರ್ ಅಪ್ ಆಗಿ ಆಟ ಮುಗಿಸಿತ್ತು. ಮುಂದಿನ ವರ್ಷ ದಕ್ಷಿಣ ಆಫ್ರಿಕಾದಲ್ಲಿ T20 ವಿಶ್ವಕಪ್‌ನಲ್ಲಿ ಭಾಗವಹಿಸಲಿರುವ ಟೀಂ ಇಂಡಿಯಾ ತನ್ನ ಚೊಚ್ಚಲ ICC ಕಿರೀಟವನ್ನು ಗೆಲ್ಲಲು ಪ್ರಯತ್ನಿಸುತ್ತಿದೆ.
ಐಸಿಸಿ ಇಂದು 10 ತಂಡಗಳ ಪಂದ್ಯಾವಳಿಯ ವೇಳಾಪಟ್ಟಿ ಮತ್ತು ಗುಂಪುಗಳನ್ನು ಬಿಡುಗಡೆ ಮಾಡಿದೆ. ಬಿ ಗುಂಪಿನಲ್ಲಿ ಭಾರತದ ಸಾಂಪ್ರದಾಯಿಕ ಎದುರಾಳಿಯಾದ ಪಾಕಿಸ್ತಾನ ಸೇರಿ ವೆಸ್ಟ್ ಇಂಡೀಸ್, ಇಂಗ್ಲೆಂಡ್ ಮತ್ತು ಐರ್ಲೆಂಡ್ ಇವೆ. ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ.
ಐಸಿಸಿ ರಾಯಭಾರಿ ಮಿಥಾಲಿ ರಾಜ್ ಉಪಸ್ಥಿತಿಯಲ್ಲಿ ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್ ಕ್ರಿಕೆಟ್ ಮೈದಾನದಲ್ಲಿ ವಿಶಿಷ್ಟವಾದ ಆಫ್ರಿಕನ್ ಈವೆಂಟ್‌ನಲ್ಲಿ ಸೋಮವಾರ ಅಂತಿಮ ಪಂದ್ಯದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಯಿತು.
ಗುಂಪು 1: ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ
ಗುಂಪು 2: ಇಂಗ್ಲೆಂಡ್, ಭಾರತ, ವೆಸ್ಟ್ ಇಂಡೀಸ್, ಪಾಕಿಸ್ತಾನ, ಐರ್ಲೆಂಡ್
ಫೆಬ್ರವರಿ 21 ರವರೆಗೆ ನಡೆಯುವ ಗುಂಪು ಆಟಗಳಲ್ಲಿ, ಪ್ರತಿ ತಂಡವು ತಮ್ಮ ಗುಂಪಿನ ಇತರ ನಾಲ್ಕು ತಂಡಗಳನ್ನು ಒಮ್ಮೆ ಎದುರಿಸಲಿದೆ. ಗುಂಪು ಹಂತದ ಕೊನೆಯಲ್ಲಿ ಪ್ರತಿ ಗುಂಪಿನಲ್ಲಿ ಅಗ್ರ ಎರಡು ತಂಡಗಳು ಸೆಮಿ-ಫೈನಲ್ ಪಂದ್ಯಗಳನ್ನು ಆಡುತ್ತವೆ.
ICC ಮಹಿಳಾ T20 ವಿಶ್ವಕಪ್ 2023 ಪಂದ್ಯಗಳ ಸಂಪೂರ್ಣ ಪಟ್ಟಿ
10 ಫೆಬ್ರವರಿ: ದಕ್ಷಿಣ ಆಫ್ರಿಕಾ ವಿರುದ್ಧ ಶ್ರೀಲಂಕಾ- ಕೇಪ್ ಟೌನ್
11 ಫೆಬ್ರವರಿ: ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್- ಪಾರ್ಲ್
11 ಫೆಬ್ರವರಿ: ಆಸ್ಟ್ರೇಲಿಯಾ ವಿರುದ್ಧ ನ್ಯೂಜಿಲೆಂಡ್- ಪಾರ್ಲ್
12 ಫೆಬ್ರವರಿ: ಭಾರತ ವಿರುದ್ಧ ಪಾಕಿಸ್ತಾನ-ಕೇಪ್ ಟೌನ್
12 ಫೆಬ್ರವರಿ: ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ-ಕೇಪ್ ಟೌನ್
13 ಫೆಬ್ರವರಿ: ಐರ್ಲೆಂಡ್ ವಿರುದ್ಧ ಇಂಗ್ಲೆಂಡ್ - ಪಾರ್ಲ್
13 ಫೆಬ್ರವರಿ: ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲೆಂಡ್- ಪಾರ್ಲ್
14 ಫೆಬ್ರವರಿ :ಆಸ್ಟ್ರೇಲಿಯಾ ವಿರುದ್ಧ ಬಾಂಗ್ಲಾದೇಶ- Gqeberha
15 ಫೆಬ್ರವರಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಕೇಪ್ ಟೌನ್
15 ಫೆಬ್ರವರಿ: ಪಾಕಿಸ್ತಾನ ವಿರುದ್ಧ ಐರ್ಲೆಂಡ್- ಕೇಪ್ ಟೌನ್
16 ಫೆಬ್ರವರಿ :ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯಾ- Gqeberha
17 ಫೆಬ್ರವರಿ: ನ್ಯೂಜಿಲೆಂಡ್ ವಿರುದ್ಧ ಬಾಂಗ್ಲಾದೇಶ -ಕೇಪ್ ಟೌನ್
17 : ಫೆಬ್ರವರಿ ವೆಸ್ಟ್ ಇಂಡೀಸ್ ವಿರುದ್ಧ ಐರ್ಲೆಂಡ್ -ಕೇಪ್ ಟೌನ್
18 ಫೆಬ್ರವರಿ: ಇಂಗ್ಲೆಂಡ್ ವಿರುದ್ಧ ಭಾರತ -ಜಿಕೆಬರ್ಹಾ
18 ಫೆಬ್ರವರಿ: ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ- Gqeberha
19 ಫೆಬ್ರವರಿ: ಪಾಕಿಸ್ತಾನ ವಿರುದ್ಧ ವೆಸ್ಟ್ ಇಂಡೀಸ್-ಪಾರ್ಲ್
19 ಫೆಬ್ರವರಿ: ನ್ಯೂಜಿಲೆಂಡ್ ವಿರುದ್ಧ ಶ್ರೀಲಂಕಾ- ಪಾರ್ಲ್
20 ಫೆಬ್ರವರಿ: ಐರ್ಲೆಂಡ್ ವಿರುದ್ಧ ಭಾರತ Gqeberha
21 ಫೆಬ್ರವರಿ: ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ-ಕೇಪ್ ಟೌನ್
21 ಫೆಬ್ರವರಿ: ದಕ್ಷಿಣ ಆಫ್ರಿಕಾ ವಿರುದ್ಧ ಬಾಂಗ್ಲಾದೇಶ-ಕೇಪ್ ಟೌನ್
23 ಫೆಬ್ರವರಿ: ಸೆಮಿ-ಫೈನಲ್ 1- ಕೇಪ್ ಟೌನ್
24 ಫೆಬ್ರವರಿ: ರಿಸರ್ವ್ ಡೇ- ಕೇಪ್ ಟೌನ್
24 ಫೆಬ್ರವರಿ: ಸೆಮಿ-ಫೈನಲ್ 2- ಕೇಪ್ ಟೌನ್
25 ಫೆಬ್ರವರಿ: ರಿಸರ್ವ್ ಡೇ- ಕೇಪ್ ಟೌನ್
26 ಫೆಬ್ರವರಿ: ಫೈನಲ್- ಕೇಪ್ ಟೌನ್
27 ಫೆಬ್ರವರಿ: ರಿಸರ್ವ್ ಡೇ-ಕೇಪ್ ಟೌನ್
ಇದನ್ನೂ ಓದಿ: Surya Kumar Yadav ಆಟಕ್ಕೆ ದಾಖಲೆಗಳು ಉಡೀಸ್: ಮಿ.360 ಮುರಿದ ರೆಕಾರ್ಡ್ ಗಳ ಪಟ್ಟಿ ಇಲ್ಲಿದೆ ನೋಡಿ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.