Virat kohli Video Viral : ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧ 16 ರನ್‌ಗಳ ಜಯ ದಾಖಲಿಸಲು ಟೀಂ ಇಂಡಿಯಾ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿತು, ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಈ ಮೂಲಕ ರೋಹಿತ್ ಶರ್ಮಾ ತವರಿನಲ್ಲಿ T20I ಸರಣಿಯಲ್ಲಿ ಪ್ರೋಟೀಸ್ ಅನ್ನು ಸೋಲಿಸಿದ ಮೊದಲ ಭಾರತೀಯ ನಾಯಕರಾದರು. ಸೂರ್ಯಕುಮಾರ್ ಯಾದವ್ (61), ಕೆಎಲ್ ರಾಹುಲ್ (57), ವಿರಾಟ್ ಕೊಹ್ಲಿ (49*) ಮತ್ತು ರೋಹಿತ್ ಶರ್ಮಾ (43) ಅವರ ಅದ್ಭುತ ಕೊಡುಗೆಯೊಂದಿಗೆ ಭಾರತ 20 ಓವರ್‌ಗಳಲ್ಲಿ 237/3 ಸ್ಕೋರ್ ಮಾಡಿತು.
ಇದನ್ನೂ ಓದಿ : Jasprit Bumrah : ಟಿ20 ವಿಶ್ವಕಪ್‌ನಲ್ಲಿ ಬುಮ್ರಾ ಕೊರತೆ ನೀಗಿಸಲು ಈ ಸ್ಪೀಡ್ ಬೌಲರ್ಗೆ ಚಾನ್ಸ್!
ಈ ಪಂದ್ಯದ ವೇಳೆ ಮೈದಾನದ ಎಲ್ಲಾ ಮೂಲೆಗಳಲ್ಲೂ ಬೌಂಡರಿ ಸಿಕ್ಸರ್‌ಗಳನ್ನು ಟೀಂ ಇಂಡಿಯಾ ಆಟಗಾರರು ಸಿಡಿಸಿದರು. ಸೂರ್ಯಕುಮಾರ್ ಯಾದವ್, ದಕ್ಷಿಣ ಆಫ್ರಿಕಾದ ಬೌಲರ್‌ಗಳ ಮೇಲೆ ಸ್ಫೋಟಕ ಆಟ ಪ್ರದರ್ಶಿಸಿದರು. ಇನ್ನಿಂಗ್ಸ್‌ನ 19ನೇ ಓವರ್‌ನಲ್ಲಿ ಸೂರ್ಯಕುಮಾರ್ ಔಟಾದ ಬಳಿಕ ಕೊಹ್ಲಿಯ ಅದ್ಭುತ ಬ್ಯಾಟಿಂಗ್ ಫ್ಯಾನ್ಸ್ ಮನಗೆದ್ದಿತು. ಅಂತಿಮವಾಗಿ 49 ರನ್ ಗಳಿಸಿ ಅಜೇಯರಾಗಿ ಉಳಿದ ಕಿಂಗ್ ಕೊಹ್ಲಿ, ಅರ್ಧಶತಕ ವಂಚಿತರಾಗಿದ್ದು ಬೇಸರ ಮೂಡಿಸಿದೆ. ಆದರೆ ಈ ವೇಳೆ ದಿನೇಶ್ ಕಾರ್ತಿಕ್ ಕಡೆಗೆ ವಿರಾಟ್ ಕೊಹ್ಲಿ ಮಾಡಿದ ಗೆಸ್ಚರ್ ಎಲ್ಲರ ಹೃದಯ ಗೆಲ್ಲುತ್ತಿದೆ. ಅಲ್ಲದೇ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಕೂಡ ಆಗುತ್ತಿದೆ.
That's what made him king, 🐐
Team & teammates >>>>Anything
Also this is the reason behind Rohit calls him leader of the team.That's Virat Kohli for u #ViratKohli𓃵 pic.twitter.com/GhVVN7qyJs
— Mayur (@133_AT_Hobart) October 2, 2022
ದಿನೇಶ್ ಕಾರ್ತಿಕ್ ಕೊನೆಯ ಓವರ್‌ನಲ್ಲಿ ಸ್ಟ್ರೈಕ್‌ನಲ್ಲಿದ್ದರು ಮತ್ತು ರಬಾಡ ವಿರುದ್ಧ ಎರಡನೇ ಎಸೆತದಲ್ಲಿ ಬೌಂಡರಿಯೊಂದಿಗೆ ಆಟ ಪ್ರಾರಂಭಿಸಿದರು. ಓವರ್‌ನ ನಾಲ್ಕನೇ ಎಸೆತದಲ್ಲಿ, ಕಾರ್ತಿಕ್ ಅವರು ಡೀಪ್ ಸ್ಕ್ವೇರ್ ಲೆಗ್‌ನಲ್ಲಿ ಚೆಂಡನ್ನು ಕಳುಹಿಸಿದರು. ಈ ವೇಳೆ ಕೊಹ್ಲಿಯ ಬಳಿಗೆ ಹೋದರು ಏಕೆಂದರೆ ಅವರು ತಮ್ಮ ಅರ್ಧಶತಕವನ್ನು ತಲುಪಲು ಕೇವಲ ಒಂದು ರನ್ ಮಾತ್ರ ಅಗತ್ಯವಿತ್ತು.
ಇದನ್ನೂ ಓದಿ : Virat Kohli : ʼನಿಮ್ಮ ಅತ್ತಿಗೆ ಜೊತೆ ಬ್ಯುಸಿ ಇದ್ದಿನ್ರೋ... ಪ್ಲೀಸ್ ಡಿಸ್ಟರ್ಬ್ ಮಾಡಬೇಡಿʼ
ಸಿಂಗಲ್ ಪಡೆದು ಕೊಹ್ಲಿ ಸ್ಟ್ರೈಕ್‌ಗೆ ಬಂದು, ಅರ್ಧಶತಕ ಸಿಡಿಸುವ ಅವಕಾಶವಿತ್ತು. ಆದರೆ ಅರ್ಧಶತಕ ವಿರಾಟ್ ಕೊಹ್ಲಿಗೆ ಅಗತ್ಯವಿರಲಿಲ್ಲ. ನನಗೆ ಅರ್ಧಶತಕದ ಅಗತ್ಯವಿಲ್ಲ. ನೀನು ಆಡು ಎಂಬ ರೀತಿಯಲ್ಲಿ ದಿನೇಶ್ ಕಾರ್ತಿಕ್‌ಗೆ ಕೊಹ್ಲಿ ಸನ್ನೆ ಮಾಡಿದರು. ಸಂಪೂರ್ಣ ನಿಸ್ವಾರ್ಥ ಸೂಚಕದಲ್ಲಿ, ಕಾರ್ತಿಕ್ ಅವರನ್ನು ಸ್ಟ್ರೈಕ್‌ನಲ್ಲಿ ಉಳಿಯಲು ಮತ್ತು ಇನ್ನಿಂಗ್ಸ್ ಅನ್ನು ಬಲವಾಗಿ ಮುಗಿಸಲು ಕೇಳಿಕೊಂಡರು. ಈ ಸಂದರ್ಭದ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಕಾರ್ತಿಕ್ ಕಡೆಗೆ ಕೋಹ್ಲಿ ಮಾಡಿದ ಸನ್ನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತಿದೆ. ಅಲ್ಲದೇ ನೆಟ್ಟಿಗರ ಹೃದಯವನ್ನು ಸಹ ಗೆದ್ದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.