ಭಾನುವಾರ ಗುವಾಹಟಿಯ ಬರ್ಸಾಪರ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ T20Iನ 20 ಓವರ್‌ಗಳಲ್ಲಿ ಭಾರತವು ಮೂರು ವಿಕೆಟ್ ನಷ್ಟಕ್ಕೆ 237 ಬೃಹತ್ ಮೊತ್ತ ಕಲೆ ಹಾಕಿ ಗೆಲುವು ಸಾಧಿಸಿತ್ತು. ಇನ್ನು ಈ ಪಂದ್ಯದಲ್ಲಿ ಸ್ಟಾರ್ ಗಳಂತೆ ಮಿಂಚಿದ್ದು ಸೂರ್ಯಕುಮಾರ್ ಯಾದವ್ ಮತ್ತು ಕೆಎಲ್ ರಾಹುಲ್.
ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರ ಮುಂದೆ, ರಾಹುಲ್ 28 ಎಸೆತಗಳಲ್ಲಿ 57 ರನ್ ಗಳಿಸಿ ಕಣ್ಣಿಗೆ ಖುಷಿಕೊಟ್ಟರು. ಇವರಿಗೆ ಸಾಥ್ ನೀಡಿದ್ದ ಸೂರ್ಯಕುಮಾರ್ ಅವರು ಕೇವಲ 22 ಎಸೆತಗಳಲ್ಲಿ 61 ರನ್ ಗಳಿಸುವ ಮೂಲಕ ಮಿ.360 ಎಂಬುದನ್ನು ಮತ್ತೆ ಸಾಬೀತುಪಡಿಸಿದರು. ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ದಿನೇಶ್ ಕಾರ್ತಿಕ್ ಅವರು ತಮ್ಮ ಪಾತ್ರಗಳನ್ನು ಉತ್ತಮವಾಗಿ ಆಡಿದ್ದರು ಎನ್ನಬಹುದು.
ಇದನ್ನೂ ಓದಿ: ಬಹುದಾಖಲೆ ಬರೆದ ಟೀಂ ಇಂಡಿಯಾ: ಮೊದಲ ಬಾರಿ ಭಾರತದಲ್ಲಿ ಸೋಲಿನ ರುಚಿ ಕಂಡ ಸೌತ್ ಆಫ್ರಿಕಾ
ಇನ್ನು ಸೂರ್ಯ ಕುಮಾರ್ ಯಾದವ್ ಈಗಾಗಲೇ ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಅದರ ಸಂಪೂರ್ಣ ಪಟ್ಟಿ ಇಲ್ಲಿದೆ.
ಅತೀ ಕಡಿಮೆ ಬಾಲ್ ಗೆ ವೇಗವಾಗಿ 1000 ರನ್ ಬಾರಿಸಿದ ಆಟಗಾರರ ಪಟ್ಟಿ:
ಸೂರ್ಯ ಕುಮಾರ್ ಯಾದವ್ 573 ಬಾಲ್ ಗೆ 1000 ರನ್ (SR 174) *
ಗ್ಲೆನ್ ಮ್ಯಾಕ್ಸ್‌ವೆಲ್ 604 ಬಾಲ್ (SR 166)
ಕಾಲಿನ್ ಮುನ್ರೊ 63 ಬಾಲ್ 5 (SR 157)
ಎವಿನ್ ಲೆವಿಸ್ 640 ಬಾಲ್ (SR 156)
ತಿಸರ ಪೆರೆರಾ 654 ಬಾಲ್(SR 153)
ಅತಿ ವೇಗವಾಗಿ T20I ಅರ್ಧ ಶತಕ ಬಾರಿಸಿದ ಆಟಗಾರರು:
ಯುವರಾಜ್ ಸಿಂಗ್ ವಿರುದ್ಧ ಇಂಗ್ಲೆಂಡ್ ಡರ್ಬನ್ 2007-12
ಕೆಎಲ್ ರಾಹುಲ್ ವಿರುದ್ಧ ಸ್ಕೋ ದುಬೈ 2021-18
ಸೂರ್ಯ ಕುಮಾರ್ ಯಾದವ್ ವಿರುದ್ಧ SA ಗುವಾಹಟಿ 2022 *-18
ಗೌತಮ್ ಗಂಭೀರ್ ವಿರುದ್ಧ ಎಸ್ಎಲ್ ನಾಗ್ಪುರ್ 2009-19
ಯುವರಾಜ್ ಸಿಂಗ್ ವಿರುದ್ಧ ಆಸ್ ಡರ್ಬನ್ 2007-20
ಯುವರಾಜ್ ಸಿಂಗ್ ವಿರುದ್ಧ SL ಮೊಹಾಲಿ 2009-20
ದಕ್ಷಿಣ ಆಫ್ರಿಕಾ ವಿರುದ್ಧ ಟಿ20ಯಲ್ಲಿ ಗರಿಷ್ಠ ಮೊತ್ತ:
237/3 ಭಾರತ-ಗುವಾಹಟಿ 2022 *
236/6 ವೆಸ್ಟ್ ಇಂಡೀಸ್-ಜೋಬರ್ಗ್ 2015
234/6 ಇಂಗ್ಲೆಂಡ್- ಬ್ರಿಸ್ಟಲ್ 2022
T20I ನಲ್ಲಿ ಹೆಚ್ಚಿನ ಬೌಂಡರಿಗಳು:
42 ಭಾರತ vs ಶ್ರೀಲಂಕಾ ಇಂದೋರ್ 2017
38 ಭಾರತ vs ಸೌತ್ ಆಫ್ರಿಕಾ ಗುವಾಹಟಿ 2022 *
35 ಭಾರತ vs ವೆಸ್ಟ್ ಇಂಡೀಸ್ ಮುಂಬೈ WS 2019
ಇದನ್ನೂ ಓದಿ: ಅಂಪೈರ್ ನಿರ್ಧಾರಕ್ಕೆ ಅಸಮಾಧಾನಗೊಂಡ ರೋಹಿತ್ ಮೈದಾನದಲ್ಲಿ ಮಾಡಿದ್ದೇನು ಗೊತ್ತಾ? ವಿಡಿಯೋ ನೋಡಿ
ಜೊತೆಯಾಟದಲ್ಲಿ ಶತಕ ದಾಟಿದ ಜೋಡಿಗಳು:
ದಕ್ಷಿಣ ಆಫ್ರಿಕಾ ವಿರುದ್ಧ 14.57 ರನ್ ರೇಟ್ ನಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ವಿರಾಟ್ ಕೊಹ್ಲಿ 42 ಬಾಲ್ ಗೆ 102 ರನ್ ಬಾರಿಸಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ 13.10 ರನ್ ರೇಟ್ ನಲ್ಲಿ ಕೆ ಎಲ್ ರಾಹುಲ್ ಮತ್ತು ಎಂ ಎಸ್ ಧೋನಿ 49 ಬಾಲ್ ಗೆ 107 ರನ್ ಬಾರಿಸಿದ್ದರು. (2016)
ಶ್ರೀಲಂಕಾ ವಿರುದ್ಧ 13.02 ರನ್ ರೇಟ್ ನಲ್ಲಿ ಕೆಎಲ್ ರಾಹುಲ್ - ರೋಹಿತ್ ಶರ್ಮಾ 76 ಎಸೆತಗಳಲ್ಲಿ 165 ರನ್ ಬಾರಿಸಿದ್ದರು (2017)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.