ನವದೆಹಲಿ: ಕ್ರಿಕೆಟ್ ಆಸಕ್ತರು ಆಟ ನೋಡುವುದಷ್ಟೇ ಅಲ್ಲ ಅದನ್ನು ಕೇಳುತ್ತಾರೆ. ಅದರ ಹಿಂದೆ ಯಾವುದೇ ಧ್ವನಿ ಇಲ್ಲದಿದ್ದರೆ, ದೃಶ್ಯ ಆಕರ್ಷಣೆಯು ಅಷ್ಟೊಂದು ಪರಿಣಾಮಕಾರಿಯಾಗಿರುವುದಿಲ್ಲ. ಕ್ರಿಕೆಟ್ ಅಥವಾ ಇನ್ಯಾವುದೇ ಪಂದ್ಯಗಳಲ್ಲಿ ಆಟದ ವಿಧಾನವನ್ನು ವಿವರಿಸಲು ಕಾಮೆಂಟರಿ ನಿರ್ಣಾಯಕವಾಗಿರುತ್ತದೆ.
ಇದನ್ನೂ ಓದಿ: BBK 9 : ಐಶ್ವರ್ಯಾ ಪಿಸ್ಸೆ ಹೊರಹೋಗುವ ಮುನ್ನ ಆರ್ಯವರ್ಧನ್ ರನ್ನು ನೇರ ನಾಮಿನೇಟ್ ಮಾಡಿದ್ದೇಕೆ?
ಈಗ ಗಲ್ಲಿ ಕ್ರಿಕೆಟ್ ಪಂದ್ಯದ ವೇಳೆ ಹುಡುಗನೊಬ್ಬ ಸಂಸ್ಕೃತದಲ್ಲಿ ಕ್ರಿಕೆಟ್ ಕಾಮೆಂಟರಿ ಮಾಡುತ್ತಿರುವ ಹೊಸ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಇದರಲ್ಲಿ ಅವರು ಸಂಸ್ಕೃತದಲ್ಲಿ ಪರಸ್ಪರ ಮಾತನಾಡುತ್ತಿರುವುದು ಈಗ ನೆಟ್ಟಿಗರನ್ನು ಅಚ್ಚರಿಗೊಳಿಸಿದೆ.
Sanskrit and cricket pic.twitter.com/5fWmk9ZMZy
— lakshmi narayana B.S (@chidsamskritam) October 2, 2022
ಲಕ್ಷ್ಮಿ ನಾರಾಯಣ ಬಿ ಎಸ್ ಎಂಬ ಹೆಸರಿನ ಟ್ವಿಟರ್ ಬಳಕೆದಾರರು "ಸಂಸ್ಕೃತ ಮತ್ತು ಕ್ರಿಕೆಟ್" ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಮೈಕ್ರೋ-ಬ್ಲಾಗಿಂಗ್ ವೆಬ್‌ಸೈಟ್‌ನಲ್ಲಿ, ಇದು 133,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 6,600 ಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ.
ಇದನ್ನೂ ಓದಿ: ಚಿತ್ರಮಂದಿರಗಳಲ್ಲಿ ನಾಡಗೀತೆ ಮೊಳಗುವಂತೆ ಮಾಡಿ : ಸಿಎಂ ಗೆ ನಟ ಝೈದ್ ಖಾನ್ ಮನವಿ
ಇದನ್ನೂ ನೋಡಿದ ನೆಟ್ಟಿಗರು "ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಈ ಸಂಸ್ಕೃತ ಕ್ರಿಕೆಟ್ ಕಾಮೆಂಟರಿ ಬೇಕು...." ಎಂದು ಬೇಡಿಕೆಯನ್ನು ಇಟ್ಟಿದ್ದಾರೆ.
ಕ್ರಿಕೆಟ್ ಕಾಮೆಂಟರಿ ಹಿಂದಿ, ಇಂಗ್ಲಿಷ್ ಮತ್ತು ಇತರ ಪ್ರಾದೇಶಿಕ ಭಾಷೆಗಳಲ್ಲಿ ದೀರ್ಘಕಾಲದವರೆಗೆ ದೂರದರ್ಶನದಲ್ಲಿ ಪ್ರಸಾರವಾಗುತ್ತಿದೆ. ಆದರೆ ಗಲ್ಲಿ ಕ್ರಿಕೆಟ್‌ಗೆ ಸಂಸ್ಕೃತ ಕ್ರಿಕೆಟ್ ವಿವರಣೆಯನ್ನು ಹೊಂದಿರುವುದು ನಿಜಕ್ಕೂ ಅಚ್ಚರಿ ಎಂದೇ ಹೇಳಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.