JioPhone Next: ವಿಶ್ವದ ಅತ್ಯಂತ ಅಗ್ಗದ 4G ಸ್ಮಾರ್ಟ್‌ಫೋನ್ ಜೊತೆಗೆ ವಿಶೇಷ ರಿಚಾರ್ಜ್ ಪ್ಲಾನ್

JioPhone Next ಅನ್ನು ದೀಪಾವಳಿ ಹಬ್ಬದಂದು ಅಂದರೆ ನವೆಂಬರ್ 4ರಿಂದ ಖರೀದಿಸಬಹುದು ಎಂದು ಕಂಪನಿ ತಿಳಿಸಿದೆ.  

Written by - Puttaraj K Alur | Last Updated : Oct 30, 2021, 12:59 PM IST
  • ದೀಪಾವಳಿ ಹಬ್ಬಕ್ಕೆ ವಿಶ್ವದ ಅತ್ಯಂತ ಅಗ್ಗದ 4G ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಲಭ್ಯ
  • 6,499 ರೂ. ಬೆಲೆಯ JioPhone Next ಸ್ಮಾರ್ಟ್‌ಫೋನ್‌ ಅನ್ನು 1,999 ರೂ.ಗೆ ಖರೀದಿಸಿ
  • JioPhone Next ಸ್ಮಾರ್ಟ್‌ಫೋನ್‌ ಖರೀದಿಸುವವರಿಗೆ ವಿಶೇಷ ರೀಚಾರ್ಜ್ ಪ್ಲಾನ್ ಗಳು ಲಭ್ಯವಿವೆ
JioPhone Next: ವಿಶ್ವದ ಅತ್ಯಂತ ಅಗ್ಗದ 4G ಸ್ಮಾರ್ಟ್‌ಫೋನ್ ಜೊತೆಗೆ ವಿಶೇಷ ರಿಚಾರ್ಜ್ ಪ್ಲಾನ್   title=
ವಿಶ್ವದ ಅತ್ಯಂತ ಅಗ್ಗದ 4G ಸ್ಮಾರ್ಟ್‌ಫೋನ್

ನವದೆಹಲಿ: ರಿಲಯನ್ಸ್ ಮತ್ತು ಗೂಗಲ್ (Reliance Jio and Google) ಒಟ್ಟಿಗೆ ಸೇರಿ ವಿಶ್ವದ ಅತ್ಯಂತ ಅಗ್ಗದ 4G ಸ್ಮಾರ್ಟ್‌ಫೋನ್‌ ಗಾಗಿ ಬಹಳ ಸಮಯದಿಂದ ಕೆಲಸ ಮಾಡುತ್ತಿವೆ. ಈ ಹೊಸ ಫೋನ್ ಬಿಡುಗಡೆಗಾಗಿ ದೇಶದ ಜನರು ಕುತೂಹಲದಿಂದ ಕಾಯುತ್ತಿದ್ದರು. JioPhone Next ಅನ್ನು ವಿಶ್ವದ ಅತ್ಯಂತ ಅಗ್ಗದ 4G ಸ್ಮಾರ್ಟ್‌ಫೋನ್ ಎಂದು ಪರಿಗಣಿಸಲಾಗಿದೆ. ದೀರ್ಘ ವಿಳಂಬದ ಬಳಿಕ ಕಂಪನಿಯು ಅಂತಿಮವಾಗಿ ಈ ಫೋನ್‌ನ ಬೆಲೆ ಮತ್ತು ಬಿಡುಗಡೆ ದಿನಾಂಕವನ್ನು ಪ್ರಕಟಿಸಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

JioPhone Next ಸ್ಮಾರ್ಟ್‌ಫೋನ್ ಖರೀದಿಸಿ

ಈ ಫೋನ್ ಅನ್ನು ಹೇಗೆ ಖರೀದಿಸಬಹುದು ಎಂಬುದರ ಬಗ್ಗೆ ಈ ಹಿಂದೆ ಕಂಪನಿಯು ಮಾಹಿತಿಯನ್ನು ನೀಡಿತ್ತು. ಸದ್ಯ ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ 6,499 ರೂ.ಗಳಿಗೆ ಬಿಡುಗಡೆಯಾಗುತ್ತಿದ್ದರೂ, ನೀವು ಇದನ್ನು 1,999 ರೂ.ಗೆ ಮನೆಗೆ ಕೊಂಡೊಯ್ಯಬಹುದು. JioPhone Next ಅನ್ನು ದೀಪಾವಳಿ ಹಬ್ಬದಂದು ಅಂದರೆ ನವೆಂಬರ್ 4ರಿಂದ ಖರೀದಿಸಬಹುದು ಎಂದು ಕಂಪನಿ ತಿಳಿಸಿದೆ.  

1,999 ರೂ.ಗೆ ವಿಶ್ವದ ಅತ್ಯಂತ ಅಗ್ಗದ 4G ಫೋನ್  

JioPhone Next ಖರೀದಿಸಲು ನೀಡಲಾದ EMI ಯೋಜನೆಯೊಂದಿಗೆ ನೀವು ಈ ಫೋನ್ ಅನ್ನು 1,999 ರೂ.ಗೆ ಖರೀದಿಸಬಹುದು. ಈ ಸುಲಭ EMI ಆಯ್ಕೆಯಲ್ಲಿ ನೀವು ಆರಂಭದಲ್ಲಿ 1,999 ರೂ. ಪಾವತಿಸಬೇಕಾಗುತ್ತದೆ. ನಂತರ ನೀವು ಉಳಿದ ಮೊತ್ತವನ್ನು ಕಂತುಗಳಲ್ಲಿ ಮರುಪಾವತಿ ಮಾಡಬಹುದು. ಇಲ್ಲಿ ನೀವು 1,999 ರೂ. ಜೊತೆಗೆ 501 ರೂ. ಸಂಸ್ಕರಣಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ. EMI ಯೋಜನೆಗಳು 18 ತಿಂಗಳು ಮತ್ತು 24 ತಿಂಗಳುಗಳ ಆಯ್ಕೆಯೊಂದಿಗೆ ಬರುತ್ತದೆ.

ಇದನ್ನೂ ಓದಿ: WhatsApp Latest Update - ಇನ್ನೂ ಎರಡೇ ದಿನಗಳಲ್ಲಿ ನಿಮ್ಮ ಫೋನ್ ನಲ್ಲಿ ಸ್ಥಗಿತಗೊಳ್ಳಲಿದೆ WhatsApp! ತಕ್ಷಣ ಈ ಕೆಲಸ ಮಾಡಿ

JioPhone Next ಖರೀದಿಸುವುದು ಹೇಗೆಂದು ತಿಳಿದುಕೊಳ್ಳಿ

JioPhone Next ಖರೀದಿಸಲು ಹಲವು ಮಾರ್ಗಗಳಿವೆ. ನಿಮ್ಮ ಹತ್ತಿರದ ಜಿಯೋ ಮಾರ್ಟ್ ಡಿಜಿಟಲ್ ರಿಟೇಲರ್‌ಗೆ ಹೋಗಿ ನೀವು ಈ ಸ್ಮಾರ್ಟ್‌ಫೋನ್ ಅನ್ನು ಖರೀದಿಸಬಹುದು. ನೀವು ಈ ಫೋನ್‌ ಖರೀದಿಗಾಗಿ Jioನ ವೆಬ್‌ಸೈಟ್ ಅಥವಾ WhatsApp ನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು.

WhatsAppನಲ್ಲಿ ನೋಂದಾಯಿಸಲು ನೀವು 7018270182 ಗೆ ‘Hi’ ಎಂದು SMS ಮಾಡಿದರೆ ಸಾಕು. ನೋಂದಣಿ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ನಿಮಗೆ ದೃಢೀಕರಣವನ್ನು ಕಳುಹಿಸಲಾಗುತ್ತದೆ. ಅದರ ನಂತರ ನಿಮ್ಮ ಹತ್ತಿರದ ಚಿಲ್ಲರೆ ವ್ಯಾಪಾರಿಗಳ ಕುರಿತು ನಿಮಗೆ ತಿಳಿಸಲಾಗುವುದು. ಇಲ್ಲಿ ನೀವು ನಿಮ್ಮ ಸ್ಮಾರ್ಟ್‌ಫೋನ್ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

JioPhone Next ಖರೀದಿಸುವವರಿಗೆ ವಿಶೇಷ ರೀಚಾರ್ಜ್ ಪ್ಲಾನ್

EMI ನಲ್ಲಿ JioPhone Next ಅನ್ನು ಖರೀದಿಸುವ ಗ್ರಾಹಕರಿಗೆ Jio ನಿಂದ ಕೆಲವು ವಿಶೇಷ ರೀಚಾರ್ಜ್ ಪ್ಲಾನ್ ಆಯ್ಕೆ ಮಾಡುವ ಅವಕಾಶವನ್ನು ನೀಡಲಾಗುತ್ತದೆ. ಧ್ವನಿ ಕರೆಗಳು(Voice Calls) ಮತ್ತು ಡೇಟಾ ಪ್ರಯೋಜನಗಳೊಂದಿಗೆ ಈ ವಿಶೇಷ ರೀಚಾರ್ಜ್ ಯೋಜನೆಗಳು ನಿಮಗೆ ಲಭ್ಯವಾಗಲಿವೆ.

Always-on plan: ನೀವು 18 ತಿಂಗಳ EMI ಯೋಜನೆಯೊಂದಿಗೆ 350 ರೂ.ಗಳಿಗೆ ಈ ರೀಚಾರ್ಜ್ ಪ್ಲಾನ್ ಖರೀದಿಸಲು ಸಾಧ್ಯವಾಗುತ್ತದೆ. 24 ತಿಂಗಳ EMI ಯೋಜನೆಯನ್ನು ಹೊಂದಿರುವ ಬಳಕೆದಾರರು ಈ ಯೋಜನೆಯನ್ನು 300 ರೂ.ಗೆ ಪಡೆಯುತ್ತಾರೆ. ಇದರಲ್ಲಿ ನೀವು ಪ್ರತಿ ತಿಂಗಳು ಕರೆ ಮಾಡಲು 100 ನಿಮಿಷಗಳು ಮತ್ತು 5GB ಇಂಟರ್ನೆಟ್ ಅನ್ನು ಪಡೆಯುತ್ತೀರಿ.

ಇದನ್ನೂ ಓದಿ: Micromax: ಫ್ಲಿಪ್‌ಕಾರ್ಟ್‌ನ ಕ್ರೇಜಿ ಡೀಲ್! ಮೈಕ್ರೋಮ್ಯಾಕ್ಸ್ ಸ್ಟೈಲಿಶ್ ಫೋನ್ ಅನ್ನು 500 ರೂ.ಗೆ ಖರೀದಿಸಲು ಉತ್ತಮ ಅವಕಾಶ

BIG Plan: ದಿನಕ್ಕೆ 1.5GB ಡೇಟಾ ಮತ್ತು ಅನಿಯಮಿತ ಧ್ವನಿ ಕರೆ(Voice Calls) ಪ್ರಯೋಜನಗಳೊಂದಿಗೆ, ಈ ಯೋಜನೆಯನ್ನು 18 ತಿಂಗಳ EMI ಯೋಜನೆಗೆ 500 ರೂ. ಮತ್ತು 24 ತಿಂಗಳ EMI ಯೋಜನೆಗೆ 450 ರೂ.ಗೆ ಖರೀದಿಸಬಹುದು.

XL Plan: 18 ತಿಂಗಳ EMI ಯೋಜನೆಯೊಂದಿಗೆ ಈ ರೀಚಾರ್ಜ್ ಪ್ಲಾನ್ ಅನ್ನು 550 ರೂ.ಗಳಿಗೆ ಖರೀದಿಸಲು ಸಾಧ್ಯವಾಗುತ್ತದೆ. 24 ತಿಂಗಳ EMI ಪ್ಲಾನ್ ಹೊಂದಿರುವ ಬಳಕೆದಾರರು ಈ ಯೋಜನೆಯನ್ನು 500 ರೂ.ಗೆ ಪಡೆಯುತ್ತಾರೆ. ಇದರಲ್ಲಿ ನೀವು ಪ್ರತಿದಿನ ಅನಿಯಮಿತ ಧ್ವನಿ ಕರೆ(Voice Calls) ಮತ್ತು 2GB ಇಂಟರ್ನೆಟ್ ಅನ್ನು ಪಡೆಯುತ್ತೀರಿ.

XXL Plan: ದಿನಕ್ಕೆ 2.5GB ಡೇಟಾ ಮತ್ತು ಅನಿಯಮಿತ ಧ್ವನಿ ಕರೆ(Voice Calls) ಪ್ರಯೋಜನಗಳನ್ನು ಹೊಂದಿರುವ ಈ ಯೋಜನೆಯನ್ನು 18 ತಿಂಗಳ EMI ಯೋಜನೆಗೆ 600 ರೂ. ಮತ್ತು 24 ತಿಂಗಳ EMI ಯೋಜನೆಗೆ 550 ರೂ.ಗೆ ಖರೀದಿಸಬಹುದು.

JioPhone Next 5.45-ಇಂಚಿನ HD + ಡಿಸ್ಪ್ಲೇ, 2GB RAM, 32GB ಸ್ಟೋರೇಜ್ (512GB ವರೆಗೆ ವಿಸ್ತರಿಸಬಹುದು), 13MP ಹಿಂಭಾಗದ ಕ್ಯಾಮೆರಾಗಳು, 8MP ಮುಂಭಾಗದ ಕ್ಯಾಮೆರಾಗಳು ಮತ್ತು 3,500mAh ಬ್ಯಾಟರಿಯಂತಹ ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News