Tata Nano Solar Car: ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಗಗನಕ್ಕೇರುತ್ತಿದೆ. ಇದರಿಂದ ಬೇಸತ್ತಿರುವ ಜನರು ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳತ್ತ ತಮ್ಮ ಒಲವು ತೋರುತ್ತಿದ್ದಾರೆ. ಆದಾಗ್ಯೂ, ಎಲೆಕ್ಟ್ರಿಕ್ ಕಾರುಗಳು ಬಜೆಟ್ ಫ್ರೆಂಡ್ಲಿ ಅಲ್ಲದ ಕಾರಣ ಎಲ್ಲರಿಗೂ ಸಹ ಎಲೆಕ್ಟ್ರಿಕ್ ವಾಹನಗಳನ್ನು ಅಷ್ಟು ಸುಲಭವಾಗಿ ಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಮಧ್ಯೆ, ಸೂರ್ಯನ ಬೆಳಕಿನಲ್ಲಿ ಚಲಿಸುವ ಟಾಟಾ ನ್ಯಾನೋ ಕಾರ್ ಹೆಚ್ಚು ಮುನ್ನಲೆಗೆ ಬರುತ್ತಿದೆ. ವಿಶೇಷವೆಂದರೆ ಈ ಕಾರ್ ಕೇವಲ 3 ರೂ.ಗಳಲ್ಲಿ ಸುಮಾರು 100 ಕಿ.ಮೀ. ಚಲಿಸಬಲ್ಲದು ಎಂದು ಹೇಳಲಾಗುತ್ತಿದೆ. 


COMMERCIAL BREAK
SCROLL TO CONTINUE READING

ನಿಮಗೆಲ್ಲರಿಗೂ ತಿಳಿದಿರುವಂತೆ ಸೌರಶಕ್ತಿ ಚಾಲಿತ ಕಾರುಗಳು ಹೊಸ ಪರಿಕಲ್ಪನೆಯಲ್ಲ. ಈ ಟಾಟಾ ನ್ಯಾನೋ ಒಂದು ರೀತಿಯ ಎಲೆಕ್ಟ್ರಿಕ್ ಕಾರ್ ಆಗಿದ್ದರೂ, ಇದರ ಬ್ಯಾಟರಿಯು ಸೌರ ಶಕ್ತಿಯಿಂದ ಚಾರ್ಜ್ ಆಗುತ್ತದೆ.  ಪ್ರಪಂಚದಾದ್ಯಂತ ಅನೇಕ ಕಾರು ಕಂಪನಿಗಳು ಸೌರ ಫಲಕಗಳನ್ನು ಹೊಂದಿರುವ ವಾಹನಗಳನ್ನು ತಯಾರಿಸಲು ಪ್ರಯತ್ನಿಸಿವೆ. ಈ ವಾಹನಗಳು ದುಬಾರಿ ಲಿಥಿಯಂ-ಐಯಾನ್ ಬ್ಯಾಟರಿಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. 


ಇದನ್ನೂ ಓದಿ- Car Loan ಕೊಳ್ಳುವಾಗ ನೆನಪಿರಲಿ 20-10-4 ಸೂತ್ರ


ಈ ಸೋಲಾರ್ ಕಾರನ್ನು ಪೆಟ್ರೋಲ್ ಇಲ್ಲದೆ 100 ಕಿಲೋಮೀಟರ್ ಓಡಿಸಲು ಸುಮಾರು ₹ 30 ವೆಚ್ಚವಾಗುತ್ತದೆ. ನ್ಯಾನೋ ಸೋಲಾರ್ ಕಾರು ಗಂಟೆಗೆ 80 ಕಿ.ಮೀ ವೇಗದಲ್ಲಿ ಚಲಿಸಬಲ್ಲದು ಎಂದು ಹೇಳಲಾಗುತ್ತಿದೆ. 


ಇದನ್ನೂ ಓದಿ- ಇವೇ ನೋಡಿ ಅತಿ ಹೆಚ್ಚು ಮೈಲೇಜ್ ನೀಡುವ ಜನಪ್ರಿಯ ಎಸ್‌ಯುವಿ ಕಾರುಗಳು


ವಾಸ್ತವವಾಗಿ, ಸಂಪೂರ್ಣವಾಗಿ ಸೌರಶಕ್ತಿಯಿಂದ ಚಲಿಸಬಲ್ಲ ಈ ಸೋಲಾರ್ ಕಾರ್ ಅನ್ನು ಪಶ್ಚಿಮ ಬಂಗಾಳದ ಮನೋಜಿತ್ ಮಂಡಲ್ ಎಂಬ ವ್ಯಕ್ತಿಯೊಬ್ಬರು ವಿನ್ಯಾಸಗೊಳಿಸಿದ್ದಾರೆ. ದುಬಾರಿ ಪೆಟ್ರೋಲ್‌ನಿಂದ ಪರಿಹಾರ ಪಡೆಯಲು ಬಯಸಿದ್ದ ಇವರು ಇದೀಗ ಅವರು ತಮ್ಮ ಟಾಟಾ ನ್ಯಾನೋವನ್ನು ಮಾರ್ಪಡಿಸಿದ್ದಾರೆ.  ಇದರಲ್ಲಿ ಎಂಜಿನ್ ಕೂಡ ಇಲ್ಲ. ಕಾರಿನ ಛಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸಲಾಗಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.