ಜನರ ಮೆಚ್ಚುಗೆಗೆ ಪಾತ್ರವಾಗಿರುವ ಸ್ಕೂಟರ್ ಇದುವೇ ! ಅತ್ಯಧಿಕ ಸಂಖ್ಯೆಯಲ್ಲಿ ಆಗುತ್ತಿದೆ ಮಾರಾಟ

Best Selling  Scooter : ಹೀರೊ, ಹೋಂಡಾ ಮತ್ತು ಟಿವಿಎಸ್ ನ ವಿವಿಧ ಬೆಲೆಯ ಸ್ಕೂಟರ್‌ಗಳನ್ನು ಮಾರಾಟ ಮಾಡುಲಾಗುತ್ತಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಸ್ಕೂಟರ್‌ಗಳ ಬೇಡಿಕೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ.

Written by - Ranjitha R K | Last Updated : Mar 20, 2023, 11:34 AM IST
  • ಭಾರತದಲ್ಲಿ ಬೈಕ್‌ಗಳಷ್ಟೇ ಸ್ಕೂಟರ್‌ಗಳಿಗೂ ಬೇಡಿಕೆ ಇದೆ.
  • ಬೇರೆ ಬೇರೆ ಕಂಪನಿಯ ಸ್ಕೂಟರ್ ಗಳಿಗೆ ಹೆಚ್ಚುತ್ತಿದೆ ಬೇಡಿಕೆ
  • ಯಾವ ಸ್ಕೂಟರ್ ಮಾರಾಟ ಎಷ್ಟು ?
ಜನರ ಮೆಚ್ಚುಗೆಗೆ ಪಾತ್ರವಾಗಿರುವ ಸ್ಕೂಟರ್ ಇದುವೇ !  ಅತ್ಯಧಿಕ ಸಂಖ್ಯೆಯಲ್ಲಿ ಆಗುತ್ತಿದೆ ಮಾರಾಟ  title=

Best Selling Scooter : ಭಾರತದಲ್ಲಿ ಬೈಕ್‌ಗಳಷ್ಟೇ ಸ್ಕೂಟರ್‌ಗಳಿಗೂ ಬೇಡಿಕೆ ಇದೆ. ಹೀರೊ, ಹೋಂಡಾ ಮತ್ತು ಟಿವಿಎಸ್  ಕಂಪನಿ ವಿವಿಧ ಬೆಲೆಯ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಸ್ಕೂಟರ್‌ಗಳ ಬೇಡಿಕೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಈ ವಿಭಾಗದಲ್ಲಿ, ಎಲೆಕ್ಟ್ರಿಕ್ ಸ್ಕೂಟರ್ ಗಳ ಮಾರಾಟದಲ್ಲಿಯೂ ಹೆಚ್ಚಳ ಕಂಡು ಬಂದಿದೆ. ಫೆಬ್ರವರಿ 2023ರಲ್ಲಿ ಟಾಪ್ 10 ಸ್ಕೂಟರ್‌ಗಳ ಮಾರಾಟವು 3,60,963 ಯುನಿಟ್‌ಗಳಾಗಿದ್ದು, ಇದು ಫೆಬ್ರವರಿ 2022 ಕ್ಕಿಂತ 30.09 ಶೇಕಡಾ ಹೆಚ್ಚಳವಾಗಿದೆ. 

1. ಹೋಂಡಾ ಆಕ್ಟಿವಾ ಮಾರಾಟ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಫೆಬ್ರವರಿ 2023 ರಲ್ಲಿ, ಇದು 1,74,503 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಫೆಬ್ರವರಿ 2022 ರಲ್ಲಿ ಮಾರಾಟವಾದ 1,45,317 ಯುನಿಟ್‌ಗಳಿಗೆ ಹೋಲಿಸಿದರೆ 2023 ರಲ್ಲಿ,  20.08 ಶೇಕಡಾ ಹೆಚ್ಚಳವಾಗಿದೆ. ಸ್ಕೂಟರ್ ನಾಲ್ಕು ರೂಪಾಂತರಗಳಲ್ಲಿ ಬರುತ್ತದೆ - ಸ್ಟ್ಯಾಂಡರ್ಡ್, ಡಿಲಕ್ಸ್, ಪ್ರೀಮಿಯಂ ಎಡಿಶನ್ ಡಿಲಕ್ಸ್ ಮತ್ತು ಸ್ಮಾರ್ಟ್ ಕೀ. ಇದರ ಬೆಲೆ 74 ಸಾವಿರ ರೂಪಾಯಿಗಳಿಂದ ಪ್ರಾರಂಭವಾಗುತ್ತದೆ. 

ಇದನ್ನೂ ಓದಿ : ಈ ಪುಟ್ಟ ಫ್ಯಾನ್ ಮನೆಯಲ್ಲಿದ್ದರೆ ಎಸಿ ಅಗತ್ಯ ಇಲ್ಲವೇ ಇಲ್ಲ ! ಬೆಲೆ ಕೂಡಾ ಅತ್ಯಂತ ಕಡಿಮೆ

2.TVS Jupiter ಕಳೆದ ಫೆಬ್ರವರಿಯಲ್ಲಿ 53,891 ಯುನಿಟ್‌ಗಳ ಮಾರಾಟದೊಂದಿಗೆ 2 ನೇ ಸ್ಥಾನದಲ್ಲಿತ್ತು. ಫೆಬ್ರವರಿ 2022 ರಲ್ಲಿ ಮಾರಾಟವಾದ 47,092 ಯುನಿಟ್‌ಗಳಿಗೆ ಹೋಲಿಸಿದರೆ ಇದರ ಮಾರಾಟದಲ್ಲಿ  14.44 ರಷ್ಟು  ಏರಿಕೆ ಕಂಡು ಬಂದಿದೆ. 

3. ಫೆಬ್ರವರಿ 2023 ರಲ್ಲಿ, ಸುಜುಕಿ ಆಕ್ಸೆಸ್ ಮಾರಾಟವು ಶೇಕಡಾ 7.15 ರಷ್ಟು ಹೆಚ್ಚಳವಾಗಿದೆ.  ಸುಜುಕಿ ಆಕ್ಸೆಸ್ ಮಾರಾಟದಲ್ಲಿ 40,194 ರಷ್ಟು ಹೆಚ್ಚು ಯೂನಿಟ್ ಮಾರಾಟವಾಗಿದೆ.  ಫೆಬ್ರವರಿ 2022 ರಲ್ಲಿ, ಸುಜುಕಿ ಆಕ್ಸೆಸ್ ನ 37,512 ಯುನಿಟ್‌ಗಳು ಮಾರಾಟವಾಗಿತ್ತು.

4. ಓಲಾ ಲಿಸ್ಟ್ ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇದು ಭಾರತದ ನಂಬರ್ 1 ಎಲೆಕ್ಟ್ರಿಕ್ ಸ್ಕೂಟರ್ ಬ್ರ್ಯಾಂಡ್. ಫೆಬ್ರವರಿ 2023ರಲ್ಲಿ Ola ಸ್ಕೂಟರ್   ಮಾರಾಟವು 17,647 ಯುನಿಟ್‌ಗಳಷ್ಟಿತ್ತು. ಇದು ಫೆಬ್ರವರಿ 2022 ಕ್ಕಕ್ಕೆ ಹೋಲಿಸಿದರೆ 351.33 ಶೇಕಡಾ ಹೆಚ್ಚಳವಾಗಿದೆ.  

ಇದನ್ನೂ ಓದಿ : ಅಗ್ಗದಲ್ಲಿ ಅಗ್ಗ ಈ ಮೊಬೈಲ್ ಬೆಲೆ: ಜೀವಮಾನದಲ್ಲಿ ಬೆಸ್ಟ್ ಫೀಚರ್ ಉಳ್ಳ ಇಂಥಾ 5G ಸ್ಮಾರ್ಟ್ಫೋನ್ ಸಿಗೋದಿಲ್ಲ; ಇಂದೇ ಬುಕ್ ಮಾಡಿ!

5. TVS Ntorq ಮಾರಾಟವು ಫೆಬ್ರವರಿ 2023ರಲ್ಲಿ 17,124 ಯುನಿಟ್‌ಗಳಷ್ಟು ಮಾರಾಟವಾಗಿದೆ. ಫೆಬ್ರವರಿ 2022 ರಲ್ಲಿ, ಇದೇ ಸ್ಕೂಟರ್ 23,061  ಯೂನಿಟ್ ಗಳಷ್ಟು ಮಾರಾಟ ಮಾಡಿತ್ತು. ಅಂದರೆ ಈ ಬಾರಿ ಈ ಸ್ಕೂಟರ್ ಮಾರಾಟದಲ್ಲಿ  25.74 ಶೇಕಡಾದಷ್ಟು ಕಡಿಮೆಯಾಗಿದೆ.  
 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News