ರಾಜಧಾನಿ ಬೆಂಗಳೂರಿನಲ್ಲಿ ನಿತ್ಯವೂ ಜೀವ ಜಲಕ್ಕಾಗಿ ಆಹಾಕಾರ ಎದ್ದಿದೆ. ಬಿಸಿಲಿನ ತಾಪ ಒಂದು ಕಡೆಯಾದ್ರೆ ನೀರಿನ ಅಭಾವಕ್ಕೆ ಸಿಲುಕಿ ಪರದಾಟ ನಡೆಸುವಂತಾಗಿದೆ. ಇದ್ರ ಮಧ್ಯೆಯದಲ್ಲಿ ಬೆಂಗಳೂರಿನ ಕುಡಿಯುವ ನೀರಿನ ಘಟಗಳಲ್ಲಿ ನಿತ್ಯವೂ ಮೂರು ಸಾವಿರ ಲೀಟರ್ ಪೋಲಾಗುತ್ತಿದೆ. ವಾಟರ್ ಪ್ಲಾಂಟ್ ಗಳ ಬಳಿ ಕುಡಿಯುವ ನೀರು ದಿನದಲ್ಲಿ ಎರಡೇ ಬಾರಿ ಸಿಗುತ್ತಿದ್ರೆ, ಅದೇ ಜಾಗದಲ್ಲಿ ನೀರಿನ ಶುದ್ದೀಕರಣದ ಬಳಿಕ ವೇಸ್ಟೇಜ್ ನೀರನ್ನ ಚರಂಡಿಗೆ ಬಿಡಲಾಗ್ತಿದೆ. ಅಟ್ಲಿಸ್ಟ್ ಚರಂಡಿಪಾಲಾಗುತ್ತಿರುವ ಆ ಮೂರು ಸಾವಿರ ನೀರನ್ನ ಪೋಲು ಮಾಡೋದು ಬೇಕಾ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.