ವಿಕ್ರಾಂತ್ ರೋಣ ಸಿನಿಮಾದಲ್ಲಿ ಕೆಲವೊಂದು ಡೈಲಾಗ್‌ಗಳಿವೆ. ಅವು ನಿಜಕ್ಕೂ ಜನರನ್ನು ಸೆಳೆದಿವೆ. ಅದರಲ್ಲಿ ಪಿಟಿ ಮೇಸ್ಟ್ರು ಡೈಲಾಗ್ ಕೂಡ ಭಾರೀ ಮಸ್ತಾಗಿದೆ. ಏ ಫಕ್ರು ನಂಗೆ ಸೈಕಲ್ ನಿಲ್ಲಿಸೋಕೆ ಬರೋದಿಲ್ಲ, ನಾನು ಗುದ್ದಿಯೇ ನಿಲ್ಲಿಸೋದು ಮಾರಾಯ ಡೈಲಾಗ್ ತುಂಬಾ ಚನ್ನಾಗಿದೆ. ಹಾಗೇ ವಜ್ರಧೀರ್ ಜೈನ್ ತಮಗೆ ಸಿನಿಮಾ ಶೂಟಿಂಗ್ ಸಮಯದಲ್ಲಾದ ಒಂದಿಷ್ಟು ಮರೆಯಲಾಗದ ಕ್ಷಣಗಳ ಬಗ್ಗೆ ಕೂಡ ಹೇಳಿಕೊಂಡಿದ್ದಾರೆ.