ನವದೆಹಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರೆಂಪ್ COVOD-19 ವಿರುದ್ಧ ಹೋರಾಡುವುದಕ್ಕಿಂತ ಚೀನಾ ಮೇಲೆ ಕತ್ತಿ ಮಸಿಯುವುದೇ ಹೆಚ್ಚು. COVOD-19 ಆರಂಭ ಆದಾಗಿನಿಂದಲೂ ಚೀನಾ (China) ಮೇಲೆ ಮುಗಿಬಿದ್ದಿರುವ ಡೊನಾಲ್ಡ್ ಟ್ರಂಪ್ (Donald Trump) ಈಗ 'ಇದು COVOD-19 ಅಲ್ಲ, ಚೀನಾದಿಂದ ಬಂದಿರುವ ಪ್ಲೇಗ್' ಎಂದು ವಾಗ್ದಾಳಿ ನಡೆಸಿದ್ದಾರೆ.


COMMERCIAL BREAK
SCROLL TO CONTINUE READING

ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು  ಕೋವಿಡ್-19 (COVID-19)   ಅಲ್ಲ, ಚೀನಾದಿಂದ ಬಂದಿರುವ ಪ್ಲೇಗ್, ಇದು ಜಗತ್ತಿನಾದ್ಯಂತ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹರಡಲು ಚೀನಾವೇ ಕಾರಣ' ಎಂದಿದ್ದಾರೆ.


ಡೊನಾಲ್ಡ್ ಟ್ರಂಪ್ ಕಿಡಿಕಾರವುದಕ್ಕೆ ಸಕಾರವಿದೆ. ಇದು COVOD-19 ಕರೋನಾವೈರಸ್ (Coronavirus) ಇಂದು ಅತಿಹೆಚ್ಚು ಬಾಧಿಸುತ್ತಿರುವುದು ದೊಡ್ಡಣ್ಣ ಎಂದು ಹೇಳಿಕೊಳ್ಳುತ್ತಿದ್ದ ಅಮೇರಿಕಾವನ್ನು. COVOD-19 ಎದುರು ಅಮೇರಿಕಾ (America) ಕೈಕಟ್ಟಿ ಕೂರಬೇಕಾದ ಪರಿಸ್ಥಿತಿಗೆ ಬಂದಿದೆ. ಆದ್ದರಿಂದ ಈ ಮೊದಲು COVOD-19 ವೈರಸ್ ಅನ್ನು ವುಹಾನ್​ ವೈರಸ್​ ಎಂದೇ ಕರೆಯುತ್ತಿದ್ದರು. ತಾವಷ್ಟೇ ಅಲ್ಲದೆ ಎಲ್ಲಾ ದೇಶಗಳೂ COVOD-19 ವೈರಸ್ ಅನ್ನು ವುಹಾನ್​ ವೈರಸ್​ ಎಂದೇ ಕರೆಯದಂತೆ ಮನವಿ ಮಾಡಿದ್ದರು. ಈಗ  COVOD-19 ವೈರಸ್ ಅನ್ನು ಚೀನಾದಿಂದ ಬಂದಿರುವ ಪ್ಲೇಗ್ ಎನ್ನುತ್ತಿದ್ದಾರೆ. 


ಚೀನಾ ವಿರುದ್ಧ ಡೊನಾಲ್ಡ್ ಟ್ರಂಪ್ ವಾಗ್ದಾಳಿಗಷ್ಟೇ ಸೀಮಿತರಾಗಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ಮೇಲೆ ಚೀನಾ ವಿರುದ್ಧ ತನಿಖೆ ನಡೆಸುವಂತೆ ಒತ್ತಡ ಹೇರಿ ಕದನ ಮಾಡಿದ್ದರು. ಇಲ್ಲದಿದ್ದರೆ ವಿಶ್ವ ಆರೋಗ್ಯ ಸಂಸ್ಥೆಗೆ ನೀಡುವ ದೇಣಿಗೆಯನ್ನು ಕಡಿತ ಮಾಡಬೇಕಾಗುತ್ತೆ ಎಂಬ ಬೆದರಿಕೆ ಹಾಕಿದ್ದರು‌. ಆಗ ವಿಶ್ವದ ಕೆಲ ಆರ್ಥಿಕ ತಜ್ಞರು ಟ್ರಂಪ್ ಕ್ರಮಕ್ಕೆ ಖಂಡನೆ ವ್ಯಕ್ತಪಡಿಸಿದ್ದರು‌. ಕಡೆಗೆ ವಿಶ್ವ ಆರೋಗ್ಯ ಸಂಸ್ಥೆ ಜೊತೆಗೆ ಸಂಬಂಧ ಕಡಿದುಕೊಳ್ಳುವ ತೀರ್ಮಾನಕ್ಕೂ ಬಂದಿದ್ದಾರೆ. ಇದಾದ ಬಳಿಕ ಈಗ  COVID -19 ಮೂಲ ಹುಡುಕದೆ ಪರಿಹಾರ ಸಾಧ್ಯ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ತನಿಖೆಯನ್ನೂ ಆರಂಭಿಸಿದೆ‌.