ವಾಷಿಂಗ್ಟನ್: ಕೊರೊನಾವೈರಸ್‌ಗೆ ಸಂಬಂಧಿಸಿದಂತೆ ಯುನೈಟೆಡ್ ಸ್ಟೇಟ್ಸ್ / ಅಮೆರಿಕ (America) ಮತ್ತು ಚೀನಾ ನಡುವಿನ ಸಂಘರ್ಷ ಮುಂದುವರೆದಿದೆ. ಈಗ ಯುಎಸ್ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಚೀನಾ ತನ್ನ ಕರೋನಾ ಸಂಶೋಧನೆಯನ್ನು ಕದಿಯುತ್ತಿದ್ದು ಚಿನ್ನಾ 'ಚೋರ್' (ಚೀನಾ ಕಳ್ಳ) ಎಂದು ಆರೋಪಿಸಿದ್ದಾರೆ.


COMMERCIAL BREAK
SCROLL TO CONTINUE READING

ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ (ಪಿಆರ್ಸಿ) ಗೆ ಸಂಬಂಧಿಸಿದ ಸೈಬರ್ ಮತ್ತು ಸಾಂಪ್ರದಾಯಿಕವಲ್ಲದ ಸಂಗ್ರಾಹಕರನ್ನು ದೇಶದ ಬೌದ್ಧಿಕ ಆಸ್ತಿ ಮತ್ತು  ಕೊರೊನಾವೈರಸ್ (Coronavirus) ಕೋವಿಡ್ -19 ಸಂಬಂಧಿತ ಡೇಟಾವನ್ನು ಕದಿಯುವುದನ್ನು ಅಮೆರಿಕ ತೀವ್ರವಾಗಿ ಖಂಡಿಸುತ್ತದೆ ಎಂದು ವಿದೇಶಾಂಗ ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. 


ಚೀನಾ (China) ವಿಜ್ಞಾನಿಗಳು, ಪತ್ರಕರ್ತರು ಮತ್ತು ನಾಗರಿಕರನ್ನು ಮೌನಗೊಳಿಸುವ ಮೂಲಕ ಸುಳ್ಳು ಮಾಹಿತಿಯನ್ನು ಹರಡಿದ್ದು, ಇದು ಆರೋಗ್ಯ ಬಿಕ್ಕಟ್ಟಿನ ಅಪಾಯಗಳನ್ನು ಹೆಚ್ಚಿಸಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆರೋಪಿಸಿದ್ದಾರೆ. ಮತ್ತೊಂದೆಡೆ ಜನರ ಜೀವ ಉಳಿಸಲು ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡುತ್ತಿವೆ ಎಂದು ಅವರು ಹೇಳಿದ್ದಾರೆ.


 ಕೋವಿಡ್ -19 (Covid-19)   ಗೆ ಸಂಬಂಧಿಸಿದ ಡೇಟಾವನ್ನು ಚೀನಾ ಕದಿಯುತ್ತಿದೆ ಎಂದು ಆರೋಪಿಸಿದ ಎರಡನೇ ದಿನ, ಎಫ್‌ಬಿಐ ಮತ್ತು ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆ ಹ್ಯಾಕರ್‌ಗಳು ಇತರ ಕೆಲವು ಸಂಸ್ಥೆಗಳ ಸಂಶೋಧನೆಯನ್ನೂ ಗುರಿಯಾಗಿಸಬಹುದು ಎಂದು ಹೇಳಿದ್ದಾರೆ. ಹ್ಯಾಕರ್‌ಗಳು ಚೀನಾ ಸರ್ಕಾರದೊಂದಿಗೆ ನೇರ ಸಂಪರ್ಕ ಹೊಂದಿದ್ದಾರೆ ಎಂದು ಯುಎಸ್ ಇಲಾಖೆ ಹೇಳಿಕೊಂಡಿದೆ. 


ಅಂತರಾಷ್ಟ್ರೀಯ ವ್ಯವಹಾರಗಳಿಗೆ ಸಂಬಂಧಿಸಿದಂತೆ ಚೀನಾಗೆ ಧಮ್ಕಿ ಹಾಕಿದ ಟ್ರಂಪ್


ಅಮೆರಿಕದ ಆರೋಪಗಳನ್ನು ಪ್ರಶ್ನಿಸಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್, ಕೊರೊನೊವೈರಸ್ ಸಾಂಕ್ರಾಮಿಕ ರೋಗವನ್ನು ಎದುರಿಸಲು ವಿಫಲವಾದ ಕಾರಣಕ್ಕಾಗಿ ಅಮೆರಿಕವಷ್ಟೇ ಚೀನಾವನ್ನು ದೂಷಿಸುತ್ತಿದೆ ಎಂದು ಹೇಳಿದರು.


ಚೀನಾ ಕರೋನಾವೈರಸ್ ಅನ್ನು ಇಡೀ ವಿಶ್ವಕ್ಕೆ ಹರಡಿದೆ ಎಂದು ಯುಎಸ್ ಆರೋಪಿಸುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ಅಮೆರಿಕ ಅಧ್ಯಕ್ಷ  ಡೊನಾಲ್ಡ್ ಟ್ರಂಪ್ (Donald Trump)  ಕೂಡ ಹಲವು ಬಾರಿ ಚೀನಾ ವಿರುದ್ಧ ಈ ಆರೋಪ ಮಾಡಿದ್ದಾರೆ.  ಚೀನಾವನ್ನು ಟೀಕಿಸಿದ ಅವರು ಕರೋನಾವನ್ನು 'ವುಹಾನ್ ವೈರಸ್' ಎಂದು ಕರೆದರು.