ಅಂತರಾಷ್ಟ್ರೀಯ ವ್ಯವಹಾರಗಳಿಗೆ ಸಂಬಂಧಿಸಿದಂತೆ ಚೀನಾಗೆ ಧಮ್ಕಿ ಹಾಕಿದ ಟ್ರಂಪ್

ಈ ಸಮಯದಲ್ಲಿ ಚೀನಾ ಅಧ್ಯಕ್ಷ ಕ್ಸಿ ಚಿನ್‌ಫಿಂಗ್ ಅವರೊಂದಿಗೆ ಮಾತನಾಡಲು  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮನಸು ಮಾಡುತ್ತಿಲ್ಲ.

Last Updated : May 15, 2020, 06:51 AM IST
ಅಂತರಾಷ್ಟ್ರೀಯ ವ್ಯವಹಾರಗಳಿಗೆ ಸಂಬಂಧಿಸಿದಂತೆ ಚೀನಾಗೆ ಧಮ್ಕಿ ಹಾಕಿದ ಟ್ರಂಪ್ title=

ನವದೆಹಲಿ: ಇಡೀ ವಿಶ್ವಕ್ಕೆ ಕಂಟಕವಾಗಿ ಕಾಡುತ್ತಿರುವ  ಕೊರೊನಾವೈರಸ್ (Coronavirus) ಹರಡುವಿಕೆಗೆ ಚೀನಾ ಕಾರಣ ಎಂದು ಹಲವು ಬಾರಿ ಬಹಿರಂಗವಾಗಿಯೇ ದೂಷಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇದೀಗ ಚೀನಾ ವಿರುದ್ಧ ಆಕ್ರಮಣಕಾರಿ ನಿಲುವನ್ನು ತೆಗೆದುಕೊಂಡಿದ್ದಾರೆ.

ವಿಶ್ವದಾದ್ಯಂತ ಕರೋನಾ ವೈರಸ್ ಹರಡುವುದನ್ನು ಗಮನದಲ್ಲಿಟ್ಟುಕೊಂಡು ಈಗ ಅಮೆರಿಕ (America) ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ (China)ದೊಂದಿಗಿನ ಎಲ್ಲಾ ಸಂಬಂಧಗಳನ್ನು ಮುರಿಯುವುದಾಗಿ ಬೆದರಿಕೆ ಹಾಕಿದ್ದಾರೆ.
 
ಫಾಕ್ಸ್ ಬಿಸಿನೆಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ  ಡೊನಾಲ್ಡ್ ಟ್ರಂಪ್ ಮಾರಣಾಂತಿಕ ಸೋಂಕು ಕೋವಿಡ್ -19 (Covid-19)  ವಿಶ್ವಾದ್ಯಂತ ಸುಮಾರು ಮೂರು ಲಕ್ಷ ಜನರನ್ನು ಕೊಂದಿದೆ, ಇದರಲ್ಲಿ 80,000 ಕ್ಕೂ ಹೆಚ್ಚು ಅಮೆರಿಕನ್ನರು ಸೇರಿದ್ದಾರೆ. ಚೀನಾದ ನಿಷ್ಕ್ರಿಯತೆಯಿಂದಾಗಿ ಕರೋನಾ ವೈರಸ್ ವುಹಾನ್‌ನಿಂದ ಜಗತ್ತಿಗೆ ಹರಡಿತು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಚೀನಾ ವಿರುದ್ಧ ನಾವು ಯಾವುದೇ ನಿರ್ಧಾರವನ್ನಾದರೂ ತೆಗೆದುಕೊಳ್ಳಬಹುದು. ಪ್ರಮುಖವಾಗಿ ಅಮೆರಿಕವು ಚೀನಾದೊಂದಿಗಿನ ಎಲ್ಲಾ ರೀತಿಯ ಸಂಬಂಧವನ್ನು ಮುರಿದುಕೊಳ್ಳಬಹುದು ಎಂದು ಹೇಳಿದ್ದಾರೆ.

ಇದೇ ವೇಳೆ ಚೀನಾದ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸುವ ಸಂಬಂಧ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಟ್ರಂಪ್ ಚೀನಾ ಅಧ್ಯಕ್ಷ ಕ್ಸಿ ಚಿನ್‌ಫಿಂಗ್ ಅವರೊಂದಿಗಿನ ನನ್ನ ವೈಯಕ್ತಿಕ ಸಂಬಂಧ ಉತ್ತಮವಾಗಿದ್ದರೂ ಸಹ ಈ ಸಂದರ್ಭದಲ್ಲಿ ನಾನು ಅವರೊಂದಿಗೆ ಮಾತನಾಡಲು ಬಯಸುವುದಿಲ್ಲ. ಕರೋನಾ ವೈರಸ್‌ನ ಉಗಮದ ಬಗ್ಗೆ ತನಿಖೆ ನಡೆಸಲು ಅಂತಾರಾಷ್ಟ್ರೀಯ ಸಮುದಾಯಕ್ಕೆ ವುಹಾನ್‌ನ ಪ್ರಯೋಗಾಲಯಕ್ಕೆ ಭೇಟಿ ನೀಡಲು ಅನುಮತಿ ನೀಡುವಂತೆ ಯುಎಸ್ ಪದೇ ಪದೇ ಚೀನಾವನ್ನು ಕೇಳಿದೆ, ಆದರೆ ಚೀನಾ ಇದನ್ನು ಸ್ವೀಕರಿಸಿಲ್ಲ ಎಂದು ಕಿಡಿಕಾರಿದರು.

Trending News