Banking Facility In Villages: ಇನ್ಮುಂದೆ ಅನ್ನದಾತರಿಗೆ ಅವರ ಗ್ರಾಮದಲ್ಲಿಯೇ ಸಿಗಲಿದೆ ಬ್ಯಾಂಕಿಂಗ್ ಸೇವೆ

Banking Facility In Villages - ಸಹಕಾರಿ ಬ್ಯಾಂಕ್ ಗಳ ಮೂಲಕ ಬ್ಯಾಂಕಿಂಗ್ ಮಾಡುವ ಹಾಗೂ ಗ್ರಾಮೀಣ ಭಾಗದಲ್ಲಿ ವಾಸಿಸುವರ ಪಾಲಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ.

Written by - Nitin Tabib | Last Updated : Mar 6, 2021, 12:43 PM IST
  • ಗ್ರಾಮೀಣ ಭಾಗದಲ್ಲಿರುವ ರೈತರಿಗೆ ಬ್ಯಾಂಕಿಂಗ್ ಸೇವೆ.
  • ಉತ್ತರ ಪ್ರದೇಶ ಸರ್ಕಾರದಿಂದ ವಿಭಿನ್ನ ಯೋಜನೆ.
  • ಎಲ್ಲಾ ಪ್ಯಾಕ್ಸ್ ಗಳಿಗೆ ಮೈಕ್ರೋ ಏಟಿಎಂ ಹಾಗೂ ಗಣಕೀಕರಣ ವ್ಯವಸ್ಥೆ.
Banking Facility In Villages: ಇನ್ಮುಂದೆ ಅನ್ನದಾತರಿಗೆ ಅವರ ಗ್ರಾಮದಲ್ಲಿಯೇ ಸಿಗಲಿದೆ ಬ್ಯಾಂಕಿಂಗ್ ಸೇವೆ title=
Banking Facility In Villages

ನವದೆಹಲಿ: Banking Facility In Villages - ಸಹಕಾರಿ ಬ್ಯಾಂಕ್ ಗಳ ಮೂಲಕ ಬ್ಯಾಂಕಿಂಗ್ ಮಾಡುವ ಹಾಗೂ ಗ್ರಾಮೀಣ ಭಾಗದಲ್ಲಿ ವಾಸಿಸುವರ ಪಾಲಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಗ್ರಾಮೀಣ ಕ್ಷೇತ್ರದಲ್ಲಿನ ರೈತರಿಗಾಗಿ (Banking Service For Farmers) ಕಾರ್ಯನಿರ್ವಹಿಸುವ ಕೃಷಿ ಸಾಲ ಸಮಿತಿಗಳು(ಪ್ಯಾಕ್ಸ್) ಇನ್ಮುಂದೆ ಗ್ರಾಮಗಳಲ್ಲಿಯೇ ಬ್ಯಾಂಕಿಂಗ್ ವ್ಯವಹಾರ ಹಾಗೂ ಇತರೆ ಸೇವೆಗಳನ್ನು (Banking Facility) ಒದಗಿಸಲಿವೆ.  ಇದಕ್ಕಾಗಿ ಈಗಾಗಲೇ ಸುಮಾರು 500 ಪ್ಯಾಕ್ಸ್ ಗಳಿಗೆ ಮೈಕ್ರೋ ಏಟಿಎಂಗಳನ್ನು ನೀಡುವುದರ ಜೊತೆಗೆ 300 ಕೃಷಿ ಪತ್ತಿನ ಸಮೀತಿಗಳ (Agriculture Societies) ಗಣಕೀಕರಣದ ಕಾರ್ಯವನ್ನು ಉತ್ತರ ಪ್ರದೇಶ ಸರ್ಕಾರ ಆರಂಭಿಸಿದೆ. ಮುಂದಿನ ಎರಡು ತಿಂಗಳುಗಳಲ್ಲಿ ರಾಜ್ಯದ ಎಲ್ಲಾ ಪ್ಯಾಕ್ಸ್ ಗಳನ್ನು ಸಹಕಾರಿ ಬ್ಯಾಂಕ್ ಗಳ (Cooperative Banks) ಎಕ್ಸ್ ಟೆನ್ಶನ್ ರೂಪದಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಇದರಿಂದ ಸುಮಾರು 2500 ಯುವಕರಿಗೆ ಬ್ಯಾಂಕಿನ ಪ್ರತಿನಿಧಿಗಳ ರೂಪದಲ್ಲಿ ಪ್ಯಾಕ್ಸ್ ATM ಗಳಲ್ಲಿ ಕೆಲಸ ಸಿಗಲಿದೆ. ಈ ಯುವಕರು ಹೊಸ ಏಟಿಎಂಗಳಲ್ಲಿ ನಿಯೋಜನೆಗೊಳ್ಳಲಿದ್ದಾರೆ. ಇವರಿಗೆ ತಿಂಗಳಿಗೆ 5000 ಗೌರವಧನದ ಜೊತೆಗೆ ಕಮಿಷನ್ ಕೂಡ ಸಿಗಲಿದೆ.

ಇದಕ್ಕಾಗಿ NABAARD ಸುಮಾರು 500 ಮೈಕ್ರೋ ATMಗಳನ್ನು ರಾಜ್ಯದ ಸಹಕಾರಿ ವಿಭಾಗಕ್ಕೆ ಹಸ್ತಾಂತರಿಸಿದೆ. ಪ್ರಸ್ತುತ ಇವುಗಳನ್ನು ಪ್ಯಾಕ್ಸ್ ಗಳಿಗೆ ವಿತರಿಸುವ ಕಾರ್ಯ ಭರದಿಂದ ಸಾಗಿದೆ. ಇನ್ನೊಂದೆಡೆ ವಿಭಾಗ ಸುಮಾರು 10 ಕೋಟಿ ರೂ. ವೆಚ್ಚದಲ್ಲಿ 300 ಪ್ಯಾಕ್ಸ್ ಗಳ ಗಣಕೀಕರಣ ಕಾರ್ಯಕ್ರಮ ಕೂಡ ಆರಂಭಿಸಿದೆ. ಪ್ಯಾಕ್ಸ್ ಗಳಲ್ಲಿ ಬ್ಯಾಂಕಿಂಗ್ ಗಾಗಿ ಆವಶ್ಯಕ ಸೌಕರ್ಯಗಳನ್ನು ಕೂಡ ಮಾಡಲಾಗುತ್ತಿದೆ. ನಷ್ಟದಲ್ಲಿ ವ್ಯವಹರಿಸುತ್ತಿರುವ ಸಹಕಾರಿ ಪತ್ತಿನ ಸಂಸ್ಥೆಗಳಿಗೆ ವಿಭಾಗದ ಈ ಯೋಜನೆಯಿಂದ ಲಾಭ ಸಿಗಲಿದೆ. ಎಲ್ಲ ಸಹಕಾರಿ ಪತ್ತಿನ ಸಂಸ್ಥೆಗಳಿಗೆ ಮೈಕ್ರೋ ಏಟಿಎಂ ಹಾಗೂ ಗಣಕೀಕರಣಗೊಳಿಸುವ ಕಾರ್ಯ ಭರದಿಂದ ಸಾಗಿದೆ. ಇದಕ್ಕಾಗಿ ಭಾರತ ಸರ್ಕಾರ ಮುಂದಿನ ಕೆಲ ದಿನಗಳ ಒಳಗೆ 6770 ಮೈಕ್ರೋ ಏಟಿಎಂಗಳು ಸಿಗಲಿವೆ.

ಇದನ್ನೂ ಓದಿ-PM Kisan: ಮುಂದಿನ ಕಂತು ಯಾವಾಗ ಬರಲಿದೆ! ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಎಂದು ಹೀಗೆ ಪರಿಶೀಲಿಸಿ

ರೈತರಿಗೇನು ಲಾಭ
ಗ್ರಾಮದಲ್ಲಿಯೇ ಬ್ಯಾಂಕಿಂಗ್ ಸೌಕರ್ಯ ಸಿಗುವುದರಿಂದ ರೈತರು ಹಾಗೂ ಸಹಕಾರಿ ಬ್ಯಾಂಕ್ ಗಳಲ್ಲಿ ಖಾತೆ ಹೊಂದಿರುವ ಖಾತಾಧಾರಕರಿಗೆ ಈ ಸೌಕರ್ಯದಿಂದ ಸಹಾಯ ಹೆಚ್ಚಾಗಲಿದೆ. ಅವರು ತಮ್ಮ ಎಲ್ಲ ಬ್ಯಾಂಕಿನ ವ್ಯವಹಾರಗಳನ್ನು ಪ್ಯಾಕ್ಸ್ ಗಳ ಮೂಲಕ ಸುಲಭವಾಗಿ ಮಾದಬಹ್ದುಆಗಿದೆ. ಇದಕ್ಕಾಗಿ ಅವರು ಪಟ್ಟಣಕ್ಕೆ ಓಡಾಟ ಮಾಡಬೇಕಾಗಿಲ್ಲ. 

ಇದನ್ನೂ ಓದಿ-Isro's Bhuvan Vs Google Maps:ವಿದೇಶಿ ಆಪ್ ಮರೆತ್ಹೋಗಿ, ನಿಮಗೆ ದಾರಿ ತೋರಿಸಲಿದೆ ISROದ Bhuvan App

ಸಿಗಲಿದೆ 5000 ರೂ. ಗೌರವ ಧನ ಹಾಗೂ ಕಮಿಷನ್ 
ಈ ಕುರಿತು ಮಾಹಿತಿ ನೀಡಿರುವ ಅಪರ್ ಮುಖ್ಯ ಸಚಿವ ರಾಮಿರೆಡ್ಡಿ, ಪ್ಯಾಕ್ಸ್ ಕಾರ್ಯದರ್ಶಿಗಳಿಗೆ ಮೈಕ್ರೋ ಏಟಿಎಂ ಚಾಲನೆ ಹಾಗೂ ಬ್ಯಾಂಕಿಂಗ್ ಕುರಿತು ತರಬೇತಿ ನೀಡುವ ವ್ಯವಸ್ಥೆ ಮಾಡಲಾಗಿದ್ದು, ಇವರಿಗೆ ತಿಂಗಳಿಗೆ 5000 ಗೌರವ ಧನ ನೀಡಲಾಗುವುದು ಎಂದಿದ್ದಾರೆ. ಪ್ಯಾಕ್ಸ್ ಗಳಿಂದ ಬ್ಯಾಂಕಿಂಗ್ ವ್ಯವಹಾರ ಆರಂಭಗೊಳ್ಳುವುದರಿಂದ ರಾಜ್ಯದಲ್ಲಿ  ಸಹಕಾರಿ ಬ್ಯಾಂಕ್ ಗಳ ನೆಟ್ವರ್ಕ್ ಇತರೆ ಬ್ಯಾಂಕ್ ಗಳಿಗಿಂತ ದೊಡ್ಡದಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೇವಲ ಎರಡೇ ತಿಂಗಳುಗಳಲ್ಲಿ ಎಲ್ಲಾ ಪ್ಯಾಕ್ಸ್ ಗಳಿಗೆ ಮೈಕ್ರೋ ಏಟಿಎಂ ಜೋಡಿಸಲಾಗುವುದು ಎಂದು ರಾಮಿರೆಡ್ಡಿ ಹೇಳಿದ್ದಾರೆ.

ಇದನ್ನೂ ಓದಿ-Budget 2021: ರೈತ ಸಮುದಾಯಕ್ಕೆ ಮೋದಿ ಸರ್ಕಾರದಿಂದ ಮತ್ತೊಂದು 'ಗುಡ್ ನ್ಯೂಸ್'..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News