'ಕೈ ನಡುಕ, ಅಸ್ಪಷ್ಟ ಮಾತು' ನಟ ವಿಶಾಲ್‌ಗೆ ಕಾಡ್ತಿರುವ ಆ ಅನಾರೋಗ್ಯ ಏನು? ಜ್ವರ ಬಂದ್ರ ಕುತ್ತಿಗೆ ಮೇಲೆ ಯಾಕೆ ಈ ಗುರುತು? ಅಸಲಿ ಮ್ಯಾಟರ್‌ ಬೇರೆನೇ ಇದೆಯಾ?

Actor Vishal Health Problem : ನಿರ್ದೇಶಕ ಸುಂದರ್ ಸಿ ಅವರ ಬಹುನಿರೀಕ್ಷಿತ ಕಾಮಿಡಿ ಎಂಟರ್‌ಟೈನರ್ ಮದಗಜ ರಾಜ ಸಿನಿಮಾದಲ್ಲಿ ನಾಯಕನಾಗಿ ನಟಿಸಿರುವ ನಟ ವಿಶಾಲ್ ಅವರ ವಿಡಿಯೋ ತೀವ್ರ ವೈರಲ್ ಆಗಿದೆ.

Written by - Chetana Devarmani | Last Updated : Jan 7, 2025, 03:43 PM IST
  • 'ಕೈ ನಡುಕ, ಅಸ್ಪಷ್ಟ ಮಾತು'
  • ನಟ ವಿಶಾಲ್‌ಗೆ ಕಾಡ್ತಿರುವ ಅನಾರೋಗ್ಯ ಏನು?
  • ಅಸಲಿ ಮ್ಯಾಟರ್‌ ಬೇರೆನೇ ಇದೆಯಾ?
'ಕೈ ನಡುಕ, ಅಸ್ಪಷ್ಟ ಮಾತು' ನಟ ವಿಶಾಲ್‌ಗೆ ಕಾಡ್ತಿರುವ ಆ ಅನಾರೋಗ್ಯ ಏನು? ಜ್ವರ ಬಂದ್ರ ಕುತ್ತಿಗೆ ಮೇಲೆ ಯಾಕೆ ಈ ಗುರುತು? ಅಸಲಿ ಮ್ಯಾಟರ್‌ ಬೇರೆನೇ ಇದೆಯಾ? title=
ನಟ ವಿಶಾಲ್

Actor Vishal Health Problem : ನಿರ್ದೇಶಕ ಸುಂದರ್ ಸಿ ಅವರ ಬಹುನಿರೀಕ್ಷಿತ ಕಾಮಿಡಿ ಎಂಟರ್‌ಟೈನರ್ ಮದಗಜ ರಾಜ ಸಿನಿಮಾದಲ್ಲಿ ನಾಯಕನಾಗಿ ನಟಿಸಿರುವ ನಟ ವಿಶಾಲ್ ಅವರ ವಿಡಿಯೋ ತೀವ್ರ ವೈರಲ್ ಆಗಿದೆ. ಅವರು ಅನಾರೋಗ್ಯದಿಂದ ಬಳಲುತ್ತಿದ್ದರೂ ಸಿನಿಮಾ ಪ್ರಮೋಷನ್‌ಗೆ ಬಂದಿದ್ದಾರೆ. ಸಿನಿಮಾ ಪ್ರಮೋಷನ್‌ ಕಾರ್ಯಕ್ರಮದಲ್ಲಿ ನಟ ವಿಶಾಲ್‌ ಅವರನ್ನು ಕಂಡು ಅಭಿಮಾಣಿಗಳು ಅರೆ ಕ್ಷಣ ದಂಗಾಗಿದ್ದಾರೆ. ಹೇಗಿದ್ದ ವಿಶಾಲ್‌ ಹೇಗಿದ್ರೂ ಇದಕ್ಕೆ ಕಾರಣ ಏನು ಎಂದು ಆತಂಕಗೊಂಡಿದ್ದಾರೆ. 

ನಟ ವಿಶಾಲ್‌ ವರ ಕೈಗಳು ಅಲುಗಾಡುತ್ತಿದ್ದವು. ನಡೆಯಲು ಸಹ ಸಾಧ್ಯವಾಗುತ್ತಿರಲಿಲ್ಲ. ಮಾತು ಅಸ್ಪಷ್ಟವಾಗಿದ್ದವು. ಇದನ್ನು ಕಂಡ ನಟ ವಿಶಾಲ್‌ ಫ್ಯಾನ್ಸ್‌ ಶಾಕ್‌ ಆದರು. ತಮ್ಮ ನೆಚ್ಚಿನ ನಟನಿಗೆ ಏನಾಯಿತೆಂದು ಗಾಬರಿಗೊಂಡಿದ್ದಾರೆ. 

ಕಾರ್ಯಕ್ರಮದ ನಂತರ, ವಿಶಾಲ್ ಅವರ ಅನಾರೋಗ್ಯದ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಜೋರಾಯಿತು. ಈವೆಂಟ್‌ನ ತುಣುಕುಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ವಿಶಾಲ್ ಅವರಿಗೆ ವೈರಲ್ ಜ್ವರವಿದೆ. ಅದೇ ಕಾರಣಕ್ಕೆ ಹೀಗಾಗುತ್ತಿದೆ ಎಂದು ಹೇಳಲಾಗಿದೆ. 

ಇದನ್ನೂ ಓದಿ: ಅನಾವರಣವಾಯಿತು "ಅಪಾಯವಿದೆ ಎಚ್ಚರಿಕೆ" ಚಿತ್ರದ ಪ್ರಯೋಗಾತ್ಮಕ ಟೀಸರ್ 

ಸದ್ಯ ಚೆನ್ನೈನ ಅಪೋಲೋ ಆಸ್ಪತ್ರೆ ವಿಶಾಲ್ ಆರೋಗ್ಯದ ಬಗ್ಗೆ ವರದಿ ಹೊರಹಾಕಿದೆ. ನಟ ವಿಶಾಲ್‌ ಅವರು ವೈರಲ್ ಜ್ವರದಿಂದ ಬಳಲುತ್ತಿದ್ದಾರೆ. ಸೂಕ್ತ ಚಿಕಿತ್ಸೆ ಹಾಗೂ ಸಂಪೂರ್ಣ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆಂದು ಅಪೋಲೋ ಆಸ್ಪತ್ರೆ ವರದಿಯಲ್ಲಿ ಬಹಿರಂಗವಾಗಿದೆ.

ಆದರೆ ನೆಟ್ಟಿಗರು ಮಾತ್ರ ಅಪೋಲೋ ಆಸ್ಪತ್ರೆಯ ವರದಿಯನ್ನು ಒಪ್ಪದಂತೆ ತೋರುತ್ತಿದೆ. ನಟ ವಿಶಾಲ್‌ ಅಭಿಮಾನಿಗಳು ಕೆಲವು ಸ್ಕ್ರೀನ್​ ಶಾಟ್​​ ಹಂಚಿಕೊಂಡು ವಿವಿಧ ಪ್ರಶ್ನೆಗಳನ್ನು ಮಾಡುತ್ತಿದ್ದಾರೆ. ನಟ ವಿಶಾಲ್​ ಆರೋಗ್ಯದ ಕುರಿತು ಅನೇಕ ಅನುಮಾನಗಳನ್ನು ಹೊರಹಾಕುತ್ತಿದ್ದಾರೆ. 

ವಿಶಾಲ್​ ಅವರಿಗೆ ವೈರಲ್​​ ಜ್ವರ ಬಂದು ವೀಕ್​​ ಆಗಿದ್ದಾರೆ ಅನ್ನೋದೇ ನಿಜವಾದರೆ ಅವರ ಕುತ್ತಿಗೆ ಮೇಲೆ ಯಾಕೆ ಆ ಗುರುತು ಇದೆ ಎಂದು ಫ್ಯಾನ್ಸ್‌ ಪ್ರಶ್ನಿಸುತ್ತಿದ್ದಾರೆ. ವಿಶಾಲ್​ ಅವರ ಈ ಪರಿಸ್ಥಿತಿಗೆ ಬೇರೆಯದ್ದೇ ಏನೋ ಕಾರಣ ಇದೆ ಎಂದು ಟ್ರೋಲ್‌ ಮಾಡುತ್ತಿದ್ದಾರೆ. ಒಟ್ಟಾರೆ ನಟ ವಿಶಾಲ್‌ ಅವರ ಸ್ಥಿತಿ ಜನರಲ್ಲಿ ಆತಂಕ ತಂದಿದೆ. 

ಇದನ್ನೂ ಓದಿ: ಎರಡು ತಿಂಗಳ ಹಿಂದಷ್ಟೇ ಖ್ಯಾತ ನಟಿ ಗರ್ಭಪಾತ : ಜನಪ್ರಿಯತೆಯ ಉತ್ತುಂಗದಲ್ಲಿರುವಾಗಲೇ ಈ ಸ್ಟಾರ್ ಹಿರೋಯಿನ್ ಬಗ್ಗೆ ವಿಮರ್ಶಕನ ಪೋಸ್ಟ್ ! 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News