ಒರ್ರಿ, ಅರೇ ಯಾರಪ್ಪ ಈ ವ್ಯಕ್ತಿ ಎಲ್ಲಿ ನೋಡಿದದ್ರೂ ಇರ್ತಾರೆ.. ಯಾವ ಸೆಲೆಬ್ರಿಟಿ ಜೊತೆಯಲ್ಲೂ ಕಾಣಿಸ್ಕೊಳ್ತಾರೆ ಅಂತ ಅನಿಸ್ತಿದ್ದೀಯ..? ಅಷ್ಟಕ್ಕೂ ಒರ್ರಿನ ಟಚ್ ಮಾಡಲು ಸೆಲೆಬ್ರಿಟಿಗಳು ಎಷ್ಟು ಹಣ ಕೊಡ್ತಾರೆ ಅಂತ ಕೇಳಿದ್ರೆ ನೀವು ಶಾಕ್ ಆಗ್ತೀರ! ಈ ಒರ್ರಿ ಯಾರು, ಈತ ಮಾಡೋ ಕೆಲಸನಾದ್ರು ಏನು. ಈತನಿಗೆ ಯಾಕೆ ಅಷ್ಟು ಡಿಮ್ಯಾಂಡ್? ಎನ್ನುವ ಪ್ರಶ್ನೆ ನಿಮಗೆ ಎದುರಾಗಿದೆಯಾ? ಹಾಗಾದರೆ ಬನ್ನಿ ಇಲ್ಲಿ ತಿಳಿಯೋಣ.
ರಿಯಾಲಿಟಿ ಶೋ ಬಿಗ್ ಬಾಸ್ ಹಿಂದಿಗೆ ಹೋಗಿ ಬಂದ್ಮೇಲೆ ಈತ ಸಿಕ್ಕಾಪಟ್ಟೆ ಫೇಮಸ್ ಆಗಿಬಿಟ್ಟಿದ್ದಾನೆ. ಬಾಲಿವುಡ್ ಮಂದಿ ಹೋಗುವ ಪ್ರತಿಯೊಂದು ಪಾರ್ಟಿಗಳಲ್ಲೂ ಈತ ಪ್ರೆಸೆಂಟ್ ಇರುತ್ತಾನೆ.ಸೆಲೆಬ್ರಿಟಿಗಳ ಜೊತೆನೇ ಓಡಾಡುತ್ತಾನೆ. ಅವರೊಂದಿಗೆ ನಿಂತು ಫೋಟೊ ತೆಗೆಸಿಕೊಳ್ಳುತ್ತಾನೆ. ಆ ಮಟ್ಟಿಗೆ ಈತ ಫೇಮಸ್. ಈತನ ಹೆಸರು ಒರ್ಹಾನ್ ಅವತ್ರಮಣಿ ಉರ್ಫ್ (ಒರ್ರಿ).
ಒರ್ರಿ ಅಲಿಯಾಸ್ ಒರ್ಹಾನ್ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿಲ್ಲ. ವೆಬ್ ಸೀರಿಸ್ನಲ್ಲಿ ಕಾಣಿಸಿಕೊಂಡಿಲ್ಲ. ಟಿವಿ ಸೀರಿಯಲ್ಗಳಲ್ಲೂ ನಟಿಸಿಲ್ಲ. ಹೀಗಿದ್ದರೂ, ಬಾಲಿವುಡ್ ನಟ-ನಟಿಯರ ಫೇವರಿಟ್ ನಟನೀತ. ಒರ್ರಿ ಅಂದರೆ ಬಾಲಿವುಡ್ ಮಂದಿಗೆ ಎಲ್ಲಿಲ್ಲದ ಪ್ರೀತಿ. ಒರ್ಹಾನ್ ಅವತ್ರಮಣಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ. ಈ ವೇಳೆ ಸೆಲೆಬ್ರಿಟಿಗಳು ತನ್ನನ್ನು ಯಾಕೆ ಇಷ್ಟ ಪಡುತ್ತಾರೆ? ಫಾರ್ಮ್ಹೌಸ್ಗೆ ಕರೆಸಿಕೊಂಡು ತನ್ನನ್ನು ಟಚ್ ಮಾಡುವುದಕ್ಕೆ 25 ಲಕ್ಷ ರೂಪಾಯಿ ಕೊಡುತ್ತಾರೆ ಅಂತ ಹೇಳಿ ಸಂಚಲನ ಸೃಷ್ಟಿಸಿದ್ದಾರೆ. ಬರೀ ಟಚ್ ಮಾಡಿಸಿಕೊಂಡು ಲಕ್ಷ ದುಡಿಯುವ ಈತನ ಫ್ಯಾಮಿಲಿ ಬ್ಯಾಕ್ಗ್ರೌಂಡ್ ಏನು? ಬಾಲಿವುಡ್ನಲ್ಲಿ ಈತನ ಪ್ಲ್ಯಾನ್ ಏನು?
ಇದನ್ನೂ ಓದಿ: ಪ್ಯಾನ್ ಇಂಡಿಯಾ ಸ್ಟಾರ್ ಹೀರೋಯಿನ್ ಆಗಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಎಷ್ಟು ಕೋಟಿ ಆಸ್ತಿ ಒಡತಿ ಗೊತ್ತಾ?
ಒರ್ರಿ ಇತ್ತೀಚೆಗೆ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಪ್ರೀ ವೆಡ್ಡಿಂಗ್ ಈವೆಂಟ್ನಲ್ಲಿ ಭಾಗಿಯಾಗಿದ್ದ. ಈ ವೇಳೆ ಅಂತರಾಷ್ಟ್ರೀಯ ಮಟ್ಟದ ಪಾಪ್ ಸಿಂಗರ್ ರಿಹಾನ್ನ ಜೊತೆ ಫೋಟೊ ನಿಂತು ಪೋಸ್ ಕೊಟ್ಟಿದ್ದ. ಆ ವೇಳೆನೂ ಒರ್ರಿ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು.
ಬಾಲಿವುಡ್ ಸ್ಟಾರ್ ಕಿಡ್ಗಳ ಜೊತೆ ಓಡಾಡುವ ಒರ್ರಿ ಅಲಿಯಾಸ್ ಒರ್ಹಾನ್ ಅವತ್ರಮಣಿ ಎಷ್ಟೇ ಫೇಮಸ್ ಆಗಿದ್ದರೂ, ತನ್ನ ಫ್ಯಾಮಿಲಿ ಬಗ್ಗೆ ಎಲ್ಲೂ ರಿವೀಲ್ ಮಾಡಿಲ್ಲ. ತಂದೆ-ತಾಯಿಯಿಂದ ಹಿಡಿದು ಕುಟುಂಬದ ಸದಸ್ಯರ ಬಗ್ಗೆ ಮಾಹಿತಿ ಹಂಚಿಕೊಂಡಿರಲಿಲ್ಲ. ಅಷ್ಟಕ್ಕೂ ಒರ್ರಿ ತನ್ನ ಫ್ಯಾಮಿಲಿ ಬಗ್ಗೆ ಚಿಕ್ಕ ಸುಳಿವು ಇಲ್ಲಿದೆ. ಒರ್ರಿಗೆ ಇಬ್ಬರು ಸಹೋದರು ಇದ್ದಾರೆ. ಒಬ್ಬರು ಅಣ್ಣ. ಇನ್ನೊಬ್ಬ ತಮ್ಮ. ಒರ್ರಿ ಇಬ್ಬರು ಸಹೋದರರು ಕೂಡ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಒಬ್ಬರು ನ್ಯೂಯಾರ್ಕ್ನಲ್ಲಿ ಇದ್ದರೆ, ಇನ್ನೊಬ್ಬರು ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದಾರೆ. ಆದರೆ, ಒರ್ರಿ ಮಾತ್ರ ತನ್ನ ಪೋಷಕರೊಂದಿಗೆ ಇದ್ದಾರೆ.
ಆರಂಭದ ದಿನಗಳಲ್ಲಿ ಒರ್ರಿ ಜನಪ್ರಿಯತೆ ಕಂಡು ಪೋಷಕರು ಖುಷಿ ಪಟ್ಟಿದ್ದರಂತೆ. ಬಳಿಕ ಅದರಿಂದ ಹೊರಬಂದಿದ್ದಾಗಿ ಹೇಳಿಕೊಂಡಿದ್ದಾರೆ. ಒರ್ರಿ ಬಗ್ಗೆ ಇಷ್ಟೊಂದು ಚರ್ಚೆಯಾಗುವುದಕ್ಕೆ ಕಾರಣವಿದೆ. ತನಗೆ ಕೆಲಸ ಮಾಡುವುದಕ್ಕೆ ಇಷ್ಟವಿಲ್ಲ. ಒಂದು ಕಾರ್ಯಕ್ರಮದಲ್ಲಿ ಭಾಗಿಯಾದರೆ, ಸೆಲೆಬ್ರಿಟಿಗಳೇ 15 ರಿಂದ 30 ಲಕ್ಷ ರೂಪಾಯಿ ಕೊಡುತ್ತಾರೆ ಎಂದು ಹೇಳಿಕೊಂಡಿದ್ದಾನೆ. ಹೀಗಾಗಿ ಕೆಲಸವೇ ಮಾಡದೆ ಒರ್ರಿ ದುಡಿಯುವ ಪರಿ ಬಗ್ಗೆ ಬಾಲಿವುಡ್ನಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.
ಒರ್ರಿ ದೊಡ್ಡ ಉದ್ಯಮಿಯ ಮಗ. ಪ್ರತಿಷ್ಠಿತ ಶಾಲೆ, ಕಾಲೇಜಿನಲ್ಲಿ ಓದಿ ಬೆಳೆದವನು. ಆತನೊಟ್ಟಿಗೆ ಬಾಲಿವುಡ್ ಕಲಾವಿದರ ಮಕ್ಕಳು ಓದಿ ಬೆಳೆದಿದ್ದಾರೆ. ಹಾಗಾಗಿ ಆತ ಬಾಲಿವುಡ್ ತಾರೆಯರು ಜೊತೆ ಕಾಣಿಸಿಕೊಳ್ಳುತ್ತಾನೆ. "ಒರ್ಹಾನ್ ನನಗೆ ಬಹಳ ಸಮಯದಿಂದ ಗೊತ್ತು. ಅವನು ನನ್ನ ಪಕ್ಕದಲ್ಲಿದ್ದರೆ ಧೈರ್ಯವಾಗಿರುತ್ತದೆ. ಅಂತಹ ಸ್ನೇಹಿತನನ್ನು ಪಡೆದ ನಾನು ಅದೃಷ್ಟಶಾಲಿ. ಒರ್ಹಾನ್ ಎಲ್ಲದರಲ್ಲೂ ನನ್ನನ್ನು ಬೆಂಬಲಿಸುತ್ತಾನೆ. ನಾನು ಅವನನ್ನು ತುಂಬಾ ನಂಬುತ್ತೇನೆ" ಎಂದು ಜಾನ್ವಿ ಸಂದರ್ಶವೊಂದರಲ್ಲಿ ಹೇಳಿಕೊಂಡಿದ್ದರು.
ಇದನ್ನೂ ಓದಿ: ಕಿಡ್ನಾಪ್ ಪ್ರಕರಣದಲ್ಲಿ ರೇವಣ್ಣಗೆ ಜಾಮೀನು : ಶುಭ ಗಳಿಗೆಯಲ್ಲಿಯೇ ಜೈಲಿನಿಂದ ಬಿಡುಗಡೆ
ಒರ್ಹಾನ್ ಲಕ್ಕಿಚಾರ್ಮ್ ಎನ್ನುವ ಮಾತು ಬಿಟೌನ್ನಲ್ಲಿ ಚಾಲ್ತಿಯಲ್ಲಿದೆ. ಆತನ ಜೊತೆ ಕಾಣಿಸಿಕೊಂಡರೆ ಅದೃಷ್ಟ ಅಂತೆಲ್ಲಾ ಕೆಲವರು ಹೇಳುತ್ತಾರೆ. ಅದೇ ಕಾರಣಕ್ಕೆ ಹಣ ಕೊಟ್ಟು ಟಚ್ ಮಾಡಲು ಕೇಳುತ್ತಾರೆ ಎನ್ನುವ ಗುಸುಗುಸು ಕೂಡ ಇದೆ. ಇದನ್ನು ಕೇಳಿ ಕೆಲವರು, ಜನ ಮರುಳೋ ಜಾತ್ರೆ ಮರುಳೋ ಎನ್ನುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.