Ranveer Singh Hollywood: ಹಾಲಿವುಡ್‌ಗೆ ರಣವೀರ್‌ ಸಿಂಗ್‌ ಎಂಟ್ರಿ.!

Ranveer Singh Hollywood: ವರದಿಗಳ ಪ್ರಕಾರ,  ನಟ ಹಾಲಿವುಡ್ ಟ್ಯಾಲೆಂಟ್ ಏಜೆನ್ಸಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ರಣವೀರ್ ಸಿಂಗ್ ಕೂಡ ಪತ್ನಿ ದೀಪಿಕಾ ಪಡುಕೋಣೆಯ ಹಾದಿಯಲ್ಲಿ ಹಾಲಿವುಡ್‌ನತ್ತ ಸಾಗಲು ಯೋಜಿಸಿದ್ದಾರೆ.   

Written by - Chetana Devarmani | Last Updated : May 31, 2023, 04:32 PM IST
  • 12 ವರ್ಷಗಳ ಕಾಲ ಬಾಲಿವುಡ್‌ ಜರ್ನಿ
  • ಹಾಲಿವುಡ್‌ಗೆ ರಣವೀರ್‌ ಸಿಂಗ್‌ ಎಂಟ್ರಿ.!
  • ಟ್ಯಾಲೆಂಟ್ ಏಜೆನ್ಸಿಯೊಂದಿಗೆ ಒಪ್ಪಂದಕ್ಕೆ ಸಹಿ
Ranveer Singh Hollywood: ಹಾಲಿವುಡ್‌ಗೆ ರಣವೀರ್‌ ಸಿಂಗ್‌ ಎಂಟ್ರಿ.!   title=
Ranveer Singh

Ranveer Singh Hollywood: 12 ವರ್ಷಗಳ ಕಾಲ ಬಾಲಿವುಡ್‌ ಜರ್ನಿ ನಂತರ ಇದೀಗ ರಣವೀರ್ ಸಿಂಗ್ ಕೂಡ ಪತ್ನಿ ದೀಪಿಕಾ ಪಡುಕೋಣೆಯ ಹಾದಿಯಲ್ಲಿ ಹಾಲಿವುಡ್‌ನತ್ತ ಸಾಗಲು ಯೋಜಿಸಿದ್ದಾರೆ. ಇತ್ತೀಚೆಗೆ, ರಣವೀರ್ ಸಿಂಗ್ ಬಗ್ಗೆ ವರದಿಯೊಂದು ವೈರಲ್ ಆಗುತ್ತಿದೆ. ಇದರಲ್ಲಿ ನಟ ಹಾಲಿವುಡ್ ಟ್ಯಾಲೆಂಟ್ ಏಜೆನ್ಸಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ವರದಿಗಳ ಪ್ರಕಾರ, ರಣವೀರ್ ಸಿಂಗ್ ಹಾಲಿವುಡ್ ಡಬ್ಲ್ಯುಎಂಇ (ವಿಲಿಯಂ ಮೋರಿಸ್ ಎಂಡೀವರ್) ಹೆಸರಿನ ಟ್ಯಾಲೆಂಟ್ ಏಜೆನ್ಸಿಯೊಂದಿಗೆ ಕೈಜೋಡಿಸಿದ್ದಾರೆ. ಈ ಸಂಸ್ಥೆಯು ನಟಿ ಆಲಿಯಾ ಭಟ್ ಮತ್ತು ರಾಬರ್ಟ್ ಪ್ಯಾಂಟಿಸನ್, ರಿಹಾನ್ನಾ ಸೇರಿದಂತೆ ಅನೇಕ ದೊಡ್ಡ ತಾರೆಗಳನ್ನು ನಿರ್ವಹಿಸುತ್ತದೆ.

ಇದನ್ನೂ ಓದಿ: Adipurush Collection: ರಿಲೀಸ್‌ಗೂ ಮುಂಚೆಯೇ 400 ಕೋಟಿ ಗಳಿಸಿದ ಆದಿಪುರುಷ.!

ಆಲಿಯಾ ಭಟ್ ನಂತರ ಹಾಲಿವುಡ್‌ಗೆ ಕಾಲಿಡಲಿರುವ ರಣವೀರ್ ಸಿಂಗ್ : 

ವರದಿಗಳ ಪ್ರಕಾರ, ಆಲಿಯಾ ಭಟ್ ಹಾಲಿವುಡ್ ನಂತರ ರಣವೀರ್ ಸಿಂಗ್ ಫಿಲ್ಮ್ಸ್ ಹಾಲಿವುಡ್ ಪ್ರಾಜೆಕ್ಟ್‌ಗಳಿಗಾಗಿ ಇಂಟರ್ನ್ಯಾಷನಲ್ ಟ್ಯಾಲೆಂಟ್ ಏಜೆನ್ಸಿ ಡಬ್ಲ್ಯೂಎಂಇಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಸುಮಾರು 12 ವರ್ಷಗಳ ಕಾಲ ಬಾಲಿವುಡ್‌ನಲ್ಲಿ ಕೆಲಸ ಮಾಡಿದ ನಂತರ, ನಟ ಹಾಲಿವುಡ್‌ನತ್ತ ಸಾಗಲು ಪ್ರಾರಂಭಿಸಿದ್ದಾರೆ. ಪ್ರಸ್ತುತ, ನಟ ಯಾವುದೇ ಹಾಲಿವುಡ್ ಪ್ರಾಜೆಕ್ಟ್‌ಗೆ ಸಹಿ ಹಾಕಿದ್ದಾರೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. 2010 ರಲ್ಲಿ ಯಶ್ ರಾಜ್ ಅವರ ರೊಮ್ಯಾಂಟಿಕ್ ಹಾಸ್ಯ ಚಲನಚಿತ್ರ ಬ್ಯಾಂಡ್ ಬಾಜಾ ಬಾರಾತ್‌ನಿಂದ ರಣವೀರ್ ಸಿಂಗ್ ಸಿನಿ ಕರಿಯರ್‌ ಆರಂಭವಾಯಿತು.

ಇದನ್ನೂ ಓದಿ: ಬಟ್ಟೆ ಇಲ್ಲದೆ ಬೆಡ್‌ ಮೇಲೆ ಮಲಗಿರುವ ಅರ್ಜುನ್ ಕಪೂರ್ ಫೋಟೋ ಶೇರ್‌ ಮಾಡಿದ ಮಲೈಕಾ ಅರೋರಾ!

ಆಲಿಯಾ ಭಟ್ ಜೊತೆ ರಣವೀರ್ ಸಿಂಗ್ : 

ರಣವೀರ್ ಸಿಂಗ್ ಕೊನೆಯದಾಗಿ ಸರ್ಕಸ್ ಚಿತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಅಷ್ಟೊಂದು ಕಮಾಲ್‌ ಮಾಡಲಿಲ್ಲ. ಮತ್ತೊಂದೆಡೆ, ರಣವೀರ್ ಸಿಂಗ್ ಈಗ ರಾಕಿ ಔರ್‌ ರಾಣಿ ಕಿ ಪ್ರೇಮ್‌ ಕಹಾನಿ ಚಿತ್ರದಲ್ಲಿ ನಟಿ ಆಲಿಯಾ ಭಟ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ರಣವೀರ್ ಮತ್ತು ಆಲಿಯಾ ಮುಂಬರುವ ಚಿತ್ರದ ಫಸ್ಟ್ ಲುಕ್ ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆಯಾಗಿದೆ.
 
ಇದನ್ನೂ ಓದಿ: ಗ್ರೀನ್‌ ಬಿಕಿನಿಯಲ್ಲಿ ಪೂನಂ ಪಾಂಡೆ ಮಾದಕ ನೋಟ.. ಹುಡುಗರ ದಿಲ್‌ನಲ್ಲಿ ಹಲ್‌ಚಲ್‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News