ಭಜರಂಗಿ ಭಾಯಿಜಾನ್ ನ ಮುನ್ನಿ ಈಗ Trending ಆಗುತ್ತಿರುವುದೇಕೆ?

ಸಲ್ಮಾನ್ ಖಾನ್ ಅವರ ಭಜರಂಗಿ ಭೈಜಾನ್ ಚಿತ್ರದಲ್ಲಿ ಮುನ್ನಿ ಪಾತ್ರವನ್ನು ನಿರ್ವಹಿಸಿದ ಬಾಲ ನಟ ನೆನಪಿದೆಯೇ? ಆಕೆ ಈಗ ಬರಿ ಪುಟ್ಟ ಬಾಲೆಯಲ್ಲ, ಈಗ ಸಾಕಷ್ಟು ಬೆಳೆದಿದ್ದಾಳೆ.

Last Updated : Nov 17, 2020, 10:26 PM IST
ಭಜರಂಗಿ ಭಾಯಿಜಾನ್ ನ ಮುನ್ನಿ ಈಗ Trending ಆಗುತ್ತಿರುವುದೇಕೆ?  title=
Photo Courtesy: Facebook

ನವದೆಹಲಿ: ಸಲ್ಮಾನ್ ಖಾನ್ ಅವರ ಭಜರಂಗಿ ಭೈಜಾನ್ ಚಿತ್ರದಲ್ಲಿ ಮುನ್ನಿ ಪಾತ್ರವನ್ನು ನಿರ್ವಹಿಸಿದ ಬಾಲ ನಟ ನೆನಪಿದೆಯೇ? ಆಕೆ ಈಗ ಬರಿ ಪುಟ್ಟ ಬಾಲೆಯಲ್ಲ, ಈಗ ಸಾಕಷ್ಟು ಬೆಳೆದಿದ್ದಾಳೆ.

2015 ರಲ್ಲಿ ಬಿಡುಗಡೆಯಾದ ಭಜರಂಗಿ ಭೈಜಾನ್ ಚಲನಚಿತ್ರದಲ್ಲಿನ ಅಭಿನಯದಿಂದ ಪ್ರೇಕ್ಷಕರ ಹೃದಯವನ್ನು ಕದ್ದ ಹರ್ಷಾಲಿ ಮಲ್ಹೋತ್ರಾ, ಮಂಗಳವಾರ ಟಾಪ್ ಟ್ರೆಂಡ್ ನಲ್ಲಿ  ಸ್ಥಾನ ಪಡೆದಿದ್ದಾರೆ.ಹೌದು ಆಕೆ ಈಗ ತನ್ನ ಕುಟುಂಬದ ಸದಸ್ಯರೊಂದಿಗೆ ದೀಪಾವಳಿ ಆಚರಿಸುವ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗಿವೆ.

ರೈತನ ವೇಷದಲ್ಲಿ ಫೋಟೋ ಟ್ರೋಲ್ ಅದ ಬಳಿಕ ವಿಡಿಯೋ ಒಂದನ್ನು ಶೇರ್ ಮಾಡಿದ ಸಲ್ಮಾನ್ ಖಾನ್

A very happy bhai dooj to the person who annoys me the most yet the one who I love the most....happy bhai dooj #hardik152004

Posted by Harshaali Malhotra on Monday, 16 November 2020

ಭಜರಂಗಿ ಭೈಜಾನ್ ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ಹರ್ಷಾಲಿ ನಟಿಸಿದಾಗ ಆಕೆ ಆಗ 7 ವರ್ಷವಾಗಿತ್ತು. ಆಕೆಗೆ ಈಗ 12 ವರ್ಷ ಮತ್ತು ಆಕೆ ತನ್ನ ಕುಟುಂಬದೊಂದಿಗೆ ದೀಪಾವಳಿಯನ್ನು ಆಚರಿಸುತ್ತಿರುವ ಚಿತ್ರಗಳು ಅಂತರ್ಜಾಲದಲ್ಲಿ ಸಾಕಷ್ಟು ಸದ್ದು ಮಾಡುತ್ತಿವೆ.ಅವಳು ಕೆಂಪು ಸಾಂಪ್ರದಾಯಿಕ ಉಡುಪಿನಲ್ಲಿ ಸುಂದರವಾಗಿ ಕಾಣಿಸುತ್ತಾಳೆ. ಫೋಟೋವೊಂದರಲ್ಲಿ, ಅವಳು ರಂಗೋಲಿಯ ಪಕ್ಕದಲ್ಲಿ ಪೋಸ್ ನೀಡುವುದನ್ನು ಕಾಣಬಹುದು.

Trending News