close

News WrapGet Handpicked Stories from our editors directly to your mailbox

ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸ್ತಿದೆ ಶ್ರೀಮುರುಳಿಯ 'ಭರಾಟೆ' ಚಿತ್ರದ ಯೋಯೋ ಸಾಂಗ್!

ಚೇತನ್ ಕುಮಾರ್ ನಿರ್ದೇಶನದ, ಅರ್ಜುನ್ ಜನ್ಯ ಸಂಗೀತ ನಿರ್ದೇಶನದ, ಖ್ಯಾತ ಗಾಯಕ ವಿಜಯ್ ಪ್ರಕಾಶ್ ಕಂಠದಲ್ಲಿ ಮೂಡಿಬಂದಿರುವ 'ದಿನಾ ನಿನ್ನ ನೋಡದಿದ್ರೆ ಯೋ ಯೋ' ಅನ್ನೋ ಹಾಡು ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದೆ.

Divyashree K Divyashree K | Updated: Sep 7, 2019 , 03:26 PM IST
ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸ್ತಿದೆ ಶ್ರೀಮುರುಳಿಯ 'ಭರಾಟೆ' ಚಿತ್ರದ ಯೋಯೋ ಸಾಂಗ್!

ಬೆಂಗಳೂರು: ರೋರಿಂಗ್ ಸ್ಟಾರ್ ಶ್ರೀ ಮುರುಳಿ ಅಭಿನಯದ 'ಭರಾಟೆ' ಸಿನಿಮಾದ ಎರಡನೇ ಹಾಡು 'ಯೋ ಯೋ' ಬಿಡುಗಡೆಯಾದ ಎರಡೇ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸೌಂಡ್ ಮಾಡ್ತಿದೆ. 

ಚೇತನ್ ಕುಮಾರ್ ನಿರ್ದೇಶನದ, ಅರ್ಜುನ್ ಜನ್ಯ ಸಂಗೀತ ನಿರ್ದೇಶನದ, ಖ್ಯಾತ ಗಾಯಕ ವಿಜಯ್ ಪ್ರಕಾಶ್ ಕಂಠದಲ್ಲಿ ಮೂಡಿಬಂದಿರುವ 'ದಿನಾ ನಿನ್ನ ನೋಡದಿದ್ರೆ ಯೋ ಯೋ' ಅನ್ನೋ ಹಾಡು ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದ್ದು ಪ್ರೇಮಿಗಳ ಬಾಯಲ್ಲಿ ಗುನುಗುಡುತ್ತಿದೆ. ಇದೂವರೆಗೆ ಯೂಟ್ಯುಬ್ ನಲ್ಲಿ ಈ ಹಾಡು ಸುಮಾರು 4.50ಲಕ್ಷ ಬಾರಿ ವೀಕ್ಷಣೆಯಾಗಿದ್ದು, ಎಲ್ರೂ ಐ ಆಮ್ ಇನ್ ಎ ಫೀಲಿಂಗ್ ಅಂತಿದ್ದಾರೆ. ಟಿಕ್ ಟಾಕ್ ಪ್ರಿಯರನ್ನು ಗಮನದಲ್ಲಿಟ್ಟುಕೊಂಡು ಈ ಹಾಡನ್ನು ಚಿತ್ರೀಕರಿಸಲಾಗಿದ್ದು ಭಾರೀ ಹಿಟ್ ಆಗಿದೆ.

ಈಗಾಗಲೇ ಕೇವಲ ಟೈಟಲ್ ನಿಂದಲೇ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ 'ಭರಾಟೆ' ಸಿನಿಮಾ ಸೆಪ್ಟೆಂಬರ್ 27ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಶ್ರೀಮುರುಳಿಗೆ ನಾಯಕಿಯಾಗಿ ಶ್ರೀಲೀಲಾ ನಟಿಸಿದ್ದು, ತಾರಾ, ರವಿಶಂಕರ್, ಆರ್ಮುಗಂ ರವಿಶಂಕರ್, ಅಯ್ಯಪ್ಪ ಶರ್ಮ, ಸಾಯಿಕುಮಾರ್ ತಾರಾಗಣದಲ್ಲಿದ್ದಾರೆ. ಡಿಂಪಲ್ ಕ್ವೀನ್ ರಚಿತಾ ರಾಮ್ ವಿಶೇಷ ಪತ್ರದಲ್ಲಿ ಅಭಿನಯಿಸಿದ್ದು, ಸುಪ್ರೀತ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.