'ಅಪ್ಪುಗೆ'ಯ ಜಾದೂ ನಿಮಗೆ ತಿಳಿದಿದೆಯೇ!

Hugging: ಅಪ್ಪುಗೆ ಒಂದು ರೀತಿಯ ಮನಃ ಸಂತೋಷವನ್ನು ನೀಡುತ್ತದೆ. ಯಾರನ್ನೇ ಆಗಲಿ ಪ್ರೀತಿಯಿಂದ ಅಪ್ಪಿಕೊಂಡಾಗ ಅದರಿಂದ ಇಬ್ಬರು ವ್ಯಕ್ತಿಗಳು ಸಾಕಷ್ಟು ಸಂತೋಷವನ್ನು ಪಡೆಯುತ್ತಾರೆ. ಈ ಸಂತೋಷಗಳ ಹೊರತಾಗಿ ಇದರಿಂದ ಆರೋಗ್ಯಕರ ಪ್ರಯೋಜನಗಳಿವೆ ಎಂದು ನಿಮಗೆ ತಿಳಿದಿದೆಯೇ?

Written by - Yashaswini V | Last Updated : Feb 12, 2020, 02:07 PM IST
'ಅಪ್ಪುಗೆ'ಯ ಜಾದೂ ನಿಮಗೆ ತಿಳಿದಿದೆಯೇ! title=

ಬೆಂಗಳೂರು: ಪ್ರೇಮಿಗಳ ವಾರದಲ್ಲಿ ಅಪ್ಪುಗೆಯ ದಿನವನ್ನು ಸಹ ಆಚರಿಸಲಾಗುತ್ತದೆ. ಪ್ರೀತಿಯ ದಂಪತಿಗಳಿಗೆ ಇದು ವಿಶೇಷ ಅವಕಾಶವಾಗಿದ್ದರೂ ಸಹ ಯಾರನ್ನಾದರೂ ಪ್ರೀತಿಯಿಂದ ತಬ್ಬಿಕೊಳ್ಳುವುದರ ಮೂಲಕ (ತಬ್ಬಿಕೊಳ್ಳುವುದು ಅಥವಾ ಅಪ್ಪಿಕೊಳ್ಳುವುದು) ಇಬ್ಬರು ವ್ಯಕ್ತಿಗಳು ಸಾಕಷ್ಟು ಸಂತೋಷವನ್ನು ಪಡೆಯುತ್ತಾರೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಈ ಸಂತೋಷಗಳ ಹೊರತಾಗಿ, ತಬ್ಬಿಕೊಳ್ಳುವುದರಿಂದ ಕೆಲವು ಆರೋಗ್ಯ ಪ್ರಯೋಜನಗಳಿವೆ. ಹೌದು, ತಬ್ಬಿಕೊಳ್ಳುವುದು ಅಥವಾ ಅಪ್ಪಿಕೊಳ್ಳುವುದರಿಂದ ಹಲವು ಆರೋಗ್ಯ ಪ್ರಯೋಜನಗಳಿವೆ. ಅವುಗಳನ್ನು ತಿಳಿಯೋಣ ಬನ್ನಿ...

ಸದಾ ಯುವಕರಾಗಿರುವಂತೆ ಮಾಡುತ್ತದೆ:
ಕೆಲವು ಅಧ್ಯಯನಗಳಲ್ಲಿ, ತಬ್ಬಿಕೊಳ್ಳುವುದು ವ್ಯಕ್ತಿಯ ಜೀವನವನ್ನು ಹೆಚ್ಚು ಮಾಡುತ್ತದೆ ಎಂದು ಹೇಳಲಾಗಿದೆ. ವಾಸ್ತವವಾಗಿ, ತಬ್ಬಿಕೊಳ್ಳುವುದು ಅಥವಾ ಅಪ್ಪಿಕೊಳ್ಳುವುದು ಡೋಪಮೈನ್‌ನಂತಹ ಹಾರ್ಮೋನುಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ವ್ಯಕ್ತಿಯು ಪ್ರೀತಿ ಪಾತ್ರರನ್ನು ಅಪ್ಪಿಕೊಂಡಾಗ ಒಂದು ರೀತಿಯ ಸಂತೋಷ ಮತ್ತು ನಿರಾಳತೆಯನ್ನು ಅನುಭವಿಸುತ್ತಾರೆ. ಈ ಕಾರಣದಿಂದಾಗಿ, ಮುಖದ ಮೇಲೆ ವಯಸ್ಸಿನ ಗುರುತುಗಳು ತಡವಾಗಿ ಕಾಣಿಸಿಕೊಳ್ಳುತ್ತವೆ ಮತ್ತು ವ್ಯಕ್ತಿಯು ಸಂತೋಷದಾಯಕ ಮತ್ತು ದೀರ್ಘ ಜೀವನವನ್ನು ನಡೆಸುತ್ತಾನೆ.

ಸಾವಿನ ಭಯ ಕಡಿಮೆ ಆಗುತ್ತದೆ:


ಆಗಾಗ್ಗೆ ಸಾವಿನ ಭಯವನ್ನು ಹೊಂದಿರುವ ಜನರು. ಅಥವಾ ಒಂಟಿತನ ಕಾಡುವ ಜನರಿಗೆ ಅಪ್ಪುಗೆ ಒಂದು ರೀತಿಯ ರಾಮಬಾಣವಿದ್ದಂತೆ. ಅಂತಹ ಜನರನ್ನು ಅಪ್ಪಿಕೊಳ್ಳುವುದರಿಂದ ಅವರಿಗೆ ಸುರಕ್ಷತೆಯ ಭಾವನೆ ಬರುತ್ತದೆ. ಪರಿಣಾಮವಾಗಿ, ಅವರ ಸಾವಿನ ಭಯ ಕಡಿಮೆಯಾಗುತ್ತದೆ.

ಕಡಿಮೆಯಾಗುತ್ತೆ ನೋವು:
ಯಾರಾದರೂ ಪ್ರೀತಿಯಿಂದ ಯಾರನ್ನಾದರೂ ತಬ್ಬಿಕೊಂಡಾಗ. ಆದ್ದರಿಂದ, ದೇಹದ ಅನೇಕ ಭಾಗಗಳಲ್ಲಿ ನೋವು ನಿವಾರಣೆಯಾಗುತ್ತದೆ. ವಾಸ್ತವವಾಗಿ, ಅಪ್ಪುಗೆಯು ಎಂಡಾರ್ಫಿನ್ ಹಾರ್ಮೋನುಗಳನ್ನು ಉತ್ಪಾದಿಸುತ್ತದೆ. ಈ ಹಾರ್ಮೋನ್ ನೋವನ್ನು ತಡೆಯುತ್ತದೆ, ಜೊತೆಗೆ ಅದನ್ನು ಹರಡಲು ಬಿಡುವುದಿಲ್ಲ. ತಬ್ಬಿಕೊಳ್ಳುವುದರಿಂದ ದೇಹದಲ್ಲಿ ರಕ್ತಪರಿಚಲನೆ ಹೆಚ್ಚಾಗುತ್ತದೆ. ಇದು ನೋವಿನಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

ಆರೋಗ್ಯಕರ ಹೃದಯ:

ಅಪ್ಪುಗೆಯು ನಿಮ್ಮ ಹೃದಯವನ್ನು ಆರೋಗ್ಯಕರವಾಗಿಸುತ್ತದೆ. ಇದು ನಿಮ್ಮ ದೇಹದಲ್ಲಿನ ಆಕ್ಸಿಟೋಸಿನ್ ಹಾರ್ಮೋನುಗಳ ಮಟ್ಟವನ್ನು ಹೆಚ್ಚಿಸುತ್ತದೆ. ಇದು ನಿಮ್ಮ ಸಂಬಂಧವನ್ನು ಉತ್ತಮಗೊಳಿಸುತ್ತದೆ. ಅದೇ ಸಮಯದಲ್ಲಿ, ಆಕ್ಸಿಟೋಸಿನ್‌ಗಳ ಅಧಿಕ ಉತ್ಪಾದನೆಯು ರಕ್ತದೊತ್ತಡ ಅಥವಾ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಈ ಕಾರಣದಿಂದಾಗಿ, ಒತ್ತಡವೂ ಕಡಿಮೆಯಾಗುತ್ತದೆ ಮತ್ತು ಈ ಎಲ್ಲಾ ಪ್ರಕ್ರಿಯೆಗಳಿಂದಾಗಿ ಹೃದಯದ ಆರೋಗ್ಯವೂ ಉತ್ತಮವಾಗಿರುತ್ತದೆ.

Trending News