Leg cramps tips : ರಾತ್ರಿ ಅಥವಾ ಮಧ್ಯರಾತ್ರಿ ನಿದ್ದೆ ಮಾಡುವಾಗ ಅನೇಕ ಜನರು ಹಠಾತ್ ಕಾಲು ಸೆಳೆತಕ್ಕೆ ಒಳಗಾಗುತ್ತಾರೆ.. ಇದು ಅಸಹನೀಯ ನೋವು ನೀಡುತ್ತದೆ. ಅಲ್ಲದೆ ಕೆಲವರು ನೋವು ಕಾಣಿಸಿಕೊಂಡ ತಕ್ಷಣ ಎದ್ದು ನಡೆಯುತ್ತಾರೆ, ಕೆಲವರು ನೀರು ಕುಡಿಯುತ್ತಾರೆ. ಇದರಿಂದ ನೋವು ನಿವಾರಣೆಯಾಗುತ್ತದೆ ಎಂಬುದು ಅವರ ನಂಬಿಕೆ. ಆದರೆ ಅದು ಸುಳ್ಳು.. ಬನ್ನಿ ಸಧ್ಯ ಈ ನೋವು ಏಕೆ ಸಂಭವಿಸುತ್ತದೆ? ಪರಿಹಾರವೇನು? ಇವುಗಳ ಬಗ್ಗೆ ತಿಳಿಯೋಣ..
ರಾತ್ರಿಯಲ್ಲಿ ಕಾಲು ಸೆಳೆತಕ್ಕೆ ಕಾರಣ : ಇದು ಸಾಮಾನ್ಯ ಸಂಗತಿ ಎನ್ನುತ್ತಾರೆ ತಜ್ಞರು. ಸುಮಾರು ಮೂರನೇ ಒಂದು ಭಾಗದಷ್ಟು ಜನರು ರಾತ್ರಿಯಲ್ಲಿ ಅಥವಾ ಹಗಲಿನಲ್ಲಿ ಈ ಸಮಸ್ಯೆಯಿಂದ ಬಳಲುತ್ತಾರೆ. ಕಾಲು ಸೆಳೆತ ಸಮಸ್ಯೆ ಸಾಮಾನ್ಯವಾಗಿ ವಿಟಮಿನ್ ಬಿ12 ಕೊರತೆಯಿಂದ ಉಂಟಾಗುತ್ತದೆ. ದೇಹದಲ್ಲಿ ವಿಟಮಿನ್ ಬಿ12 ಕಡಿಮೆಯಾದರೆ, ಕಾಲುಗಳಲ್ಲಿ ನೋವು ಉಂಟಾಗುತ್ತದೆ.
ಇದನ್ನೂ ಓದಿ:ಸಪೋಟಾ ಹಣ್ಣುನ್ನು ತಿನ್ನುವುದಿಂದ ಈ 5 ಅದ್ಭುತ ಪ್ರಯೋಜಗಳನ್ನು ಪಡೆಯಬಹುದು.
ವಿಟಮಿನ್ ಬಿ 12 ಅನ್ನು ದೇಹದಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ವಿಟಮಿನ್ ಬಿ 12 ಕರಗುವ ವಸ್ತುವಾಗಿದೆ. ಇದು ನಿಮ್ಮ ದೇಹದ ಇತರ ಭಾಗಗಳನ್ನು ಪೋಷಿಸಲು ಸಹಾಯ ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅದರ ಕೊರತೆ ಉಂಟಾದ್ರೆ, ದೇಹದ ಕೆಳಭಾಗದಲ್ಲಿ ಸೆಳೆತ ಅಥವಾ ನೋವಿನಂತಹ ಸಮಸ್ಯೆಗಳು ಉಂಟಾಗುತ್ತವೆ. ಕೆಲವೊಮ್ಮೆ ನೋವು ತೀವ್ರವಾಗಿರುತ್ತದೆ. ಆದ್ದರಿಂದ ವಿಟಮಿನ್ ಬಿ12 ಇರುವ ಆಹಾರ ಸೇವಿಸಿ..
ವಿಟಮಿನ್ ಬಿ 12 ಹೊಂದಿರುವ ಆಹಾರಗಳು : ದೇಹದಲ್ಲಿ ವಿಟಮಿನ್ ಬಿ 12 ಅನ್ನು ಹೆಚ್ಚಿಸಲು ನೀವು ಮಾಂಸಾಹಾರಿ ಆಹಾರವನ್ನು ಸೇವಿಸಬಹುದು. ವಿಟಮಿನ್ ಬಿ 12 ವಿಶೇಷವಾಗಿ ಮೀನು, ಕೋಳಿ ಮತ್ತು ಮೊಟ್ಟೆಗಳಲ್ಲಿ ಹೇರಳವಾಗಿರುತ್ತದೆ. ಮತ್ತೊಂದೆಡೆ, ಸಸ್ಯಾಹಾರಿಗಳು ಹಸಿರು ಎಲೆಗಳ ತರಕಾರಿಗಳು, ಒಣ ಹಣ್ಣುಗಳಾದ ಪಿಸ್ತಾ, ಬಾದಾಮಿ ಮತ್ತು ಚೀಸ್, ಹಾಲು ಮತ್ತು ಮಜ್ಜಿಗೆಯಂತಹ ಡೈರಿ ಉತ್ಪನ್ನಗಳನ್ನು ಸೇವಿಸುವ ಮೂಲಕ ಈ ವಿಟಮಿನ್ ಅನ್ನು ಪಡೆಯಬಹುದು.
ಇದನ್ನೂ ಓದಿ:ಕಿವಿಯ ಸೋಂಕಿನಿಂದ ಬಳಲುತ್ತಿದ್ದೀರಾ? ಹಾಗಾದರೆ ಇದನ್ನು ಟ್ರೈ ಮಾಡಿ..!
ಸಾಕಷ್ಟು ನೀರು ಕುಡಿಯಿರಿ : ಸಾಕಷ್ಟು ವಿಟಮಿನ್ ಬಿ 12 ಪಡೆಯಲು ಒಬ್ಬ ವ್ಯಕ್ತಿಯು ದಿನಕ್ಕೆ ಕನಿಷ್ಠ ಎರಡರಿಂದ ಮೂರು ಲೀಟರ್ ನೀರನ್ನು ಕುಡಿಯಬೇಕು ಎಂದು ವೈದ್ಯರು ಹೇಳುತ್ತಾರೆ. ಇದು ದೇಹವನ್ನು ತೇವಾಂಶದಿಂದ ಇಡುತ್ತದೆ. ಸಾಕಷ್ಟು ನೀರು ಕುಡಿಯುವುದರಿಂದ ಸೆಳೆತದಿಂದ ಮುಕ್ತಿ ಪಡೆಯಬಹುದು.
ಯುವಕರು ದಿನಕ್ಕೆ 2.4 ಮೈಕ್ರೋಗ್ರಾಂಗಳಷ್ಟು ವಿಟಮಿನ್ ಬಿ 12 ಅನ್ನು ಸೇವಿಸಬೇಕು. ಇಲ್ಲದಿದ್ದರೆ, ಕ್ರಮೇಣ ದೇಹವು ದುರ್ಬಲಗೊಳ್ಳುತ್ತದೆ. ಈ ಕಾರಣದಿಂದಾಗಿ, ರುಚಿ ಮತ್ತು ವಾಸನೆಯ ನಷ್ಟ, ಸ್ಮರಣೆಯ ನಷ್ಟ ಮತ್ತು ಆಲೋಚಿಸುವ ಹಾಗು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಕಳೆದುಕೊಳ್ಳುತ್ತಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.