White Rice Disadvantages: ನೀವು ನಿತ್ಯ ಅನ್ನಕ್ಕಾಗಿ ಬಿಳಿ ಅಕ್ಕಿ ಬಳಸುತ್ತೀರುವಿರಾ? ಎಚ್ಚರ...! ಈ ಸುದ್ದಿಯನ್ನೊಮ್ಮೆ ಓದಿ

White Rice Disadvantages: ನಿತ್ಯ ಅನ್ನಕ್ಕಾಗಿ ಬಿಳಿ ಅಕ್ಕಿಯನ್ನು ಬಳಸುತ್ತಿರುವವರಲ್ಲಿ ನೀವೂ ಕೂಡ ಶಾಮೀಲಾಗಿದ್ದಾರೆ ಎಚ್ಚರ. ಏಕೆಂದರೆ, ಈ ರೀತಿ ಮಾಡುವುದರಿಂದ ನೀವು ಹಲವು ರೋಗಗಳಿಗೆ ಆಹ್ವಾನ ನೀಡುತ್ತಿರುವಿರಿ ಎಂದರ್ಥ.  

Written by - Nitin Tabib | Last Updated : Jun 18, 2022, 08:11 PM IST
  • ನೀವು ನಿತ್ಯ ಬಿಳಿ ಅಕ್ಕಿಯಿಂದ ತಯಾರಿಸಲಾದ ಅನ್ನವನ್ನು ಸೇವಿಸುತ್ತೀರಾ?
  • ಈಗಲೇ ಎಚ್ಚೆತ್ತುಕೊಳ್ಳಿ, ಇಲ್ಲದಿದ್ದರೆ ತೊಂದರೆ ತಪ್ಪಿದಲ್ಲ
  • ನಿತ್ಯ ಬಿಳಿ ಅಕ್ಕಿಯ ಅನ್ನ ಸೇವನೆಯಿಂದಾಗುವ ಆರೋಗ್ಯ ಸಮಸ್ಯೆಗಳೇನು ತಿಳಿದುಕೊಳ್ಳೋಣ ಬನ್ನಿ.
White Rice Disadvantages: ನೀವು ನಿತ್ಯ ಅನ್ನಕ್ಕಾಗಿ ಬಿಳಿ ಅಕ್ಕಿ ಬಳಸುತ್ತೀರುವಿರಾ? ಎಚ್ಚರ...! ಈ ಸುದ್ದಿಯನ್ನೊಮ್ಮೆ ಓದಿ title=
White Rice Disadvantages

White Rice Disadvantages: ರುಚಿಯನ್ನು ಸವಿಯುತ್ತ ಬಿಳಿ ಅಕ್ಕಿಯಿಂದ ತಯಾರಿಸಲಾದ ಅನ್ನವನ್ನು ಸೇವಿಸುವವರೇ, ನೀವು ನಿಮ್ಮ ಆರೋಗ್ಯದ ಜೊತೆಗೆ ಚಲ್ಲಾಟವಾಡುತ್ತಿರುವಿರಿ ಮತ್ತು ಈಗಲೇ ಎಚ್ಚೆತ್ತುಕೊಳ್ಳಿ. ಹೌದು, ನಿತ್ಯ ಬಿಳಿ ಅಣ್ಣ ಸೇವಿಸುವುದರಿಂದ ನಿಮಗೆ ಹಲವು ಆರೋಗ್ಯದ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಬಿಪಿ ಅಷ್ಟೇ ಅಲ್ಲ ಡಯಾಬಿಟಿಸ್, ಬೋಜ್ಜಿನಂತಹ ಸಮಸ್ಯೆಗಳು ನಿಮಗೆ ಕಾಡುವ ಸಾಧ್ಯತೆ ಹೆಚ್ಚಾಗುತ್ತದೆ. ಬಿಳಿ ಅಕ್ಕಿಯಿಂದ ಆರೋಗ್ಯಕ್ಕೆ ಯಾವ ರೀತಿಯ ಹಾನಿಯಾಗುತ್ತದೆ ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ, 

ಹುದ್ರೋಗದ ಅಪಾಯ ಹೆಚ್ಚಾಗುತ್ತದೆ
ಅಕ್ಕಿಯಲ್ಲಿ ಆರೋಗ್ಯಕ್ಕೆ ಬೇಕಾಗುವ ಎಲ್ಲಾ ರೀತಿಯ ಪೋಷಕಾಂಶಗಳು ಇರುವುದಿಲ್ಲ. ಹೀಗಾಗಿ ನಿತ್ಯ ಕೇವಲ ಅನ್ನವನ್ನೇ ಸೇವಿಸುವವರು ಈಗಲೇ ಎಚ್ಚೆತ್ತುಕೊಳ್ಳಿ. ಮಾಧ್ಯಮ ವರದಿಗಳ ಪ್ರಕಾರ, ಜನವರು 2015ರಲ್ಲಿ ಅಮೇರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಶಿಯನ್ ನಲ್ಲಿ ಪ್ರಕಟಗೊಂಡ ವಿಶ್ಲೇಷಣೆಯೊಂದರ ಪ್ರಕಾರ, ಅತ್ಯಧಿಕ ಅಕ್ಕಿ ಸೇವನೆಯು ಹೃದ್ರೋಗದ ಅಪಾಯಕ್ಕೆ ಸಂಬಂಧಿಸಿದೆ ಎನ್ನಲಾಗಿದೆ. ಹೀಗಾಗಿ ಅಧಿಕ ಪ್ರಮಾಣದಲ್ಲಿ ಅನ್ನದ ಸೇವನೆಯಿಂದ ನೀವು ದೂರ ಉಳಿದರೆ ಉತ್ತಮ ಎಂಬ ಸಲಹೆಯನ್ನು ನೀದಲಾಗುತ್ತದೆ. ಇಲ್ಲದೆ ಹೋದರೆ, ಅದರ ವಿಪರೀತ ಪರಿಣಾಮಗಳು ನೀವು ಎದುರಿಸಬೇಕಾಗಲಿದೆ.

ಮೆಟಾಬಾಲಿಕ್ ಸಿಂಡ್ರೋಮ್ ಸಮಸ್ಯೆ ಹೆಚ್ಚಾಗಬಹುದು
ಬಿಳಿ ಅನ್ನವನ್ನು ಸೇವಿಸುವುದರಿಂದ ಮೆಟಬಾಲಿಕ್ ಸಿಂಡ್ರೋಮ್ ಸಮಸ್ಯೆ ಎದುರಾಗುತ್ತದೆ. ಹೀಗಾಗಿ, ತಿಂಗಳಿಗೊಮ್ಮೆ ಬಿಳಿ ಅನ್ನವನ್ನು ತಿನ್ನಲು ಪ್ರಯತ್ನಿಸಿ. ಇದರೊಂದಿಗೆ ನೀವು ಚಯಾಪಚಯ ಸಮಸ್ಯೆಗಳನ್ನು ತಪ್ಪಿಸಬಹುದು. 

ಇದನ್ನೂ ಓದಿ-Bitter Gourd For Diabetes: ಡಯಾಬಿಟಿಸ್ ರೋಗಿಗಳಿಗೆ ಹಾಗಲಕಾಯಿ ಬೀಜಗಳು ತುಂಬಾ ಲಾಭಕಾರಿ, ಈ ರೀತಿ ಬಳಸಿ

ತೂಕ ಹೆಚ್ಚಾಗುವ ಅಪಾಯ
ಒಂದು ವೇಳೆ ತೂಕ ಏರಿಕೆಯ ಸಮಸ್ಯೆಯಿಂದ ನೀವು ತೊದರೆಗೆ ಒಳಗಾಗಿದ್ದರೆ, ತಕ್ಷಣವೆ ಬಿಳಿ ಅಕ್ಕಿಯಿಂದ ತಯಾರಿಸಲಾದ ಅನ್ನವನ್ನು ತ್ಯಜಿಸಿ. ಏಕೆಂದರೆ ಇದರಿಂದ ತೂಕ ಹೆಚ್ಚಾಗುವ ಅಪಾಯ ಅಧಿಕವಾಗಿದೆ. ತೂಕ ಇಳಿಕೆಗಾಗಿ ತಕ್ಷಣವೇ ಬಿಳಿ ಅಕ್ಕಿಯಿಂದ ಅಂತರ ಕಾಯ್ದುಕೊಳ್ಳಿ.

ಇದನ್ನೂ ಓದಿ-Weight Loss:ಕೇವಲ ಈ ಒಂದು ಹಣ್ಣನ್ನು ಸೇವಿಸಿ ತೂಕ ಇಳಿಕೆ ಮಾಡಿಕೊಳ್ಳಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News