Hardik Pandya-Virat Kohli: ಮಾರ್ಚ್ 17 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ನಡೆದ ದೃಶ್ಯವೊಂದರ ತುಣುಕು ವೈರಲ್ ಆಗಿದೆ. ವಿರಾಟ್ ಕೊಹ್ಲಿ ಮತ್ತು ಕುಲದೀಪ್ ಯಾದವ್ ನಡುವೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಹಾರ್ದಿಕ್ ಅವರನ್ನು ಕಡೆಗಣನೆ ಮಾಡಿರುವ ವಿಡಿಯೋ ವೈರಲ್ ಆಗಿದೆ.
Team India : ಶಮಿ ಮೊದಲ ODI ನಲ್ಲಿ ಆರು ಓವರ್‌ಗಳಲ್ಲಿ ಎರಡು ಓವರ್ ಮೇಡನ್ ಮಾಡಿ, 17 ರನ್‌ಗಳಿಗೆ, ಮೂರು ವಿಕೆಟ್‌ಗಳನ್ನು ಪಡೆದರು. ಇದು ಭಾರತವು ಆಸ್ಟ್ರೇಲಿಯಾವನ್ನು 35.4 ಓವರ್‌ಗಳಲ್ಲಿ 188 ರನ್‌ಗಳಿಗೆ ಆಲೌಟ್ ಮಾಡಲು ಸಹಾಯ ಮಾಡಿತು ಮತ್ತು ನಂತರ 39.5 ಓವರ್‌ಗಳಲ್ಲಿ ಗುರಿ ಮುಟ್ಟಿತು.
Team India : ನಾಯಕನ ಈ ನಿರ್ಧಾರವನ್ನು 32 ವರ್ಷದ ಬೌಲರ್ ಒಬ್ಬ ಸಾಬೀತುಪಡಿಸಿ, ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್ 188 ರನ್‌ಗಳಿಗೆ ಆಲೌಟ್ ಆಯಿತು. ಈ ಮಾರಣಾಂತಿಕ ಬೌಲರ್ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳನ್ನು ನಡುಗಿಸಿದ್ದಾನೆ. ಹಾಗಿದ್ರೆ ಈ ಬೌಲರ್ ಯಾರು? ಈ ಕೆಳಗಿದೆ ನೋಡಿ ಮಾಹಿತಿ..
IND vs AUS 1st ODI Match: ಕುಟುಂಬದ ಬದ್ಧತೆಯಿಂದಾಗಿ ಪಂದ್ಯದಿಂದ ಹೊರಗುಳಿದಿರುವ ನಿಯಮಿತ ನಾಯಕ ರೋಹಿತ್ ಶರ್ಮಾ ಇಲ್ಲದೆ ಭಾರತ ಮೊದಲ ಏಕದಿನ ಪಂದ್ಯದಲ್ಲಿ ಆಡಲಿದೆ. ಅವರ ಅನುಪಸ್ಥಿತಿಯಲ್ಲಿ ಇಶಾನ್ ಕಿಶನ್ ಮತ್ತು ಶುಭಮನ್ ಗಿಲ್ ಇನ್ನಿಂಗ್ಸ್ ತೆರೆಯಲಿದ್ದಾರೆ ಎಂದು ಪಾಂಡ್ಯ ಹೇಳಿದರು.
Indian Cricket Team: ಈ ವರ್ಷದ ವಿಶ್ವಕಪ್ ನಂತರ ಏಕದಿನ ತಂಡವನ್ನು ಮುನ್ನಡೆಸಲು ಹಾರ್ದಿಕ್ ಪಾಂಡ್ಯ ಮೊದಲ ODI ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯವನ್ನು ಗೆಲ್ಲಬೇಕು ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ. ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದಲ್ಲಿ ಕೌಟುಂಬಿಕ ಬದ್ಧತೆಯಿಂದಾಗಿ ನಿಯಮಿತ ನಾಯಕ ರೋಹಿತ್ ಶರ್ಮಾ ಆಡುವಂತಿಲ್ಲ.
Hardik Pandya 25 Million Followers: ಹಾರ್ದಿಕ್ ಪಾಂಡ್ಯಾ ಇನ್ಸ್ಟಾಗ್ರಾಮ್ ನಲ್ಲಿ 25 ಮಿಲಿಯನ್ ಅನುಯಾಯಿಗಳನ್ನು ತಲುಪಿದ ವಿಶ್ವದ ಅತ್ಯಂತ ಕಿರಿಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕುತೂಹಲಕಾರಿಯಾಗಿ, ಕೆಲವು ಜಾಗತಿಕ ತಾರೆಗಳಾದ ರಾಫೆಲ್ ನಡಾಲ್, ರೋಜರ್ ಫೆಡರರ್, ಮ್ಯಾಕ್ಸ್ ವೆರುಸ್ಟಪೇನ್ ಮತ್ತು ಎರ್ಲಿಗ್ರಾಮ್ ಹ್ಯಾನ್ಲ್ಯಾಂಡ್ ಗಿಂತ ಹೆಚ್ಚು ಇನ್‌ಸ್ಟಾಗ್ರಾಮ್ ಅನುಯಾಯಿಗಳನ್ನು ಹಾರ್ದಿಕ್ ಹೊಂದಿದ್ದಾರೆ.
Indian Cricketer Retirement: ಈ ಟೆಸ್ಟ್ ಸರಣಿಯು ಫೆಬ್ರವರಿ 9 ರಂದು ನಾಗ್ಪುರ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಮೊದಲ ಟೆಸ್ಟ್ನೊಂದಿಗೆ ಪ್ರಾರಂಭವಾಯಿತು. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣವು ಫೆಬ್ರವರಿ 17 ರಿಂದ 21 ರವರೆಗೆ ಎರಡನೇ ಟೆಸ್ಟ್ ಪಂದ್ಯವನ್ನು ಆಯೋಜಿಸಿತ್ತು. ಮೂರನೇ ಟೆಸ್ಟ್ ಇಂದಿನಿಂದ ಮಾರ್ಚ್ 5 ರವರೆಗೆ ಇಂದೋರ್‌ನಲ್ಲಿ ನಡೆಯಲಿದೆ ಮತ್ತು ನಾಲ್ಕನೇ ಟೆಸ್ಟ್ ಮಾರ್ಚ್ 9 ರಿಂದ 13 ರವರೆಗೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ
India squad announced for ODI series: ತಂಡವನ್ನು ಘೋಷಿಸುವುದರ ಜೊತೆಗೆ, ಸರಣಿಯ ಆರಂಭಿಕ ಏಕದಿನದಲ್ಲಿ ರೋಹಿತ್ ಶರ್ಮಾ ನಾಯಕತ್ವವನ್ನು ವಹಿಸಿಕೊಳ್ಳುವುದಿಲ್ಲ ಎಂದು ಬಿಸಿಸಿಐ ತಿಳಿಸಿದೆ. ಕೌಟುಂಬಿಕ ಕಾರಣಗಳಿಂದಾಗಿ ತಂಡದ ಭಾಗವಾಗಲು ಸಾಧ್ಯವಾಗುವುದಿಲ್ಲ. ಈ ಅವಧಿಯಲ್ಲಿ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ತಂಡವನ್ನು ಮುನ್ನಡೆಸಲಿದ್ದಾರೆ.
IND vs NZ, 3rd T20 : ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಕೊನೆಯ ಮತ್ತು ನಿರ್ಣಾಯಕ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದ ಟೀಂ ಇಂಡಿಯಾಗೆ ಈ ಪಂದ್ಯವನ್ನು ಗೆಲ್ಲುವುದು ಬಹಳ ಮುಖ್ಯವಾಗಿದೆ.
India vs New Zealand 3rd T20, Pitch Report : ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧದ ಸರಣಿಯ ಮೂರನೇ ಮತ್ತು ಅಂತಿಮ ಟಿ 20 ಪಂದ್ಯವನ್ನು ಅಹಮದಾಬಾದ್‌ನಲ್ಲಿ ಆಡಲಿದೆ. ಇಂದು ಸಂಜೆ ಪಂದ್ಯ ನಡೆಯಲಿದೆ.
India vs New Zealand 3rd T20 : ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಕೊನೆಯ ಮತ್ತು ನಿರ್ಣಾಯಕ ಪಂದ್ಯ ಇಂದು ಸಂಜೆ 7:00 ಗಂಟೆಗೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದ್ದು, ಈ ಪಂದ್ಯವನ್ನು ಯಾವ ತಂಡ ಗೆಲ್ಲುತ್ತದೆಯೋ ಆ ತಂಡ ಟಿ20 ಸರಣಿಯನ್ನು ಗೆಲ್ಲಲಿದೆ.
IND vs NZ 3rd T20: ಭಾರತ ತಂಡದ ಸ್ಟಾರ್ ವೇಗದ ಬೌಲರ್ ಶಿವಂ ಮಾವಿ ನ್ಯೂಜಿಲೆಂಡ್ ವಿರುದ್ಧ ತಮ್ಮ ಹೆಸರಿಗೆ ತಕ್ಕಂತೆ ಪ್ರದರ್ಶನ ನೀಡಲು ಇನ್ನೂ ಸಾಧ್ಯವಾಗಿಲ್ಲ. ಮೊದಲ ಟಿ20 ಪಂದ್ಯದಲ್ಲಿ 2 ಓವರ್‌ಗಳಲ್ಲಿ 19 ರನ್‌ಗಳನ್ನು ನೀಡಿದ್ದರು. ಎರಡನೇ ಟಿ20 ಪಂದ್ಯದಲ್ಲಿ 1 ಓವರ್‌ನಲ್ಲಿ 11 ರನ್ ನೀಡಿದರು. ಎದುರಾಳಿ ಬ್ಯಾಟ್ಸ್‌ಮನ್‌ಗಳು ಅವರ ವಿರುದ್ಧ ಸಾಕಷ್ಟು ರನ್ ಗಳಿಸಿದರು. ಸದ್ಯ ಮಾವಿ ಟೀಂ ಇಂಡಿಯಾಕ್ಕೆ ಹೊರೆಯಾಗಿದ್ದಾರೆ.
IND vs NZ T20 3rd Match: ಮೂರನೇ ಟಿ20 ಪಂದ್ಯದ ನಂತರ, ಭಾರತವು ದೀರ್ಘಕಾಲದವರೆಗೆ ಟಿ 20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡುವುದಿಲ್ಲ. ಇದರಿಂದಾಗಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲು ಯುವ ಆಟಗಾರರು ತಮ್ಮ ಛಾಪು ತೋರಿಸಲು ಕೊನೆಯ ಅವಕಾಶವನ್ನು ಹೊಂದಿದ್ದಾರೆ.
Indian Cricket Team: ಏಷ್ಯಾ ಕಪ್ 2022ರವರೆಗೆ, 26 ವರ್ಷದ ವೇಗದ ಬೌಲರ್ ಅವೇಶ್ ಖಾನ್ ಆಯ್ಕೆಗಾರರ ಮೊದಲ ಆಯ್ಕೆಯಾಗಿ ಉಳಿದಿದ್ದರು. ಆದರೆ ಈಗ ಅವರು ತಂಡದಲ್ಲಿ ಅವಕಾಶಗಳನ್ನು ಪಡೆಯುತ್ತಿಲ್ಲ. ಕಳಪೆ ಆಟದಿಂದಾಗಿ ಈ ಆಟಗಾರ ಈಗ ತಂಡದಲ್ಲಿ ಸ್ಥಾನ ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಅಕ್ಟೋಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಪರ ತಮ್ಮ ಕೊನೆಯ ODI ಆಡಿದರು.
India vs New Zealand 3rd T20: ನ್ಯೂಜಿಲೆಂಡ್ ವಿರುದ್ಧದ ಮೊದಲ ಎರಡು ಟಿ20 ಪಂದ್ಯಗಳಲ್ಲಿ ಶುಭಮನ್ ಗಿಲ್ ಕಳಪೆಯಾಗಿ ಸೋತಿದ್ದಾರೆ. ಅವರ ಬ್ಯಾಟ್‌ನಿಂದ ರನ್‌ಗಳನ್ನು ಪಡೆಯುವುದು ಕಷ್ಟಕರವಾಗಿದೆ. ಕಿವೀಸ್ ತಂಡದ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ 7 ರನ್, ಎರಡನೇ ಟಿ20 ಪಂದ್ಯದಲ್ಲಿ 11 ರನ್ ಗಳಿಸಿದರು. ನ್ಯೂಜಿಲೆಂಡ್ ಹೊರತುಪಡಿಸಿ, ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಶುಭಮನ್ ಗಿಲ್ ವಿಫಲರಾಗಿದ್ದರು. ಇಂತಹ ಪರಿಸ್ಥಿತಿಯಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಮೂರನೇ ಟಿ20 ಪಂದ್ಯದಿಂದ ಹೊರಗಿಡಬಹುದು.
Ind vs NZ T20 Match : ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ಸರಣಿಯ ಎರಡನೇ ಪಂದ್ಯ (Ind vs NZ T20) ಲಕ್ನೋದಲ್ಲಿ ನಡೆಯಲಿದೆ. ಈ ಪಂದ್ಯ ಟೀಂ ಇಂಡಿಯಾ ಹಾಗೂ ಆಟಗಾರರಿಗೂ ಅತ್ಯಂತ ಮಹತ್ವದ್ದಾಗಿದೆ. ಈ ಆಟಗಾರನಿಗೆ ಇದುವರೆಗೆ ಟಿ20 ಮಾದರಿಯಲ್ಲಿ ಹೆಚ್ಚಿನ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ.
Dinesh Karthik : ಕಳೆದ ದಶಕದಿಂದ ಭಾರತ ತಂಡದಲ್ಲಿ ವಿರಾಟ್ ಕೊಹ್ಲಿ ನಂಬರ್-3 ಸ್ಟಾರ್ ಬ್ಯಾಟ್ಸ್‌ಮನ್ ಆಗಿ ಉಳಿದಿದ್ದಾರೆ. ಭಾರತ ತಂಡಕ್ಕೆ ಸ್ವಂತ ಬಲದಿಂದ ಹಲವು ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ. ಅವರು ಯಾವುದೇ ಬೌಲಿಂಗ್ ದಾಳಿಯನ್ನು ಪುಡಿ ಮಾಡುವ ಸಾಮರ್ಥ್ಯ ಹೊಂದಿದ್ದಾರೆ.
IND vs NZ 2nd T20 Match: ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತದ ಅಗ್ರ ಕ್ರಮಾಂಕ ದಯನೀಯವಾಗಿ ವಿಫಲವಾಗಿದೆ. ಇಶಾನ್ ಕಿಶನ್ ಕೇವಲ ನಾಲ್ಕು ರನ್ ಗಳಿಸಿ ಔಟಾದರು. ಅದೇ ಸಮಯದಲ್ಲಿ ಶುಭಮನ್ ಗಿಲ್ 7 ರನ್ ಗಳಿಸಿದರು. ಮೂರನೇ ಸ್ಥಾನಕ್ಕೆ ಇಳಿದ ರಾಹುಲ್ ತ್ರಿಪಾಠಿ ಅವರಿಗೆ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ.