ನವದೆಹಲಿ: ಛತ್ತೀಸ್ ಗಡ್ ದ ರಾಜನಂದಗಾಂವ್ನ ಸೀತಗೋಟ ಕಾಡು ಪ್ರದೇಶದಲ್ಲಿ ಶನಿವಾರ ಜಿಲ್ಲಾ ಮೀಸಲು ಪಡೆಯೊಂದಿಗಿನ ಗುಂಡಿನ ಚಕಮಕಿಯಲ್ಲಿ ಮೂವರು ಮಹಿಳೆಯರು ಸೇರಿದಂತೆ ಕನಿಷ್ಠ ಏಳು ನಕ್ಸಲರು ಸಾವನ್ನಪ್ಪಿದ್ದಾರೆ. ದಾಳಿಯಲ್ಲಿ ಮೂವರು ಭದ್ರತಾ ಸಿಬ್ಬಂದಿಗಳು ಗಾಯಗೊಂಡಿದ್ದಾರೆ ಎನ್ನಲಾಗಿದೆ.
DM Awasthi, Director General of Police, Chhattisgarh: 7 Naxals killed in an encounter with District Reserve Guard (DRG) in Sitagota jungle under Bagnadi Police Station in Rajnandgaon. Arms and ammunition recovered. Operation is still underway. pic.twitter.com/OPNt9XEx7f
— ANI (@ANI) August 3, 2019
ಭದ್ರತಾ ಸಿಬ್ಬಂದಿಯು ಎಕೆ 47 ರೈಫಲ್ಸ್, 303 ರೈಫಲ್, ಕಾರ್ಬೈನ್ ಮತ್ತು ಸೇರಿ ಹಲವಾರು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಬಾಗ್ನಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಎನ್ಕೌಂಟರ್ ನಡೆದಿದೆ ಎಂದು ಛತ್ತೀಸ್ಗಡ್ ಪೊಲೀಸ್ ಮಹಾನಿರ್ದೇಶಕ ಎಎನ್ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದರೂ ಸಹಿತ ಎನ್ಕೌಂಟರ್ ದಾಳಿ ಹಾಗೆ ಮುಂದುವರೆದಿತ್ತು ಎನ್ನಲಾಗಿದೆ. ಎನ್ಕೌಂಟರ್ ದಾಳಿ ಪ್ರಾರಂಭವಾದಾಗ ಈ ಪ್ರದೇಶದಲ್ಲಿ 40 ರಿಂದ 50 ನಕ್ಸಲರು ಇದ್ದರು ಎಂದು ಶಂಕಿಸಲಾಗಿದೆ. ನಕ್ಸಲರ ಸಾವಿನ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.