ಅಹಮದಾಬಾದ್‌ನ COVID-19 ಆಸ್ಪತ್ರೆಯಲ್ಲಿ ಬೆಂಕಿ, 8 ಕರೋನಾ ರೋಗಿಗಳು ಅಗ್ನಿಗೆ ಆಹುತಿ

ಅಹಮದಾಬಾದ್‌ನ ಶ್ರೇಯ ಆಸ್ಪತ್ರೆಯ ನಾಲ್ಕನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.

Updated: Aug 6, 2020 , 09:48 AM IST
ಅಹಮದಾಬಾದ್‌ನ COVID-19 ಆಸ್ಪತ್ರೆಯಲ್ಲಿ ಬೆಂಕಿ, 8 ಕರೋನಾ ರೋಗಿಗಳು ಅಗ್ನಿಗೆ ಆಹುತಿ

ಅಹಮದಾಬಾದ್: ಅಹಮದಾಬಾದ್ ನವರಂಗಪುರ ಪ್ರದೇಶದ ಶ್ರೇಯ ಆಸ್ಪತ್ರೆಯ ನಾಲ್ಕನೇ ಮಹಡಿಯಲ್ಲಿ ಮುಂಜಾನೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಎಂಟು ಮಂದಿ ಕರೋನಾ ರೋಗಿಗಳು ಮೃತಪಟ್ಟಿರುವ ದುರಂತ ಘಟನೆ ನಡೆದಿದೆ.

Good News! ಕರೋನಾ ಲಸಿಕೆ ಮೊದಲ ಹಂತದಲ್ಲಿ ಯಶಸ್ವಿ, ನಾಳೆಯಿಂದ ಎರಡನೇ ಹಂತದ ಪ್ರಯೋಗ

ಶ್ರೇಯ ಆಸ್ಪತ್ರೆಯನ್ನು  ಕೋವಿಡ್ -19 (Covid-19)  ಆಸ್ಪತ್ರೆ ಎಂದು ಘೋಷಿಸಲಾಗಿದ್ದು ಕರೋನಾ ರೋಗಿಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಆದಾಗ್ಯೂ ಬೆಂಕಿಯನ್ನು ನಿಯಂತ್ರಿಸಲಾಗಿದೆ. 35ಕ್ಕೂ ಹೆಚ್ಚು ರೋಗಿಗಳನ್ನು ಇತರ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. 

ಕೋವಿಡ್ -19 ಇತರ 40 ರೋಗಿಗಳನ್ನು ಆಸ್ಪತ್ರೆಯಲ್ಲಿ ರಕ್ಷಿಸಲಾಗಿದೆ ಮತ್ತು ನಗರದ ಮತ್ತೊಂದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಬೆಂಕಿಯ ಕಾರಣ ಇನ್ನೂ ತಿಳಿದುಬಂದಿಲ್ಲ.

ಕೇವಲ 35 ರೂ.ಗೆ ಕೋವಿಡ್-19 ಚಿಕಿತ್ಸೆ, ಮಾರುಕಟ್ಟೆಗೆ ಬಂತು ಔಷಧ

ಘಟನೆಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ರೋಗಿಗಳ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ ಮತ್ತು ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.