ಹಲವು ಪಕ್ಷಗಳನ್ನು ಸಂಪರ್ಕಿಸಿದೆ, ಯಾರೂ ಕೂಡ ಬೆಂಬಲಿಸಲಿಲ್ಲ- ಬಿಎಸ್ಪಿ ಟ್ರಾನ್ಸ್ ಜೆಂಡರ್ ಅಭ್ಯರ್ಥಿ

ಒರಿಸ್ಸಾ ವಿಧಾನಸಭೆ ಚುನಾವಣೆಯಲ್ಲಿ ಕೋರೈ ವಿಧಾನಸಭಾ ಕ್ಷೇತ್ರದಿಂದ ಕಾಜಲ್ ನಾಯಕ್ ಎನ್ನುವ ಮಂಗಳಮುಖಿ ಬಹುಜನ ಸಮಾಜ ಪಕ್ಷ (ಬಿಎಸ್ಪಿ)ದಿಂದ ಕಣಕ್ಕೆ ಇಳಿಯಲಿದ್ದಾರೆ. ಬಿಎಸ್ಪಿ ಪಕ್ಷದಿಂದ ಟಿಕೆಟ್ ದೊರಕುವ ಮೊದಲು ಹಲವು ಪಕ್ಷಗಳನ್ನು ಸಂಪರ್ಕಿಸಲಾಗಿತ್ತು ಆದರೆ ಯಾವ ಪಕ್ಷಗಳು ತಮಗೆ ಸೂಕ್ತ ಬೆಂಬಲ ನೀಡಲಿಲ್ಲ ಎಂದು ಹೇಳಿದರು.

Last Updated : Mar 17, 2019, 11:34 AM IST
ಹಲವು ಪಕ್ಷಗಳನ್ನು ಸಂಪರ್ಕಿಸಿದೆ, ಯಾರೂ ಕೂಡ ಬೆಂಬಲಿಸಲಿಲ್ಲ- ಬಿಎಸ್ಪಿ ಟ್ರಾನ್ಸ್ ಜೆಂಡರ್ ಅಭ್ಯರ್ಥಿ title=
photo:ANI

ನವದೆಹಲಿ: ಒರಿಸ್ಸಾ ವಿಧಾನಸಭೆ ಚುನಾವಣೆಯಲ್ಲಿ ಕೋರೈ ವಿಧಾನಸಭಾ ಕ್ಷೇತ್ರದಿಂದ ಕಾಜಲ್ ನಾಯಕ್ ಎನ್ನುವ ಮಂಗಳಮುಖಿ ಬಹುಜನ ಸಮಾಜ ಪಕ್ಷ (ಬಿಎಸ್ಪಿ)ದಿಂದ ಕಣಕ್ಕೆ ಇಳಿಯಲಿದ್ದಾರೆ. ಬಿಎಸ್ಪಿ ಪಕ್ಷದಿಂದ ಟಿಕೆಟ್ ದೊರಕುವ ಮೊದಲು ಹಲವು ಪಕ್ಷಗಳನ್ನು ಸಂಪರ್ಕಿಸಲಾಗಿತ್ತು ಆದರೆ ಯಾವ ಪಕ್ಷಗಳು ತಮಗೆ ಸೂಕ್ತ ಬೆಂಬಲ ನೀಡಲಿಲ್ಲ ಎಂದು ಹೇಳಿದರು.

ಜಾಜ್ಪುರ್ ಪ್ರದೇಶದಲ್ಲಿ ಸಾಮಾಜಿಕ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿರುವ ಕಾಜಲ್ " ಚುನಾವಣೆಯಲ್ಲಿ ಸ್ಪರ್ಧಿಸಲು ಬಿಎಸ್ಪಿ ನನಗೆ ಟಿಕೆಟ್ ನೀಡಿರುವುದಕ್ಕೆ ನನಗೆ ಖುಷಿಯಾಗಿದೆ.ಇದಕ್ಕೂ ಮೊದಲು ಅನೇಕ ರಾಜಕೀಯ ಪಕ್ಷಗಳನ್ನು ಭೇಟಿ ಮಾಡಿದ್ದೇನೆ .ಆದರೆ ನನಗೆ ಯಾರು ಪ್ರೋತ್ಸಾಹ ನೀಡಲಿಲ್ಲ. ಆದರೆ ಬಿಎಸ್ಪಿ ನನ್ನ ಮೇಲೆ ಮತ್ತು ಮಂಗಳಮುಖಿ ಸಮುದಾಯದ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ನಾನು ಕೃತಜ್ಞಳಾಗಿದ್ದೇನೆ" ಎಂದು ಸಂತಸ ವ್ಯಕ್ತಪಡಿಸಿದರು.

ಇದೇ ವೇಳೆ ಪ್ರದೇಶಗಳಲ್ಲಿನ ಸಮಸ್ಯೆಗಳ ಬಗ್ಗೆ  ಮಾತನಾಡಿದ ಕಾಜಲ್ "ಮಂಗಳಮುಖಿ ಸಮುದಾಯಕ್ಕೆ ಸಂಬಂಧಿಸಿದ ವಿಷಯಗಳ ಜೊತೆಗೆ ಇತರ ಸಮಸ್ಯೆಗಳಿವೆ. ಆದ್ದರಿಂದ ಮಂಗಳಮುಖಿಯರ ಸಮಸ್ಯೆಗಳ ಜೊತೆಗೆ ಈ ಪ್ರದೇಶಗಳ ಸಮಸ್ಯೆಗಳ ಬಗ್ಗೆ ಗಮನ ಸಳೆಯಲು ನಾನು ಇಚ್ಚಿಸುತ್ತೇನೆ" ಎಂದು ಹೇಳಿದರು.ಕಾಜಲ್ ಸದ್ಯ ಜಾಜ್ಪುರ್ ಟ್ರಾನ್ಸ್ಜೆಂಡರ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದಾರೆ ಮತ್ತು ಸ್ಥಳೀಯ ವಿಷಯಗಳು ಹಾಗೂ ಮಂಗಳ ಮುಖಿಯರ ಹಕ್ಕುಗಳಿಗಾಗಿ ಕೆಲಸ ಮಾಡುತ್ತಿದ್ದಾರೆ.

ಕಾಜಲ್ ನಾಯಕಗೆ ಬಿಎಸ್ಪಿ ಟಿಕೆಟ್ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಕೃಷ್ಣಾ ಚಂದರ್ ಸಾಗರಿಯಾ "ನಾವು ಕಾಜಲ್ ನಾಯಕ್ ಗೆ ಟಿಕೆಟ್ ನೀಡಲು ನಿರ್ಧರಿಸಿದ್ದೇವೆ, ಏಕೆಂದರೆ ಬಿಎಸ್ಪಿ ಎಲ್ಲಾ ಸಮುದಾಯಗಳ ಸಾಮಾಜಿಕ ಅಧಿಕಾರದಲ್ಲಿ ನಂಬಿಕೆ ಇದೆ, ಮಂಗಳ ಮುಖಿಯರ ಬಗ್ಗೆ ಯಾರೊಬ್ಬರೂ ಮಾತನಾಡುವುದಿಲ್ಲ, ಆದ್ದರಿಂದ ಅವರ ಅಭಿವೃದ್ದಿ ಹೊಂದಬೇಕೆಂದರೆ ಮೊದಲು ಅವರನ್ನು ನಾವು ಮುಖ್ಯಪರದೆಗೆ ತರಬೇಕಾಗುತ್ತದೆ ಎಂದರು.
  

Trending News