My Life, My Yoga Competition ಆರಂಭಿಸಿದ ಕೇಂದ್ರ ಆಯುಶ್ ಸಚಿವಾಲಯ ...ಏನಿದು?

ಈ ಸ್ಪರ್ಧೆಯ ಕುರಿತು ಪ್ರಧಾನ ನರೇಂದ್ರ ಮೋದಿ ಅವರು ಭಾನುವಾರದ ತಮ್ಮ 'ಮನ್ ಕಿ ಬಾತ್' ರೇಡಿಯೋ ಕಾರ್ಯಕ್ರಮದ ಮೂಲಕ ಮಾಹಿತಿ ನೀಡಿದ್ದಾರೆ.

Last Updated : May 31, 2020, 06:59 PM IST
My Life, My Yoga Competition ಆರಂಭಿಸಿದ ಕೇಂದ್ರ ಆಯುಶ್ ಸಚಿವಾಲಯ ...ಏನಿದು? title=

ನವದೆಹಲಿ: 21 ಜೂನ್ ರಂದು ವಿಶ್ವಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಭಾರತದ ಆಯುಶ್ ಮಂತ್ರಾಲಯ ಒಂದು ಅಂತಾರಾಷ್ಟ್ರೀಯ ವಿಡಿಯೋ ಬ್ಲಾಗ್ ಸ್ಪರ್ಧೆ ಆರಂಭಿಸಿದೆ. ಈ ಸ್ಪರ್ಧೆಯ ಹೆಸರು 'ಮೈ ಲೈಫ್ ಮೈ ಯೋಗಾ'. ಈ ಸ್ಪರ್ಧೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾನುವಾರದ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ.

ಮೈ ಲೈಫ್ ಮೈ ಯೋಗಾ ಕಾರ್ಯಕ್ರಮದಲ್ಲಿ ಆನ್ಲೈನ್ ಮೂಲಕ ವಿಶ್ವಾದ್ಯಂತ ಇರುವ ಜನರು ಭಾಗವಹಿಸಬಹುದಾಗಿದೆ. ಇದರಲ್ಲಿ ಭಾಗವಹಿಸಲು ನೀವು ಮೂರು ನಿಮಿಷಗಳ ವಿಡಿಯೋ ಒಂದನ್ನು ಅಪ್ಲೋಡ್ ಮಾಡಬೇಕು. ಜೊತೆಗೆ ಯೋಗಾ ನಿಮ್ಮ ಜೀವನದಲ್ಲಿ ಯಾವ ರೀತಿಯ ಬದಲಾವಣೆ ತಂದಿದೆ ಎಂಬುದನ್ನೂ ಕೂಡ ಹೇಳಬೇಕು. ಆದರೆ ಈ ಸ್ಪರ್ಧೆಯ ಕುರಿತು ಇದುವೆರೆಗೆ ಯಾವುದೇ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಜಾಗತಿಕವಾಗಿ ಆಯುರ್ವೇದ ಹಾಗೂ ಯೋಗದಲ್ಲಿ ಹೆಚ್ಚಾದ ಜನರ ಅಭಿರುಚಿ
'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಈ ಕುರಿತು ಹೇಳಿರುವ ಪ್ರಧಾನಿ ಮೋದಿ, ಕೊರೊನಾ ಸಂಕಷ್ಟದ ಕಾಲದಲ್ಲಿ ತಾವು ವಿಶ್ವದ ಅನೇಕ ನಾಯಕರುಗಳ ಜೊತೆಗೆ ಮಾತನಾಡಿದ್ದೇನೆ. ಅವರಲ್ಲಿ ಹಲವರು ಆಯುರ್ವೇದ ಹಾಗೂ ಯೋಗದಲ್ಲಿ ತಮ್ಮ ಅಭಿರುಚಿಯನ್ನು ವ್ಯಕ್ತಪಡಿಸಿದ್ದಾರೆ. ಕೊರೊನಾ ಮಹಾಮಾರಿಯ ಹಿನ್ನೆಲೆ ಜನರು ಯೋಗ ಹಾಗೂ ಆಯುರ್ವೇದದ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಇಚ್ಛೆವ್ಯಕ್ತಪಡಿಸುತ್ತಿದ್ದಾರೆ ಹಾಗೂ ಅವುಗಳ ಸಹಾಯ ಪಡೆಯಲು ಬಯಸುತ್ತಿದ್ದಾರೆ. ಕೊರೊನಾ ಸಂಕಷ್ಟದ ನಡುವೆ ಹಾಲಿವುಡ್ ನಿಂದ ಹಿಡಿದು ಹರಿದ್ವಾರದವರೆಗೆ ಯೋಗದ ಲಾಭಗಳ ಕುರಿತು ವಿಚಾರ ನಡೆಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದ್ದಾರೆ, 

ಅಷ್ಟೇ ಅಲ್ಲ " ಯೋಗ ಕಮ್ಯೂನಿಟಿ, ಇಮ್ಯೂನಿಟಿ ಹಾಗೂ ಯುನಿಟಿ ದೃಷ್ಟಿಯಿಂದ ತುಂಬಾ ಹಿತಕರವಾಗಿದೆ. ಕೊರೊನಾ ಜನರ ರೆಸ್ಪಿರೆಟರಿ ಸಿಸ್ಟಮ್ ಅನ್ನು ಪ್ರಭಾವಿತಗೊಳಿಸುತ್ತದೆ ಹಾಗೂ ಯೋಗದಲ್ಲಿ ಹಲವು ಪ್ರಾಣಾಯಾಮಗಳಿದ್ದು, ಅವು ಶ್ವಾಸಕೋಶದ ವ್ಯವಸ್ಥೆಯನ್ನು ಗಟ್ಟಿಗೊಳಿಸುತ್ತವೆ. ಇದುವರೆಗೆ ಯಾರು ಯೋಗದ ಸಹಾಯ ಪಡೆದಿಲ್ಲವೋ ಅವರೂ ಕೂಡ ಇದೀಗ ಆನ್ಲೈನ್ ತರಗತಿಗಳ ಮೂಲಕ ಅಥವಾ ಆನ್ಲೈನ್ ವಿಡಿಯೋಗಳ ಮೂಲಕ ಯೋಗ ಕಲಿಯುತ್ತಿದ್ದಾರೆ" ಎಂದು ಪ್ರಧಾನಿ ಹೇಳಿದ್ದಾರೆ.

Trending News