ನ್ಯಾನೋ ಕಾರ್ ನ್ನು ಹೆಲಿಕಾಪ್ಟರ್ ಆಗಿ ಪರಿವರ್ತಿಸಿದ ಬಿಹಾರಿ ಯುವಕ...!

ಬಿಹಾರ ಮೂಲಕದ 24 ರ ಹರೆಯದ ಯುವಕ ಈಗ ನ್ಯಾನೋ ಕಾರ್ ನ್ನು ಹೆಲಿಕಾಪ್ಟರ್ ಆಗಿ ಪರಿವರ್ತಿಸಿದ್ದಾನೆ. ಈಗ ಅದು ಸಾಕಷ್ಟು ಜನರನ್ನು ಆಕರ್ಷಿಸುತ್ತಿದೆ.

Updated: Aug 11, 2019 , 06:36 PM IST
ನ್ಯಾನೋ ಕಾರ್ ನ್ನು ಹೆಲಿಕಾಪ್ಟರ್ ಆಗಿ ಪರಿವರ್ತಿಸಿದ ಬಿಹಾರಿ ಯುವಕ...!
ANI PHOTO

ನವದೆಹಲಿ: ಬಿಹಾರ ಮೂಲಕದ 24 ರ ಹರೆಯದ ಯುವಕ ಈಗ ನ್ಯಾನೋ ಕಾರ್ ನ್ನು ಹೆಲಿಕಾಪ್ಟರ್ ಆಗಿ ಪರಿವರ್ತಿಸಿದ್ದಾನೆ. ಈಗ ಅದು ಸಾಕಷ್ಟು ಜನರನ್ನು ಆಕರ್ಷಿಸುತ್ತಿದೆ.

ಈಗ ಇದು ಹಾರಾಟ ನಡೆಸದೆ ಇದ್ದರೂ ಸಹಿತ ಅದರ ವಿನ್ಯಾಸ ಮಾತ್ರ ಹೆಲಿಕಾಪ್ಟರ್ ರೀತಿಯೇ ಇದೆ. ಈಗ ಇದು ಚಾಪ್ರಾದ ಆಕರ್ಷಣೆ ಕೇಂದ್ರವಾಗಿದೆ. ಈ ಕಾರ್ ನ್ನು ಸಿದ್ದಪಡಿಸಿರುವ ವ್ಯಕ್ತಿ  24 ವರ್ಷದ ಮಿಥಿಲೇಶ್ ಪ್ರಸಾದ್ ವೃತ್ತಿಯಲ್ಲಿ ಪೈಪ್ ಫಿಟ್ಟರ್. ಬನಿಯಾಪುರದ ಸಿಮಾರಿ ಗ್ರಾಮದವರು ಎಂದು ತಿಳಿದು ಬಂದಿದೆ. ಹೆಲಿಕಾಪ್ಟರ್‌ನ ಮೂಲ ವಿನ್ಯಾಸ ವೈಶಿಷ್ಟ್ಯಗಳನ್ನು ಸೇರಿಸುವ ಮೂಲಕ ತಮ್ಮ ಟಾಟಾ ನ್ಯಾನೋ ಕಾರನ್ನು ಮಾರ್ಪಡಿಸಿದ್ದಾರೆ ಎನ್ನಲಾಗಿದೆ.

ಈ ಕಾರು ಹಾರಲು ಸಾಧ್ಯವಾಗದಿದ್ದರೂ, ಕೂಡ ಇದು ಸಾಂಪ್ರದಾಯಿಕ ಹೆಲಿಕಾಪ್ಟರ್ ತರಹದ ಮುಖ್ಯ ರೋಟರ್, ಟೈಲ್ ಬೂಮ್ ಮತ್ತು ಟೈಲ್ ರೋಟರ್ನ ವಿನ್ಯಾಸದ ವೈಶಿಷ್ಟ್ಯಗಳನ್ನು ಹೊಂದಿದೆ. ರೋಟರ್‌ಗಳು ಮತ್ತು ಸೈಡ್ ಪ್ಯಾನೆಲ್‌ಗಳಲ್ಲಿ ವರ್ಣರಂಜಿತ ಎಲ್‌ಇಡಿ ದೀಪಗಳನ್ನು ಅಳವಡಿಸಲಾಗಿದೆ.

ವಿನ್ಯಾಸವನ್ನು ಪೂರ್ಣಗೊಳಿಸಲು ಮಿಥಿಲೇಶ್ ಮತ್ತು ಅವರ ಸಹೋದರನಿಗೆ ಸುಮಾರು ಏಳು ತಿಂಗಳುಗಳು ಬೇಕಾದವು ಮತ್ತು ಹೆಚ್ಚುವರಿಯಾಗಿ ಇದಕ್ಕೆ ಏಳು ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದಾನೆ ಎನ್ನಲಾಗಿದೆ.12 ನೇ ತರಗತಿಯ ಪಾಸ್ ಆಗಿರುವ ಈ ಯುವಕ ಯಾವಾಗಲೂ ಹೆಲಿಕಾಪ್ಟರ್ಗಳನ್ನು ಮಾಡುವ ಕನಸು ಹೊಂದಿದ್ದನು. ಅದು ಹಾರದೆ ಇದ್ದರೂ ಸಹಿತ ಕನಿಷ್ಠ ಹೆಲಿಕಾಪ್ಟರ್ ರೀತಿ ಕಾಣುವಂತೆ ಸಿದ್ದಪಡಿಸಿಸುವುದು ಆತನ ಗುರಿಯಾಗಿತ್ತು ಎನ್ನಲಾಗಿದೆ.

ಈಗ ಈ ಹೆಲಿಕಾಪ್ಟರ್ ಕಾರ್ ವಿನ್ಯಾಸ ಕುರಿತು ಮಾತನಾಡಿರುವ ಮಿಥಿಲೇಶ್, 'ನಾನು ಹೆಲಿಕಾಪ್ಟರ್ ಅನ್ನು ಸ್ವಂತವಾಗಿ ನಿರ್ಮಿಸಿ ಅದರಲ್ಲಿ ಹಾರಾಟ ನಡೆಸುವುದು ಬಾಲ್ಯದಿಂದಲೂ ನನ್ನ ಕನಸಾಗಿತ್ತು. ಆದರೆ ನನಗೆ ಬಲವಾದ ಹಿನ್ನೆಲೆ ಇಲ್ಲ ಆದ್ದರಿಂದ ನನ್ನ ಕಾರನ್ನು ಹೆಲಿಕಾಪ್ಟರ್‌ನಂತೆ ಕಾಣುವಂತೆ ಮಾಡಿದೆ' ಎಂದು ಹೇಳಿದರು.