ನ್ಯೂಯಾರ್ಕ್: ಕಳೆದ ಒಂದು ವರ್ಷದಿಂದ ಹರಡುತ್ತಿರುವ ಕೋವಿಡ್ -19   (Covid-19) ಸೋಂಕು ನಿಲ್ಲುವ ಲಕ್ಷಣಗಳೇ ಗೋಚರಿಸುತ್ತಿಲ್ಲ.  ಕರೋನಾ ಲಸಿಕೆ ತಯಾರಿಸಲು ವಿಶ್ವಾದ್ಯಂತ ಹಲವು ದೇಶಗಳು ಪ್ರಯತ್ನ ಮುಂದುವರೆಸಿವೆ. ಆದರೆ ಇದೀಗ ವಿಜ್ಞಾನಿಗಳು ಕರೋನಾವನ್ನು ಕೇವಲ 24 ಗಂಟೆಗಳಲ್ಲಿ ಗುಣಪಡಿಸುವ  ಔಷಧಿಯೊಂದನ್ನು ಕಂಡುಹಿಡಿದಿದ್ದಾರೆ. ಏತನ್ಮಧ್ಯೆ, ಈ ಆಂಟಿ-ವೈರಲ್ ಔಷಧಿ  ಕೊರೊನಾ ಸೋಂಕನ್ನುಸಂಪೂರ್ಣವಾಗಿ ನಿರ್ಮೂಲನೆ ಮಾಡುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಔಷಧಿಗೆ  ಎಂಕೆ -4482 / ಇಐಡಿಡಿ -2801  ಎಂದು ಹೆಸರಿಡಲಾಗಿದೆ. ಇದನ್ನು ಸುಲಭ ಭಾಷೆಯಲ್ಲಿ ಮೊಲ್ನುಪಿರಾವಿರ್ ಎಂದೂ ಕರೆಯುತ್ತಾರೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- Corona ನಿಯಮ ಉಲ್ಲಂಘಿಸಿದ ನಾಗರಿಕನ ಪ್ರಾಣವನ್ನೇ ತೆಗೆಯಿಸಿದ Kim Jong Un


ಕೊರೊನಾ ಚಿಕಿತ್ಸೆಯಲ್ಲಿ ಗೇಮ್ ಚೆಂಜರ್ ಸಾಬೀತಾಗಲಿದೆ Molnupiravir
ಜರ್ನಲ್ ಆಫ್ ನೇಚರ್ ಮೈಕ್ರೋಬಯಾಲಜಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಮೊಲ್ನುಪಿರಾವೀರ್ ಕರೋನಾ ರೋಗಿಗಳಿಗೆ ಸೋಂಕು ಹರಡುವುದನ್ನು ತಡೆಯುವುದರ ಜೊತೆಗೆ ಅವರನ್ನು ಮುಂಬರುವ ಗಂಭೀರ ಕಾಯಿಲೆಯಿಂದಲೂ ಕೂಡ ರಕ್ಷಣೆ ನೀಡುತ್ತದೆ ಎನ್ನಲಾಗಿದೆ. ಔಷಧಿಯ ಕುರಿತು ಮಾಹಿತಿ ನೀಡಿರುವ ಈ ಅಧ್ಯಯನದ ಲೇಖಕ, ರಿಚರ್ಡ್ ಪ್ಲಂಪರ್, 'ಕರೋನಾ ಚಿಕಿತ್ಸೆಗೆ ಇದೇ ಮೊದಲ ಬಾರಿಗೆ ಬಾಯಿಯಿಂದ ಸೇವಿಸುವ ಔಷಧಿಯನ್ನು ಪ್ರಕಟಿಸಲಾಗುತ್ತಿದೆ. ಕರೋನಾ ಚಿಕಿತ್ಸೆಯಲ್ಲಿ ಎಂಕೆ -4482 / ಇಐಡಿಡಿ -2801 ಗೇಮ್ ಚೇಂಜರ್ ಸಾಬೀತಾಗಲಿದೆ ಎಂದು ಅವರು ಹೇಳಿದ್ದಾರೆ.


ಇದನ್ನು ಓದಿ- ನೀವೂ ನಿಮ್ಮ ಸಂಗಾತಿ/ಗರ್ಲ್ ಫ್ರೆಂಡ್ ಜೊತೆಗೆ ಸತತ ಜಗಳವಾಡುತ್ತೀರಾ? ಈ ವರದಿ ತಪ್ಪದೆ ಓದಿ


ಇನ್ಫ್ಲುಯೆಂಜಾ ಚಿಕಿತ್ಸೆಯಲ್ಲೂ ಪರಿಣಾಮಕಾರಿ
ಜಾರ್ಜಿಯಾ ಸ್ಟೇಟ್ ಯೂನಿವರ್ಸಿಟಿಯ ಸಂಶೋಧನಾ ತಂಡ ಈ ಔಷಧಿಯನ್ನು  ಕಂಡುಹಿಡಿದಿದೆ. ಆರಂಭಿಕ ಸಂಶೋಧನೆಯು ಈ ಔಷಧಿಯು  ಇನ್ಫ್ಲುಯೆಂಜಾ ತರಹದ ಮಾರಕ ಫ್ಲೂ ಗುಣಪಡಿಸುವಲ್ಲಿ ಪರಿಣಾಮಕಾರಿ ಸಾಬೀತಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. ಬಳಿಕ ಫೆರೆಟ್ ಮಾದರಿಯನ್ನು ಬಳಸಿ ಇದು SARS-CoV-2 ಸೋಂಕು ತಡೆಗಟ್ಟುವುದೇ ಎಂಬುದರ ಕುರಿತು ಸಂಶೋಧನೆ ನಡೆಸಲಾಯಿತು. ಈ ಸಂಶೋಧನೆಯನ್ನು ನಡೆಸಲು ಮೊದಲು ವಿಜ್ಞಾನಿಗಳು ಕೆಲವು ಪ್ರಾಣಿಗಳಿಗೆ ಕರೋನಾ ವೈರಸ್ ಸೋಂಕಿಗೆ ಗುರಿಯಾಯಿಸಿದರು. ಈ ಪ್ರಾಣಿಗಳು ಮೂಗಿನಿಂದ ವೈರಸ್ ಅನ್ನು ಹೊರಹಾಕಲು ಆರಂಭಿಸಿದ ತಕ್ಷಣ, ಅವರಿಗೆ ಎಂಕೆ -4482 / ಇಐಡಿಡಿ -2801 ಅಥವಾ ಮೊಲ್ನುಪಿರಾವೀರ್ ನೀಡಿ ನಂತರ ಅವುಗಳನ್ನು ಆರೋಗ್ಯಕರ ಪ್ರಾಣಿಗಳೊಂದಿಗೆ ಒಂದೇ ಪಂಜರದಲ್ಲಿ ಇರಿಸಲಾಯಿತು.


ಇದನ್ನು ಓದಿ- ಪ್ರಪಂಚದಲ್ಲಿ ಅತಿ ಹೆಚ್ಚು ಕೋವಿಡ್‌–19 ಲಸಿಕೆ ಖರೀದಿಸಿರುವ ರಾಷ್ಟ್ರ ಯಾವುದು ಗೊತ್ತಾ?


24 ಗಂಟೆಗಳಲ್ಲಿ ರೋಗಿಗಳು ಗುಣಮುಖರಾಗಲಿದ್ದಾರೆ
ಈ ಕುರಿತು ಹೇಳುವ ಅಧ್ಯಯನದ ಸಹ ಲೇಖಕ ಜೋಸೆಫ್ ಫಾಲ್ಫ್, ಸೋಂಕಿತ ಪ್ರಾಣಿಗಳೊಂದಿಗೆ ಇರಿಸಲಾದ ಯಾವುದೇ ಆರೋಗ್ಯಕರ ಪ್ರಾಣಿಗೆ ಈ ಸೋಂಕು ಹರಡಿಲ್ಲ ಎಂದು ಹೇಳಿದ್ದಾರೆ. ಇದೇ ರೀತಿ ಕೊರೊನಾ ಸೋಂಕಿತ ರೋಗಿಗಳಿಗೆ ಮೊಲ್ನುಪಿರಾವಿರ್ ಔಷಧಿಯನ್ನು ನೀಡಿದರೆ ರೋಗಿಗಳು ಕೇವಲ 24 ಗಂಟೆಗಳಲ್ಲಿ ಗುಣಮುಖರಾಗಲಿದ್ದಾರೆ ಎಂದು ಅವರು ಹೇಳಿದ್ದಾರೆ.