ನೀವೂ ನಿಮ್ಮ ಸಂಗಾತಿ/ಗರ್ಲ್ ಫ್ರೆಂಡ್ ಜೊತೆಗೆ ಸತತ ಜಗಳವಾಡುತ್ತೀರಾ? ಈ ವರದಿ ತಪ್ಪದೆ ಓದಿ

ಕರೋನವೈರಸ್ ನಿಂದ ಪಾರಾಗಲು ಪ್ರತಿಯೊಬ್ಬರೂ ಮಾಸ್ಕ್ ಮತ್ತು ಸ್ಯಾನಿಟೈಜರ್‌ಗಳನ್ನು ಬಳಸುತ್ತಿದ್ದಾರೆ ಮತ್ತು ವ್ಯಕ್ತಿಗತ ಅಂತರ ಪಾಲನೆಯಲ್ಲಿಯೂ ಕೂಡ ತೊಡಗಿದ್ದಾರೆ. ಸಂಶೋಧನೆಯ ಪ್ರಕಾರ, ಭಾರತೀಯರು ಕೆಲವು ಅಭ್ಯಾಸಗಳ ಅಜಾಗರೂಕತೆಯಿಂದ ಕರೋನಾ ವೈರಸ್‌ಗೆ ಗುರಿಯಾಗಬಹುದು ಎನ್ನಲಾಗಿದೆ. ಕರೋನವೈರಸ್ ಅಪಾಯವನ್ನು ಹೆಚ್ಚಿಸುವ 5 ಅಭ್ಯಾಸಗಳು ಇಲ್ಲಿವೆ.

Last Updated : Dec 5, 2020, 05:22 PM IST
  • ಕೊರೊನಾ ಸೋಂಕಿನಿಂದ ಪಾರಾಗುವುದು ಅವಶ್ಯಕ
  • ಸತತ ವ್ಯಾಜ್ಯ ಅಥವಾ ಜಗಳದಿಂದ ರೋಗ ಪ್ರತಿರೋಧಕ ಶಕ್ತಿ ಕುಂದುತ್ತದೆ.
  • ಈ 5 ಅಭ್ಯಾಸಗಳಿಂದ ಆದಷ್ಟು ದೂರವಿರಿ ಎಂದು ಸಂಶೋಧನೆ ಹೇಳುತ್ತವೆ.
ನೀವೂ ನಿಮ್ಮ ಸಂಗಾತಿ/ಗರ್ಲ್ ಫ್ರೆಂಡ್ ಜೊತೆಗೆ ಸತತ ಜಗಳವಾಡುತ್ತೀರಾ? ಈ ವರದಿ ತಪ್ಪದೆ ಓದಿ title=

ನವದೆಹಲಿ: ಕೊರೊನಾ ವೈರಸ್ ಪ್ರಕೋಪ ನಿಲ್ಲುವ ಲಕ್ಷಣಗಳೇ ಗೋಚರಿಸುತ್ತಿಲ್ಲ. ಭಾರತ ಸೇರಿದಂತೆ ವಿಶ್ವದಾದ್ಯಂತ ಲಕ್ಷಾಂತರ ಜನರ ಜೀವನವನ್ನು ಈ ಮಾರಕ ವೈರಸ್ ಕೊನೆಗೊಳಿಸಿದೆ. ಕರೋನಾ ಯುಗದಲ್ಲಿ, ಜನರು ತಮ್ಮ ಜೀವನದಲ್ಲಿ ಅನೇಕ ಹೊಸ ಅಭ್ಯಾಸಗಳನ್ನು ಅಳವಡಿಸಿಕೊಂಡಿದ್ದಾರೆ. ಭಾರತದ ಜನರು ಯಾವುದೇ ಪರಿಸರಕ್ಕೆ ಬೇಗನೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆದರೆ ನಮ್ಮ ಅನೇಕ ಅಭ್ಯಾಸಗಳು ಕರೋನಾ ಅವಧಿಯಲ್ಲಿ ಅಪಾಯಕಾರಿ ಎಂದು ಸಾಬೀತಾಗಿವೆ. 

ಮನುಷ್ಯರ ಈ ಅಭ್ಯಾಸಗಳ ಬಗ್ಗೆ ಹಲವು ಸಂಶೋಧನೆಗಳು ನಡೆದಿವೆ. ಇಂದು ನಾವು ಆ ಅಭ್ಯಾಸಗಳ ಬಗ್ಗೆ ನಿಮಗೆ ತಿಳಿಸುತ್ತೇವೆ, ಈ ಕಾರಣದಿಂದಾಗಿ ನೀವು ಅರಿವಿಲ್ಲದೆ ಕರೋನಾ ವೈರಸ್ (Coronavirus)‌ ಸೋಂಕಿಗೆ ಗುರಿಯಾಗಬಹುದು.

ಇದನ್ನು ಓದಿ- ಪ್ರಪಂಚದಲ್ಲಿ ಅತಿ ಹೆಚ್ಚು ಕೋವಿಡ್‌–19 ಲಸಿಕೆ ಖರೀದಿಸಿರುವ ರಾಷ್ಟ್ರ ಯಾವುದು ಗೊತ್ತಾ?

ಸಂಗಾತಿಯ ಮೇಲೆ ಆಪಾದನೆ ಹಾಗೂ ಕೋಪ
ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಒಂದು ಸಂಶೋಧನೆಯ ಪ್ರಕಾರ, ಪರಸ್ಪರ ಜಗಳವಾಡುವ ಮತ್ತು ಪರಸ್ಪರ ಆಪಾದನೆ ಮಾಡುವ ದಂಪತಿಗಳು ಕಡಿಮೆ ರೋಗನಿರೋಧಕ ಶಕ್ತಿಯನ್ನು ಹೊಂದಿರುತ್ತಾರೆ. ಅಲ್ಲದೆ, ಪರಸ್ಪರ ಪ್ರೀತಿಸುವ ದಂಪತಿಗಳು ಉತ್ತಮ ರೋಗನಿರೋಧಕ ಶಕ್ತಿಯನ್ನು ಹೊಂದಿರುತ್ತಾರೆ. ವ್ಯಂಗ್ಯ ಮತ್ತು ಜಗಳವಾಡುವವರ ದೇಹದಲ್ಲಿ ನಕಾರಾತ್ಮಕ ಶಕ್ತಿ ಇರುತ್ತದೆ. ಇದು ದೇಹದಲ್ಲಿ ಇರುವ ಟಿ-ಸೆಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇಂತಹ ಜನರು ಕೊರೊನಾ ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಇದನ್ನು ಓದಿ- ರಾಜ್ಯದಲ್ಲಿ ಕೋವಿಡ್ 2ನೇ ಅಲೆ ಬರುತ್ತಿದೆ, ಮುಂದಿನ 45 ದಿನ ಹುಷಾರಾಗಿರಬೇಕು!

ತಡರಾತ್ರಿವರೆಗೆ ಎಚ್ಚರದಿಂದಿರುವುದು
ಚಿಕಾಗೊ ವಿಶ್ವವಿದ್ಯಾಲಯದ ಅಧ್ಯಯನದ ಪ್ರಕಾರ, ತಡರಾತ್ರಿಯವರೆಗೆ  ಎಚ್ಚರದಿಂದಿದ್ದು, ಬೆಳಗ್ಗೆ ಬೇಗ ಏಳುವ ಜನರು ಕರೋನವೈರಸ್ ಸೋಂಕಿಗೆ ಸಿಲುಕಿಕೊಳ್ಳುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ. ನಿದ್ರೆಯ ಕೊರತೆಯಿಂದಾಗಿ, ಅಂತಹ ಜನರ ರೋಗಪ್ರತಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ಅಧ್ಯಯನದ ಪ್ರಕಾರ, 7-8 ಗಂಟೆಗಳ ಕಾಲ ಮಲಗುವ ಜನರಲ್ಲಿ ಉತ್ತಮ ರೋಗನಿರೋಧಕ ಶಕ್ತಿ ಇರುತ್ತದೆ. ಕಡಿಮೆ ನಿದ್ರೆ ಮಾಡುವ ಜನರು ಬೇಗ ಕೊರೊನಾ ಸೋಂಕಿಗೆ ಗುರಿಯಾಗುವ ಸಾಧ್ಯತೆ ಇದೆ.

ಇದನ್ನು ಓದಿ-ಬಹುತೇಕ ಎಲ್ಲಾ COVID-19 ರೋಗಿಗಳಲ್ಲೂ ಪ್ರತಿಕಾಯ ಅಭಿವೃದ್ಧಿ : WHO

ಸತತ ಕೆಲಸ ಮಾಡುವುದು ನಿಮ್ಮ ಪಾಲಿಗೆ ದುಬಾರಿಯಾಗಬಹುದು
ಒಂದು ವೇಳೆ ನೀವು ಬಿಡುವಿಲ್ಲದೆ ಕೆಲಸ ಮಾಡಿದರೆ, ಅದು ನಿಮ್ಮ ಪಾಲಿಗೆ ಅಪಾಯಕಾರಿ ಸಾಬೀತಾಗಬಹುದು. ಸತತ ಕೆಲಸ ಮಾಡುವುದರಿಂದ ದೇಹದ ರೋಗನಿರೋಧಕ ಶಕ್ತಿ ಕುಂದುತ್ತದೆ. ಇದರಿಂದಲೂ ಕೂಡ ನಿಮಗೆ ಕೊರೊನಾ ಸೋಂಕು ತಗಲುವ ಸಾಧ್ಯತೆ ಇದೆ.

ಇದನ್ನು ಓದಿ- ಕೊರೊನಾ ಲಸಿಕೆಯನ್ನು ಮೊದಲು ೧ ಕೋಟಿ ಆರೋಗ್ಯ ಕಾರ್ಯಕರ್ತರಿಗೆ ನೀಡಲಾಗುವುದು- ಕೇಂದ್ರ ಸರ್ಕಾರ

ನಕಾರಾತ್ಮಕ ಯೋಚನೆ
ಕೊರೊನಾ ಕಾಲದಲ್ಲಿ ನಕಾರಾತ್ಮಕ ಯೋಚನೆ ನಿಮಗೆ ಭಾರೀ ಬೀಳುವ ಸಾಧ್ಯತೆ ಇದೆ. ನಕಾರಾತ್ಮಕ ಯೋಚನೆ ಶರೀರದಲ್ಲಿರುವ ಟಿ-ಸೆಲ್ ಗಳ ಸಂಖ್ಯೆಯನ್ನು ಹೆಚ್ಚಿಸುತ್ತವೆ. ಇದರಿಂದ ಶರೀರ ರೋಗದ ವಿರುದ್ಧ ಹೋರಾಡುವ ಶಕ್ತಿಯನ್ನು ಕಳೆದುಕೊಳ್ಳುತ್ತದೆ. 

ಇದನ್ನು ಓದಿ-ಶಾಲೆಗಳು ತೆರೆಯಲಿವೆ! ದೇಶಾದ್ಯಂತ ಶಾಲೆಗಳನ್ನು ತೆರೆಯಲು ನಡೆದಿದೆಯೇ ಸಿದ್ಧತೆ, ಇದನ್ನು ಓದಿ

ಆಂಟಿ-ಬಯೋಟಿಕ್ ಗಳ ಮೇಲೆ ಹೆಚ್ಚು ಅವಲಂಭಿಸಬೇಡಿ
ಆವಶ್ಯಕ ಎನಿಸಿದಾಗ ಮಾತ್ರ ಆಂಟಿ-ಬಯೋಟಿಕ್ ಮಾತ್ರೆಗಳನ್ನು ಸೇವಿಸಿ. ಸಾಮಾನ್ಯ ಕಾಯಿಲೆ ಇದ್ದಾಗಲೂ ಕೂಡ ಒಂದು ವೇಳೆ ನೀವು ಆಂಟಿ-ಬಯೋಟಿಕ್ ಮಾತ್ರೆ ಸೇವಿಸಿದರೆ ಇದು ಅಪಾಯದ ಸಂಕೇತ. ಸಂಶೋಧನೆಯೊಂದರ ಪ್ರಕಾರ ಆಂಟಿ-ಬಯೋಟಿಕ್ ಮಾತ್ರೆ ಸೇವನೆಯಿಂದ ಶರೀರದಲ್ಲಿರುವ ನೈಸರ್ಗಿಕ ರೋಗಪ್ರತಿರೋಧಕ ಶಕ್ತಿ ಕುಂದುತ್ತದೆ ಹಾಗೂ ವ್ಯಕ್ತಿ ಬೇಗ ಕೊರೊನಾ ವೈರಸ್ ದಾಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ.

Trending News