Gold Price Today: ಸರಾಫ್ ಮಾರುಕಟ್ಟೆಯಲ್ಲಿ ಚಿನ್ನಾಭರಣ ಬೆಲೆಯಲ್ಲಿ ಭಾರಿ ಇಳಿಕೆ, ಬೆಳ್ಳಿ ಬೆಲೆ ಕೂಡ ಕೆ.ಜಿಗೆ ರೂ.3000 ರಷ್ಟು ಇಳಿಕೆ

ಎರಡು ದಿನಗಳಿಂದ ವೇಗ ಪಡೆದುಕೊಳ್ಳುತ್ತಿದ್ದ ಚಿನ್ನದ ಬೆಲೆಗೆ ಇಂದು ಮತ್ತೆ ಬ್ರೇಕ್ ಬಿದ್ದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾದ ಕಾರಣ ದೇಸಿ ಮಾರುಕಟ್ಟೆಯಲ್ಲಿಯೂ ಕೂಡ ಚಿನ್ನದ ಬೆಲೆ ಬೆಲೆ (Gold Price Today) ಮತ್ತೆ ಇಳಿಕೆಯಾಗಿದೆ.

Last Updated : Aug 19, 2020, 06:44 PM IST
Gold Price Today: ಸರಾಫ್ ಮಾರುಕಟ್ಟೆಯಲ್ಲಿ ಚಿನ್ನಾಭರಣ ಬೆಲೆಯಲ್ಲಿ ಭಾರಿ ಇಳಿಕೆ, ಬೆಳ್ಳಿ ಬೆಲೆ ಕೂಡ ಕೆ.ಜಿಗೆ ರೂ.3000 ರಷ್ಟು ಇಳಿಕೆ title=

ನವದೆಹಲಿ: ಎರಡು ದಿನಗಳಿಂದ ವೇಗ ಪಡೆದುಕೊಳ್ಳುತ್ತಿದ್ದ ಚಿನ್ನದ ಬೆಲೆಗೆ ಇಂದು ಮತ್ತೆ ಬ್ರೇಕ್ ಬಿದ್ದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾದ ಕಾರಣ ದೇಸಿ ಮಾರುಕಟ್ಟೆಯಲ್ಲಿಯೂ ಕೂಡ ಚಿನ್ನದ ಬೆಲೆ (Gold Price Today) ಮತ್ತೆ ಇಳಿಕೆಯಾಗಿದೆ. ಬುಧವಾರ ದೆಹಲಿಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಮ್ ಗೆ ರೂ.600 ಕ್ಕಿಂತಲೂ ಹೆಚ್ಚು ಇಳಿಕೆ ಕಂಡಿದೆ. ಇದೆ ವೇಳೆ ಬೆಳ್ಳಿಯ ಬೆಲೆಯಲ್ಲಿಯೂ ಕೂಡ ರೂ.3000 ಕ್ಕಿಂತ ಅಧಿಕ ಇಳಿಕೆಯಾಗಿದೆ.

10 ಗ್ರಾಂ ಚಿನ್ನದ ನೂತನ ಬೆಲೆ
ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಪ್ರಕಾರ, ದೆಹಲಿ ಬುಲಿಯನ್ ಮಾರುಕಟ್ಟೆಯಲ್ಲಿ ಶೇ 99.9 ರಷ್ಟು ಶುದ್ಧ ಚಿನ್ನದ ಬೆಲೆ 10 ಗ್ರಾಂಗೆ 54,909 ರೂ.ಗಳಿಂದ- 54,269 ರೂ.ಗೆ ಕುಸಿದಿದೆ. ಅಂದರೆ 10 ಗ್ರಾಂ.ಗೆ 640 ರೂ.ಗಳಷ್ಟು ಕುಸಿತ ಕಂಡಿದೆ. ಇದೇ ವೇಳೆ  ಮುಂಬೈನಲ್ಲಿ ಶೇಕಡಾ 99.9 ರಷ್ಟು ಚಿನ್ನದ ಬೆಲೆ ಹತ್ತು ಗ್ರಾಂ.ಗೆ 53,424 ರೂ.ಗೆ ಇಳಿಕೆಯಾಗಿದೆ.

ಬೆಲೆ ಕುಸಿತಕ್ಕೆ ಕಾರಣ ಏನು?
ಈ ಕುರಿತು ವಿಶ್ಲೇಷಣೆ ನಡೆಸಿರುವ ತಜ್ಞರು, ಅಮೇರಿಕನ್ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯ ಬಲವರ್ಧನೆಯ ಹಿನ್ನೆಲೆ ಚಿನ್ನದ ಬೆಲೆಯಲ್ಲಿ ಇಳಿಕೆಯನ್ನು ಗಮನಿಸಲಾಗಿದೆ ಎಂದಿದ್ದಾರೆ. ಮಂಗಳವಾರ ದೆಹಲಿಯ ಬುಲಿಯನ್ ಮಾರುಕಟ್ಟೆಯಲ್ಲಿ ಪ್ರತಿ 10 ಗ್ರಾಂ ಶೇ. 99.9ರಷ್ಟು ಚಿನ್ನದ ಬೆಲೆ 53,674 ರೂ.ಗಳಿಂದ ಏರಿಕೆಯಾಗಿ ರೂ.54,856ಗೆ ತಲುಪಿತ್ತು.

1 ಕೆ.ಜಿ ಚಿನ್ನದ ಬೆಲೆಯ ಹೊಸ ಬೆಲೆ
ಬುಧವಾರ ಚಿನ್ನದ ಬೆಲೆಗಿಂತ ಹೆಚ್ಚು ಬೆಳ್ಳಿ ಬೆಲೆಯಲ್ಲಿ ಹೆಚ್ಚು ಇಳಿಕೆಯಾಗಿದೆ. ದೆಹಲಿ ಬುಲಿಯನ್ ಮಾರುಕಟ್ಟೆಯಲ್ಲಿ  ಒಂದು ಕೆ.ಜಿ. ಚಿನ್ನದ ಬೆಲೆ ರೂ. 72,562 ನಿಂದ ಇಳಿಕೆಯಾಗಿ ರೂ.69, 450ಕ್ಕೆ ಬಂದು ತಲುಪಿದೆ. ಅಂದರೆ, ಬೆಳ್ಳಿ ಬೆಲೆಯಲ್ಲಿ ಕೆ.ಜಿ ಹಿನ್ನೆಲೆ ರೂ.3,112 ಗಳಷ್ಟು ಇಳಿಕೆಯಾಗಿದೆ.

Trending News