ನವದೆಹಲಿ: ಕೊರೊನಾ ವೈರಸ್ ಸಂಕಷ್ಟ ಹಾಗೂ ಲಾಕ್ ಡೌನ್ ಹಿನ್ನೆಲೆ ಹಲವು ಜನರು ತಮ್ಮ ಕೆಲಸವನ್ನು ಕಳೆದುಕೊಂಡಿದ್ದಾರೆ. ಒಂದು ವೇಳೆ ನೀವೂ ಕೂಡ ನೌಕರಿ ಕಳೆದುಕೊಂಡ ಕಾರಣ ಸಂಕಷ್ಟ ಎದುರಿಸುತ್ತಿದ್ದರೆ ಹಾಗೂ ಹಣ ಸಂಪಾದನೆಗಾಗಿ ಪರದಾಡುತ್ತಿದ್ದಾರೆ ಭಯ ಪಡುವ ಅವಶ್ಯಕತೆ ಇಲ್ಲ. ನೀವು ಪಾರ್ಟ್ ಟೈಮ್ ಅರ್ನಿಂಗ್ ಗಾಗಿ ಡಿಜಿಟಲ್ ಪ್ಲಾಟ್ಫಾರ್ಮ್ ಗಳ ನೆರವು ಪಡೆಯಬಹುದಾಗಿದೆ. ಹಾಗೆ ನೋಡಿದರೆ ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಅರ್ನಿಂಗ್ ಗೆ ತುಂಬಾ ಕ್ರೇಜ್ ಇದೆ. ನಿಮ್ಮ ಬಳಿ ಟ್ಯಾಲೆಂಟ್ ಇದ್ದರೆ ನೀವು ಮನೆಯಿಂದಲೇ ಕುಳಿತು ಈ ಪ್ಲಾಟ್ ಫಾರ್ಮ್ ಗಳ ಬಳಕೆ ಮಾಡಿ ಹಣ ಗಳಿಕೆ ಮಾಡಬಹುದು. ಇಂದಿನ ಕಾಲದಲ್ಲಿ ಆನ್ಲೈನ್ ಗಳಿಕೆಗಾಗಿ ನಿಮ್ಮ ಬಳಿ ಹಲವು ಆಪ್ಶನ್ ಗಳಿವೆ.
ವರ್ಚ್ಯುವಲ್ ಅಸಿಸ್ಟೆಂಟ್ ನೌಕರಿ
ಇತ್ತೀಚಿನ ದಿನಗಳಲ್ಲಿ, ಅನೇಕ ಕಂಪನಿಗಳು ವರ್ಚುವಲ್ ಸಹಾಯಕರನ್ನು ನೇಮಿಸಿಕೊಳ್ಳುತ್ತಿವೆ. ವರ್ಚುವಲ್ ಅಸಿಸ್ಟೆಂಟ್‌ನ ಕೆಲಸವು ಕಚೇರಿಯಲ್ಲಿರುವ ವೈಯಕ್ತಿಕ ಸಹಾಯಕ ನಂತಿದೆ. ಇದರಲ್ಲಿ ಹಲವು ಆಡಳಿತಾತ್ಮಕ ಕಾರ್ಯಗಳಿರುತ್ತವೆ. ಉದಾಹರಣೆಗೆ ಸಭೆಗಳನ್ನು ನಿಗದಿಪಡಿಸುವುದು, ಫೋನ್ ಕರೆಗಳನ್ನು ನಿರ್ವಹಿಸುವುದು , ಡೇಟಾ ಪ್ರವೇಶ ಮತ್ತು ಇತರೆ ಕಾರ್ಯಗಳು ಇದರಲ್ಲಿ ಶಾಮೀಲಾಗಿವೆ. ಇದರಲ್ಲಿ, ಆಡಳಿತಾತ್ಮಕ ಕೆಲಸದ ಅನುಭವ ಹೊಂದಿರುವ ಜನರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ವರ್ಚುವಲ್ ಸಹಾಯಕರಿಗೆ ಉತ್ತಮ ಸಂವಹನ ಕೌಶಲ್ಯಗಳು ಬಹಳ ಮುಖ್ಯ. ಕಚೇರಿ ಸಮಯಕ್ಕೆ ಅನುಗುಣವಾಗಿ ನಿಮ್ಮ ಹಾಜರಾತಿ ಇಲ್ಲಿ ಪ್ರಮುಖವಗಿರುತ್ತದೆ. ವರ್ಚುವಲ್ ಸಹಾಯಕರು ತಮ್ಮ ವ್ಯವಹಾರದಲ್ಲಿ ಸಹಾಯ ಮಾಡಲು ಗ್ರಾಹಕರೊಂದಿಗೆ ಕೆಲಸ ಮಾಡುತ್ತಾರೆ. ವರ್ಚುವಲ್ ಅಸಿಸ್ಟೆಂಟ್ ಉದ್ಯೋಗಗಳಿಗಾಗಿ ನೀವು Elance.Com, Zirtual.com, ಬೆಲೆಯ್ (https://belaysolutions.com), ಫ್ಯಾನ್ಸಿಹ್ಯಾಂಡ್ಸ್ (https://www.fancyhands.com) ನಂತಹ ತಾಣಗಳಿಗೆ ನೀವು ಭೇಟಿ ನೀಡಬಹುದಾಗಿದೆ.
ಫ್ರೀಲಾನ್ಸ್ ಬರವಣಿಗೆಯ ಜಾಬ್ ಗಳು
ಕೊರೊನಾ ಕಾಲದಲ್ಲಿ ಬಹಳಷ್ಟು ಬಳಕೆದಾರರು ಮನೆಯಿಂದಲೇ ಕೆಲಸ ನಿರ್ವಹಿಸುವ ನೌಕರಿಯನ್ನುಹುಡುಕುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಟ್ಯಾಲೆಂಟ್ ಇರುವವರಿಗೆ ಫ್ರೀ ಲಾನ್ಸ್ ಜಾಬ್ ಹುಡುಕಾಟ ಕಷ್ಟದ ಕೆಲಸವೇನಲ್ಲ. ಕಂಟೆಂಟ್ ರೈಟಿಂಗ್ ನಲ್ಲಿ ಒಂದು ವೇಳೆ ನೀವು ಪರಿಣಿತಿಯನ್ನು ಹೊಂದಿದ್ದರೆ, https://www.contena.co),(https://allfreelancewriting.com),(https://publoft.com) ತಾಣಗಳಿಗೆ ಭೇಟಿ ನೀಡಿ ಫ್ರೀಲಾನ್ಸ್ ಕೆಲಸ ಮಾಡಬಹುದಾಗಿದೆ. ಬೇರೆ ಫೀಲ್ಡ್ ಗೆ ಸಂಬಂಧಿಸಿದ ಫ್ರೀಲಾನ್ಸ್ ಕೆಲಸದ ಹುಡುಕಾಟದಲ್ಲಿದ್ದರೆ, (Outfiverr.com), ( upwork.com),( freelancer.com), (worknhire.com), (www.flexjobs.com), (www.cloudpeeps.com), (www.peopleperhour.com) ಗಳಂತಹ ಸೈಟ್ ಗಳಿಗೆ ಭೇಟಿ ನೀಡುವ ಮೂಲಕ ಕೆಲಸದ ಹುಡುಕಾಟ ನಡೆಸಬಹುದು.