COVID-19 ಒಂದೇ ತಿಂಗಳಲ್ಲಿ ಭಾರೀ ಬದಲಾದ ಭಾರತ, ಶೀಘ್ರವೇ ಇಟಲಿಯನ್ನು ಮೀರಿಸುವ ಸಾಧ್ಯತೆ
ಒಂದೇ ದಿನ 2 ಸ್ಥಾನ ಜಿಗಿದು COVID 19 ಪೀಡಿತರ ಪಟ್ಟಿಯಲ್ಲಿ ಜಾಗತಿಕವಾಗಿ 7ನೇ ಸ್ಥಾನಕ್ಕೇರಿದ ಭಾರತ
ನವದೆಹಲಿ: ಮಹಾಮಾರಿ ಕೋವಿಡ್ -19 (Covid-19) ಅನ್ನು ಭಾರತ ಸರಿಯಾದ ರೀತಿಯಲ್ಲಿ ನಿರ್ವಹಿಸಲಿಲ್ಲ. COVID 19 ವೈರಸ್ ಪೀಡಿತರು ಬಹಳ ಕಡಿಮೆ ಇದ್ದಾಗ ಲಾಕ್ಡೌನ್ ಜಾರಿ ಮಾಡಿ ದೇಶದ ಜನಕ್ಕೆ ತೊಂದರೆ ನೀಡಿ ಕೊರೋನಾ ಪೀಡಿತರ ಸಂಖ್ಯೆ ವ್ಯಾಪಕವಾಗಿ ಹರಡುತ್ತಿದ್ದಾಗ ಲಾಕ್ಡೌನ್ (Lockdown) ನಿಯಮಗಳನ್ನು ಸಡಿಲಗೊಳಿಸಿ ಕೇಂದ್ರ ಸರ್ಕಾರ ತಪ್ಪು ಮಾಡಿತು ಎಂಬುದು ನಿಧಾನಕ್ಕೆ ಸಾಬೀತಾಗುತ್ತಿದೆ. ಲಾಕ್ಡೌನ್ ಎನ್ನುವುದು ನೆಪಮಾತ್ರಕ್ಕೆ ಇದ್ದು COVID 19 ವೈರಸ್ ಹರಡುವಿಕೆ ಶರವೇಗದಲ್ಲಿ ಸಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ COVID 19 ವೈರಸ್ ವ್ಯಾಪಕವಾಗಿ ಹೆಚ್ಚಾಗುತ್ತಿರುವ ಪಟ್ಟಿಯಲ್ಲಿ ಭಾರತ ಈಗ 7ನೇ ಸ್ಥಾನಕ್ಕೆ ಏರಿದೆ.
ಭಾನುವಾರ ಒಂದೇ ದನ 7 ಸಾವಿರಕ್ಕೂ ಹೆಚ್ಚು ಕರೋನವೈರಸ್ (Coronavirus) COVID 19 ವೈರಸ್ ಹರಡಿದ ಪ್ರಕರಣಗಳು ವರದಿಯಾಗಿದೆ. ಇದರಿಂದ 9ನೇ ಸ್ಥಾನದಲ್ಲಿದ್ದ ಭಾರತ ಒಂದೇ ದಿನ ಅಂತಾರಾಷ್ಟ್ರೀಯ ಮಟ್ಟದಲ್ಲಿ COVID 19 ವೈರಸ್ ವ್ಯಾಪಕವಾಗಿ ಹೆಚ್ಚಾಗುತ್ತಿರುವ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದ ಜರ್ಮನಿ (Germany) ಮತ್ತು 7ನೇ ಸ್ಥಾನದಲ್ಲಿದ್ದ ಫ್ರಾನ್ಸ್ (France) ಅನ್ನು ಹಿಂದಿಕ್ಕಿದೆ. ಸದ್ಯ 'COVID 19 ವೈರಸ್ ಚೆಕ್ಕರ್' ಆದ 'ವರ್ಲ್ಡೋಮೀಟರ್' ವೆಬ್ ಸೈಟ್ ಪ್ರಕಾರ 7ನೇ ಸ್ಥಾನದಲ್ಲಿರುವ ಭಾರತದ COVID 19 ವೈರಸ್ ಪೀಡಿತರ ಸಂಖ್ಯೆ 190,609. 8ನೇ ಸ್ಥಾನದಲ್ಲಿರುವ ಫ್ರಾನ್ಸಿನ COVID 19 ವೈರಸ್ ಪೀಡಿತರ ಸಂಖ್ಯೆ 188,882. 9ನೇ ಸ್ಥಾನದಲ್ಲಿರುವ ಜರ್ಮನಿಯ COVID 19 ವೈರಸ್ ಪೀಡಿತರ ಸಂಖ್ಯೆ 183,494.
ಇದಲ್ಲದೆ ಕಳೆದೆರಡು ದಿನದಿಂದ ಪ್ರತಿನಿತ್ಯ 8 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದು ಭಾರತದ COVID 19 ವೈರಸ್ ಪೀಡಿತರ ಸಂಖ್ಯೆ 2ಲಕ್ಷದ ಗಡಿ ಸಮೀಪ ಬಂದಿದೆ. 'ವರ್ಲ್ಡೋಮೀಟರ್' ವೆಬ್ ಸೈಟ್ ಪ್ರಕಾರ ಸದ್ಯ ಭಾರತದ COVID 19 ವೈರಸ್ ಪೀಡಿತರ ಸಂಖ್ಯೆ 190,609ಕ್ಕೆ ಏರಿಕೆಯಾಗಿದೆ.
ಭಾರತ ಈ ಮೊದಲು COVID 19 ವೈರಾಣು ಪೀಡಿತರ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿದ್ದ ಚೀನಾ (China)ವನ್ನು ಹಿಂದಿಕ್ಕಿ 11ನೇ ಸ್ಥಾನಕ್ಕೆ ಬಂದಿತ್ತು. ಬಳಿಕ ಇರಾನ್ (Iran) ಅನ್ನು ಹಿಂದಿಕ್ಕಿ 10ನೇ ಸ್ಥಾನಕ್ಕೆ ಬಂದಿತ್ತು. ಮೇ 28ರಂದು ಟರ್ಕಿ (Turkey)ಯನ್ನು ಹಿಂದಿಕ್ಕಿ 9ನೇ ಸ್ಥಾನಕ್ಕೆ ಬಂದಿತ್ತು. ಈಗ ಮೇ 31ರಂದು ಒಂದೇ ದಿಮ 8ನೇ ಸ್ಥಾನದಲ್ಲಿದ್ದ ಜರ್ಮನಿಯನ್ನು ಮತ್ತು 7ನೇ ಸ್ಥಾನದಲ್ಲಿದ್ದ ಫ್ರಾನ್ಸ್ ದೇಶವನ್ನು ಹಿಂದೂಡಿದೆ.
ಇದಕ್ಕೂ ಮೊದಲು ಮೇ 6ರಿಂದ 3 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಕಾಣಿಸಿಕೊಂಡಿದ್ದವು. ಮೇ 10ರಿಂದ 4 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದವು. ಮೇ17ರಿಂದ 5 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾದವು. ಈಗ ಮೇ 21ರಿಂದ 6 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಗೋಚರಿಸಿದ್ದವು. ಮೇ 28ರಿಂದ 7 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದವು. ಮೇ 30ರಿಂದ 8 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಕಂಡುಬರುತ್ತಿವೆ.
ಇನ್ನು ಪ್ರತಿದಿನ ಭಾರತದ ಕೇಂದ್ರ ಆರೋಗ್ಯ ಇಲಾಖೆ ಪ್ರಕಟಿಸುವ ಮಾಹಿತಿಗಳ ಪ್ರಕಾರ ಮೇ 6ರಿಂದ ಈವರೆಗಿನ ಚಿತ್ರಣ ಹೀಗಿದೆ...
ಮೇ 6ರಂದು 3,561,
ಮೇ 7ರಂದು 3,390,
ಮೇ 8ರಂದು 3,320,
ಮೇ 9ರಂದು 3,277,
ಮೇ 10ರಂದು 4,213,
ಮೇ 11ರಂದು 3,064,
ಮೇ 12ರಂದು 3,525,
ಮೇ 13ರಂದು 3,722,
ಮೇ 14ರಂದು 3,967,
ಮೇ 15ರಂದು 3,970,
ಮೇ 16ರಂದು 4,987,
ಮೇ 17ರಂದು 5,242,
ಮೇ 18ರಂದು 4,970,
ಮೇ 19ರಂದು 5,611,
ಮೇ 20ರಂದು 5,609,
ಮೇ 21ರಂದು 6,088,
ಮೇ 22ರಂದು 6,654,
ಮೇ 23ರಂದು 6,767,
ಮೇ 24ರಂದು 6,977,
ಮೇ 25ರಂದು 6,535,
ಮೇ 26ರಂದು 6,387,
ಮೇ 27ರಂದು 6,566,
ಮೇ 28ರಂದು 7,466,
ಮೇ 29ರಂದು 7,964,
ಮೇ 30ರಂದು 8,380.
COVID 19 ವೈರಸ್ ಚೆಕ್ಕರ್' ಆದ 'ವರ್ಲ್ಡೋಮೀಟರ್' ವೆಬ್ ಸೈಟ್ ಪ್ರಕಾರ ಮೇ 31ರಂದು 8,782 ಪ್ರಕರಣಗಳು ವರದಿಯಾಗಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ COVID 19 ವೈರಸ್ ವ್ಯಾಪಕವಾಗಿ ಹೆಚ್ಚಾಗುತ್ತಿರುವ ಪಟ್ಟಿಯಲ್ಲಿ ಸದ್ಯ 6ನೇ ಸ್ಥಾನದಲ್ಲಿರುವು ಇಟಲಿ. ಇಟಲಿ (Italy)ದೇಶದ COVID 19 ವೈರಸ್ ಸಂಖ್ಯೆ 232,997. ಆದರೀಗ ಇಟಲಿಯಲ್ಲಿ COVID 19 ವೈರಸ್ ಹರಡುವಿಕೆ ಕಮ್ಮಿಯಾಗಿದೆ. ಭಾರತದಲ್ಲಿ ಪ್ರತಿನಿತ್ಯ 8 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಕಂಡುಬರುತ್ತಿದೆ. ಆದುದರಿಂದ ಶೀಘ್ರವೇ ಭಾರತ ಇಟಲಿಯನ್ನೂ ಹಿಂದಿಕ್ಕಿ 6ಸ್ಥಾನಕ್ಕೇರಿದರೆ ಆಶ್ಚರ್ಯವಿಲ್ಲ.